
ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಕಿವೀಸ್, ಕುಂಟುತ್ತಾ ರನ್ ಕಲೆಹಾಕಿದ ಕಿವೀಸ್ ಕ್ಯಾಪ್ಟನ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ಪ್ರಮುಖ ಸೋಲಿಗೆ ಕಾರಣ ಉತ್ತಮ ರನ್‌ರೇಟ್ ಕಾಯ್ದುಕೊಳ್ಳದೇ ಇರುವುದು ಸಹ ಕಾರಣವಾಗಿದೆ. ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಟ್ರ್ಯಾಕ್‌ನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.
ಮೊದಲಿಗೆ ಫಿನ್ ಅಲೆನ್ ಸಿಕ್ಕ ಒಂದು ಜೀವದಾನವನ್ನು ಬಳಸಿಕೊಳ್ಳದೆ ಕೇವಲ 4ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರೆ, 21 ರನ್‌ಗಳಿಸಿ ಉತ್ತಮವಾಗಿ ಆಡ್ತಿದ್ದ ಡೆವೊನ್ ಕಾನ್ವೆ ಅನಾವಶ್ಯಕ್ಕೆ ರನೌಟ್‌ಗೆ ಬಲಿಯಾದರು. ಗ್ಲೆನ್ ಫಿಲಿಪ್ಸ್ ಆಟ 6ರನ್‌ಗೆ ಮುಕ್ತಾಯಗೊಂಡಿತು. ಈ ವೇಳೆಯಲ್ಲಿ ನಾಯಕ ಕೇನ್ ವಿಲಿಯಮ್ಸನ್ 109.52ರ ಸ್ಟ್ರೈಕ್‌ರೇಟ್ ಬ್ಯಾಟ್ ಬೀಸುವ ಮೂಲಕ 42 ಎಸೆತಗಳಲ್ಲಿ 46 ರನ್‌ಗಳಿಸಿ ಔಟಾದರು. ವಿಲಿಯಮ್ಸನ್ ಈ ಇನ್ನಿಂಗ್ಸ್ ಕೂಡ ತಂಡದ ಕಡಿಮೆ ಮೊತ್ತಕ್ಕೆ ಕಾರಣವಾಯಿತು.
ಕೊನೆಯಲ್ಲಿ ಡೆರಿಲ್ ಮಿಚೆಲ್ 35 ಎಸೆತಗಳಲ್ಲಿ ಅಜೇಯ 53, ನೀಶಮ್ 16ರನ್‌ಗಳೊಂದಿಗೆ ತಂಡದ ಸ್ಕೋರನ್ನು 150ರ ಗಡಿದಾಟಿಸಿದರು. ಆದ್ರೆ ಪಾಕಿಸ್ತಾನಕ್ಕೆ 153 ರನ್‌ಗಳ ಗುರಿ ಯಾವ ದೊಡ್ಡ ಸವಾಲನ್ನು ಸೃಷ್ಟಿಸಲಿಲ್ಲ.
10 ಓವರ್‌ಗಳೊಳಗೆ ಆರಂಭಿಕ ವಿಕೆಟ್ ಪಡೆಯಲು ವಿಫಲಗೊಂಡ ನ್ಯೂಜಿಲೆಂಡ್ 7 ವಿಕೆಟ್‌ಗಳ ಸೋಲನ್ನ ಅನುಭವಿಸಿತು. ಬಾಬರ್ ಹಾಗೂ ರಿಜ್ವಾನ್ ಅರ್ಧಶತಕ ದಾಖಲಿಸಿ ಮಿಂಚಿದರು.

