T20 ವಿಶ್ವಕಪ್: ಭಾರತ-ಪಾಕಿಸ್ತಾನ ಪಂದ್ಯ ಹಿನ್ನಲೆ, ಜಾಹೀರಾತು ದರ ದುಪ್ಪಟ್ಟು ಏರಿಕೆ!

ಐಸಿಸಿ ಟಿ20 ವಿಶ್ವಕಪ್‌ನ ಪಂದ್ಯಗಳು ಈಗಾಗಲೇ ಪ್ರಾರಂಭವಾಗಿವೆ. ಆದ್ರೆ ಅತ್ಯಂತ ಹೈವೋಲ್ಟೇಜ್ ಪಂದ್ಯಕ್ಕೆ ಚಾಲನೆ ಸಿಕ್ಕರಷ್ಟೇ ವಿಶ್ವಕಪ್‌ಗೆ ಮತ್ತಷ್ಟು ಮೆರಗು ಸಿಗಲಿದೆ. ಹೌದು ಸಾಂಪ್ರದಾಯಿಕ ಎದುರಾಳಿಗಳಾದ, ಕ್ರಿಕೆಟ್ ಲೋಕದ ಅತಿ ಹೆಚ್ಚು ವೀಕ್ಷಣೆಗಾರರನ್ನು ಕಬಳಿಸುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.
ಅಕ್ಟೋಬರ್ 23ರಂದು ಭಾನುವಾರ ಕೇವಲ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಟಿವಿ ಮುಂದೆ ಕುಳಿತುಕೊಳ್ಳಲಿದ್ದಾರೆ. ಏಕೆಂದರೆ ಕ್ರಿಕೆಟ್ ಲೋಕದ ಅತ್ಯಂತ ಡೆಡ್ಲಿ ಫೈಟ್ ಎಂದೇ ಗುರುತಿಸಿಕೊಂಡಿರುವ ಭಾರತ-ಪಾಕ್ ಕಣಕ್ಕಿಳಿಯುತ್ತಿವೆ. ಹೀಗಾಗಿ ವೀಕ್ಷಕರ ಸಂಖ್ಯೆಯು ಮಿಲಿಯನ್‌ಗಟ್ಟಲೆ ಇರಲಿದ್ದು, ಜಾಹೀರಾತು ದರ ಕೂಡ ದುಪ್ಪಟ್ಟಾಗಿದೆ.

ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ನಡೆಯಲಿದೆ ಭಾರತ-ಪಾಕ್ ಫೈಟ್
ಮೆಲ್ಬರ್ನ್‌ನ ಐತಿಹಾಸಿಕ ಎಂಸಿಜಿ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಐಸಿಸಿ ಟಿ20 ವಿಶ್ವಕಪ್ 2021ರ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾ ಮತ್ತೆ ಐಸಿಸಿ ಟೂರ್ನಿಯಲ್ಲಿ ಪಾಕ್ ತಂಡವನ್ನ ಎದುರಿಸುತ್ತಿದೆ. ಇದಕ್ಕೂ ಮುನ್ನ ಏಷ್ಯಾಕಪ್ 2022ರಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ತಲಾ ಒಂದು ಗೆಲುವು ಹಾಗೂ ಸೋಲನ್ನ ಅನುಭವಿಸಿತ್ತು.
ಭಾರತ ಮತ್ತು ಪಾಕಿಸ್ತಾನ ಎಂಸಿಜಿಯಲ್ಲಿ ಕಣಕ್ಕಿಳಿಯುವ ಮೂಲಕ ತಮ್ಮ ವಿಶ್ವಕಪ್ ಅಭಿಯಾನ ಆರಂಭಿಸಲಿವೆ. ಹೀಗಾಗಿ ಗೆಲುವಿನ ಶುಭಾರಂಭ ಮಾಡುವುದು ಉಭಯ ತಂಡಗಳ ಗುರಿಯಾಗಿದೆ. ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯದ ಫಲಿತಾಂಶವು ಮಹತ್ವವಾಗಿದ್ದು, ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ.

ಭಾರತ-ಪಾಕ್ ಪಂದ್ಯವು ಹಿಂದಿನ ಎಲ್ಲಾ ವೀಕ್ಷಣೆ ದಾಖಲೆ ಅಳಿಸಿಹಾಕಲಿದೆ: ರವಿಶಾಸ್ತ್ರಿ
ಟೀಂ ಇಂಡಿಯಾ ಮಾಜಿ ಕೋಚ್ ಹಾಗೂ ವೀಕ್ಷಣೆ ವಿವರಣೆಗಾರ ರವಿಶಾಸ್ತ್ರಿ ಭಾರತ-ಪಾಕ್ ಪಂದ್ಯದ ಕುರಿತು ಭವಿಷ್ಯ ನುಡಿದಿದ್ದಾರೆ. ಮುಂಬರುವ ಸಾಂಪ್ರದಾಯಿಕ ಎದುರಾಳಿಗಳ ಕದನವು ಹಿಂದೆಂದೂ ಕಾಣದ ವೀಕ್ಷಣೆಯ ದಾಖಲೆಯನ್ನು ಮಾಡಲಿದೆ ಎಂದಿದ್ದಾರೆ. ಇದುವರೆಗೂ ದಾಖಲಾಗಿರುವ ವೀಕ್ಷಣೆಯ ದಾಖಲೆಯನ್ನೆಲ್ಲಾ ಮುರಿದು ಹೊಸ ದಾಖಲೆ ಸೃಷ್ಟಿಸಲಿದೆ ಎಂದು ಶಾಸ್ತ್ರಿ ನುಡಿದಿದ್ದಾರೆ.
ಪಾಕಿಸ್ತಾನ ಹೇಗೆ ಕ್ರಿಕೆಟ್ ಆಡ್ಬೇಕು ಎಂಬುದನ್ನ ಬಿಸಿಸಿಐ ನಿರ್ಧರಿಸಬಾರದು: ವಾಸಿಂ ಅಕ್ರಂ ಕಿಡಿ