ಸೋಲಿಗೆ ಪ್ರಮುಖ ಕಾರಣವನ್ನ ತಿಳಿಸಿದ ಕೇನ್ ವಿಲಿಯಮ್ಸನ್
''ನಾವು ಆರಂಭದಲ್ಲೇ ಒತ್ತಡಕ್ಕೆ ಒಳಗಾದೆವು. ಪಾಕಿಸ್ತಾನವು ಉತ್ತಮವಾಗಿ ಬೌಲಿಂಗ್ ಮಾಡಿದೆ. ಮಿಚೆಲ್ ಅದ್ಭುತ ಇನ್ನಿಂಗ್ಸ್ ಹೊರತಾಗಿಯೂ ನಾವು ಸನ್ನಿವೇಶವನ್ನು ಬಳಸಿಕೊಳ್ಳಲು ವಿಫಲರಾದೆವು. ಪಂದ್ಯದಲ್ಲಿ ಅರ್ಧದಲ್ಲಿ ನಾವು ಇದು ಸ್ಪರ್ಧಾತ್ಮಕ ಮೊತ್ತ ಎಂದು ಭಾವಿಸಿದೆವು. ಏಕೆಂದರೆ ವಿಕೆಟ್ ಕಷ್ಟಕರವಾಗಿತ್ತು. ಆದ್ರೆ ಬೇಸರ ಸಂಗತಿಯೆಂದರೆ ಪಾಕಿಸ್ತಾನಕ್ಕೆ ಸುಲಭವಾಗಿ ಗೆಲುವು ದಾಖಲಿಸಲು ಬಿಟ್ಟೆವು. ಅವರು ಅದ್ಭುತವಾಗಿ ಆಡಿದ್ದಾರೆ. ನಾವು ಉತ್ತಮವಾಗಿ ಆಡಲಿಲ್ಲ. ಈ ಸೋಲು ಅರಗಿಸಿಕೊಳ್ಳಲು ಕಷ್ಟಸಾಧ್ಯ. ಬಾಬರ್ ಮತ್ತು ರಿಜ್ವಾನ್ ನಮ್ಮ ಮೇಲೆ ಒತ್ತಡವನ್ನು ಹೇರಿದರು. ಪಾಕಿಸ್ತಾನ ಗೆಲುವಿಗೆ ಅರ್ಹರು. ರೌಂಡ್ ರಾಬಿನ್ ಮಾದರಿಯಲ್ಲಿ ಉತ್ತಮ ಕ್ರಿಕೆಟ್ ಆಡಿದೆವು. ಆದ್ರೆ ಇಂದು ನಮ್ಮ ಬೆಸ್ಟ್ ಆಟ ಪ್ರದರ್ಶಿಸಲಿಲ್ಲ'' ಎಂದು ಕೇನ್ ವಿಲಿಯಮ್ಸನ್ ಪಂದ್ಯದ ಬಳಿಕ ಸೋಲಿನ ಹತಾಶೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ 13 ವರ್ಷಗಳ ಬಳಿಕ ಫೈನಲ್‌ಗೆ ಪ್ರವೇಶ ಕಂಡಿದೆ. 2009ರಲ್ಲಿ ಚಾಂಪಿಯನ್ ಆದ ಬಳಿಕ ಮೊದಲ ಬಾರಿಗೆ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.
''ಗುರುವಾರ ಮಾತ್ರ ಸೈಲೆಂಟಾಗಿರು ವಿರಾಟ್'' : ಇಂಗ್ಲೆಂಡ್ ಮಾಜಿ ಆಟಗಾರನ ಅಚ್ಚರಿಯ ಕಾಮೆಂಟ್!

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ ಪ್ಲೇಯಿಂಗ್ 11: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ
ಬೆಂಚ್
ಖುಶ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಹೈದರ್ ಅಲಿ, ಆಸಿಫ್ ಅಲಿ
ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲ್ಯುಕಿ ಫರ್ಗುಸನ್, ಟ್ರೆಂಟ್ ಬೌಲ್ಟ್
ಬೆಂಚ್: ಮಾರ್ಟಿನ್ ಗಪ್ಟಿಲ್, ಆ್ಯಡಂ ಮಿಲ್ನೆ, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್


Click it and Unblock the Notifications