ಜಾಹೀರಾತು ದರ ಹೆಚ್ಚಿಸಲಿರುವ ಭಾರತ ಮತ್ತು ಪಾಕಿಸ್ತಾನದ ಬ್ರಾಡ್‌ಕಾಸ್ಟರ್ಸ್
ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ನಡುವಿನ ತಿಕ್ಕಾಟ ಜೋರಾಗಿದೆ. ಇದರ ನಡುವೆ ಎರಡು ಕ್ರಿಕೆಟ್ ತಂಡಗಳು ಮುಖಾಮುಖಿಯಾಗಿರುವುದರ ಜೊತೆಗೆ, ಹಬ್ಬದ ಸೀನಸ್ ಆಗಿರುವುದರಿಂದ ಜಾಹೀರಾತು ಮೇಲಿನ ದರಗಳು ದುಪ್ಪಟ್ಟಾಗಿವೆ.
ಪಂದ್ಯ ನೇರ ಪ್ರಸಾರದ ಹಕ್ಕನ್ನು ಪಡೆದಿರುವ ಉಭಯ ರಾಷ್ಟ್ರಗಳ ಟಿವಿ ಚಾನೆಲ್ ಸಂಸ್ಥೆಗಳು ಜಾಹೀರಾತು ಮೇಲೆ ವಿಧಿಸುವ ದರವನ್ನು ದುಪ್ಪಟ್ಟಾಗಿಸಿವೆ ಎಂದು ವರದಿಯಾಗಿದೆ.
T20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ನಿಕೋಲಸ್ ಪೂರನ್

ಭಾರತ-ಪಾಕಿಸ್ತಾನ ಪಂದ್ಯದಲ್ಲೇ ಅತಿ ಹೆಚ್ಚು ಆದಾಯ ಹರಿದು ಬರಲಿದೆ
ಭಾರತ-ಪಾಕಿಸ್ತಾನ ನಡುವಿನ ಪಂದ್ಯವು ಅಭಿಮಾನಿಗಳಿಗೆ ರಸದೌತಣ ಬಡಿಸುವುದು ಒಂದೆಡೆಯಾದ್ರೆ, ಉಭಯ ರಾಷ್ಟ್ರಗಳ ನಡುವಿನ ಪಂದ್ಯವು ಅಪಾರ ಪ್ರಮಾಣದ ವೀಕ್ಷಣೆಯಿಂದಾಗಿ ಬ್ರಾಡ್‌ಕಾಸ್ಟರ್‌ಗಳಿಗೆ ಅತಿ ಹೆಚ್ಚು ಆದಾಯ ಹರಿದು ಬರುವುದು ಸುಳ್ಳಲ್ಲ. ಇಡೀ ವಿಶ್ವಕಪ್‌ನ ಪಂದ್ಯಗಳ ಆದಾಯ ಒಂದೆಡೆಯಾದ್ರೆ, ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಗಳಿಸುವ ಆದಾಯದ ಪ್ರಮಾಣವೇ ಬೇರೆಯಾಗಿರುತ್ತದೆ.
ಹೀಗಾಗಿ ನೇರ ಪ್ರಸಾರದ ಹಕ್ಕು ಹೊಂದಿರುವ ಕ್ರಿಕೆಟ್ ಚಾನೆಲ್‌ಗಳು ಜಾಹೀರಾತುಗಳ ಮೇಲೆ ದೊಡ್ಡ ಮಟ್ಟಿನ ದರ ವಿಧಿಸಿವೆ. ಭಾರತದಲ್ಲಿ ಐಸಿಸಿ ವಿಶ್ವಕಪ್ ಡಿಜಿಟಲ್ ಹಕ್ಕು ಪಡೆದಿರುವ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆಯಾಗುವ ಸಾಧ್ಯತೆಗಳಿವೆ.
ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಗಳಿಸಿದ ಆದಾಯಕ್ಕಿಂತ ಶೇಕಡಾ 20 ರಿಂದ 25 ಪಟ್ಟು ಹೆಚ್ಚಿನ ಆದಾಯವನ್ನು ಪಡೆಯಲಿದ್ದಾರೆ. ಕಳೆದ ವರ್ಷ ಇದೇ ಎದುರಾಳಿಗಳ ಪಂದ್ಯದ ವೀಕ್ಷಣೆಯು 12 ಮಿಲಿಯನ್ ವೀಕ್ಷಣೆ ಪಡೆದಿದ್ದು ದಾಖಲೆಯಾಗಿದೆ. ಈ ವರ್ಷ ಈ ಪ್ರಮಾಣವು ಮತ್ತಷ್ಟು ಹೆಚ್ಚಾಗುವ ಅಂದಾಜಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications