ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

''ಗುರುವಾರ ಮಾತ್ರ ಸೈಲೆಂಟಾಗಿರು ವಿರಾಟ್'' : ಇಂಗ್ಲೆಂಡ್ ಮಾಜಿ ಆಟಗಾರನ ಅಚ್ಚರಿಯ ಕಾಮೆಂಟ್!

Virat kohli

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ ಅತಿ ಹೆಚ್ಚು ಪಾಯಿಂಟ್ಸ್‌ (8) ಮೂಲಕ ಸೆಮಿಫೈನಲ್ ಪ್ರವೇಶಿಸಿರುವ ಟೀಂ ಇಂಡಿಯಾಗೆ, ವಿಶ್ವಕಪ್‌ ಗೆಲ್ಲಲು ಇನ್ನೆರಡು ಹೆಜ್ಜೆಗಳಷ್ಟೇ ಬಾಕಿ ಉಳಿದಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾ ಟಾಪ್ ಆರ್ಡರ್ ಅಬ್ಬರಿಸಲು ರೆಡಿಯಾಗಿದೆ.

ಟೀಂ ಇಂಡಿಯಾ ಸೂಪರ್‌ಸ್ಟಾರ್ ವಿರಾಟ್‌ ಕೊಹ್ಲಿ ಸರಿಯಾದ ಸಮಯದಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಎರಡು ವರ್ಷಗಳ ಕಾಲ ಸೆಂಚುರಿ ಬರ ಎದುರಿಸಿದ್ದ ವಿರಾಟ್, ಏಷ್ಯಾಕಪ್‌ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಚೊಚ್ಚಲ ಟಿ20 ಶತಕ ದಾಖಲಿಸುವ ಮೂಲಕ ತನ್ನ ಅದ್ಭುತ ಫಾರ್ಮ್‌ಗೆ ಹಿಂದಿರುಗಿದರು.

ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ 3 ಅರ್ಧಶತಕ ದಾಖಲಿಸಿದ್ದಲ್ಲದೆ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿರುವ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿರುವ ಅಗ್ರ ಬ್ಯಾಟರ್‌ ಕೂಡ ಆಗಿದ್ದಾರೆ. 123ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ವಿರಾಟ್ 246 ರನ್ ಕಲೆಹಾಕಿದ್ದಾರೆ.

ಸೆಮಿಫೈನಲ್‌ಗೂ ಮುನ್ನ ನೆಟ್ಸ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸಿರುವ ವಿರಾಟ್

ಸೆಮಿಫೈನಲ್‌ಗೂ ಮುನ್ನ ನೆಟ್ಸ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸಿರುವ ವಿರಾಟ್

ಗುರುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸಿದರು. ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡಿರುವ ವಿರಾಟ್ ಕೊಹ್ಲಿ ಕ್ರಿಕೆಟ್ ಪುಸ್ತಕದ ಎಲ್ಲಾ ಶಾಟ್‌ಗಳನ್ನ ಅಭ್ಯಾಸ ಮಾಡಿದ್ದಾರೆ. ಕೊಹ್ಲಿ ನೆಟ್ ಪ್ರಾಕ್ಟೀಸ್‌ ಕುರಿತಾಗಿ ಸೂರ್ಯಕುಮಾರ್ ಯಾದವ್, ಅಫ್ಘಾನಿಸ್ತಾನದ ರಶೀದ್ ಖಾನ್‌ ಹಾಗೂ ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಕಾಮೆಂಟ್ ಮಾಡಿದ್ದಾರೆ.

ಸೂರ್ಯಕುಮಾರ್ ಯಾದವ್, ಕೊಹ್ಲಿಯ ಅಭ್ಯಾಸ ಕಂಡು 'ಅಂಗಾರ್ 'ಎಂದು ಕಾಮೆಂಟ್‌ ಮಾಡಿದ್ದು, ರಶೀದ್ ಖಾನ್ ಕೊಹ್ಲಿ ಬ್ಯಾಟ್‌ನಿಂದ ಬರುತ್ತಿದ್ದ ಸೌಂಡ್ ಕುರಿತಾಗಿ ಹೊಗಳಿದ್ದಾರೆ. ಆದ್ರೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್‌ ಮಾತ್ರ ವಿಭಿನ್ನವಾಗಿ ಕಾಮೆಂಟ್ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಟ್ರಾವಿಸ್ ಹೆಡ್ ಕಂಬ್ಯಾಕ್

ಗುರುವಾರ ಮಾತ್ರ ಸೈಲೆಂಟಾಗಿರು ವಿರಾಟ್ ಎಂದ ಕೆವಿನ್ ಪೀಟರ್ಸನ್

ವಿರಾಟ್ ಕೊಹ್ಲಿ ನನ್ನ ಉತ್ತಮ ಸ್ನೇಹಿತ, ಇತ್ತೀಚೆಗೆ ಕೆಲ ಸಮಯ ಸ್ವಲ್ಪ ಫಾರ್ಮ್‌ನಿಂದ ಹೊರಗುಳಿದಿದ್ದರು. ಆದ್ರೂ ನನ್ನ ಬೆಂಬಲ ಯಾವತ್ತಿಗೂ ಕಮ್ಮಿ ಆಗಿಲ್ಲ. ನಿನಗೆ ಗೊತ್ತು ನಾನು ನಿನ್ನನ್ನು ಇಷ್ಟಪಡುತ್ತೇನೆ ಎಂದು. ಆದ್ರೆ ಗುರುವಾರ ಮಾತ್ರ ನೀನು ಸೈಲೆಂಟಾಗಿರು, ಚಿಲ್ ಆಗಿರು ಎಂದು ಕೆವಿನ್ ಪೀಟರ್ಸನ್ ವಿರಾಟ್ ಕೊಹ್ಲಿ ನೆಟ್ ಪ್ರಾಕ್ಟೀಸ್‌ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ಗುರುವಾರ ಭಾರತ -ಇಂಗ್ಲೆಂಡ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಡಿಲೇಡ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೊಹ್ಲಿ ಅಬ್ಬರಿಸದಿರಲಿ ಎಂಬುದು ಇಂಗ್ಲೆಂಡ್ ಮಾಜಿ ಆಟಗಾರನ ಉದ್ದೇಶವಾಗಿದೆ. ಪೀಟರ್ಸನ್ ಮಾಡಿರುವ ಈ ಕಾಮೆಂಟ್ ಸದ್ಯ ಸಾಕಷ್ಟು ವೈರಲ್‌ಗೆ ಕಾರಣವಾಗಿದೆ.

ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು? ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾನಿಯಾ ಹೇಳಿದ್ದೇನು?

ವಿರಾಟ್‌ ಕೊಹ್ಲಿಗೆ ತನ್ನ ಖಾಸಗಿ ಬ್ಲಾಗ್‌ನಲ್ಲೂ ಮನವಿ ಮಾಡಿದ ಪೀಟರ್ಸನ್

ವಿರಾಟ್‌ ಕೊಹ್ಲಿಗೆ ತನ್ನ ಖಾಸಗಿ ಬ್ಲಾಗ್‌ನಲ್ಲೂ ಮನವಿ ಮಾಡಿದ ಪೀಟರ್ಸನ್

''ವಿರಾಟ್ ಕೊಹ್ಲಿ ಕೊಂಚ ಫಾರ್ಮ್ ವೈಫಲ್ಯ ಕಂಡಿದ್ದಾಗಲೂ ವಿರಾಟ್ ಕೊಹ್ಲಿಯನ್ನ ನಾನು ಬೆಂಬಲಿಸಿದ್ದೇನೆ. ಆತ ಮನರಂಜನೆ ನೀಡುವ ಆಟಗಾರ, ಆತನಿಗೆ ಅಭಿಮಾನಿಗಳ ಬೆಂಬಲ ಬೇಕಾಗುತ್ತದೆ. ಆತನಿಗೆ ಆಟದ ಬಜ್ ಇರಬೇಕಾಗುತ್ತದೆ. ಆತನಿಗೆ ಎಕ್ಸೈಟ್‌ಮೆಂಟ್ ಬೇಕಾಗಿದೆ. ಕೆಲವು ವರ್ಷಗಳು ಇವೆಲ್ಲವು ಆತನಿಗೆ ಸಿಗಲಿಲ್ಲ. ಹೀಗಾಗಿ ಆತನು ಕೊಂಚ ಫಾರ್ಮ್ ವೈಫಲ್ಯ ಕಂಡಿದ್ದನು. ಆದ್ರೆ ಅಭಿಮಾನಿಗಳು ಸ್ಟೇಡಿಯಂಗೆ ವಾಪಸ್ಸಾಗಿದ್ದಾರೆ. ಅದ್ರಲ್ಲೂ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಟಿ20 ಕ್ರಿಕೆಟ್‌ ಆಡಲು ಬಹಳ ಒಳ್ಳೆಯ ವಾತಾವರಣವಿದೆ. ಜೊತೆಗೆ ಕಿಂಗ್ ಕೊಹ್ಲಿ ಕೂಡ ಕಂಬ್ಯಾಕ್ ಮಾಡಿದ್ದಾರೆ. ಓರ್ವ ಆತ್ಮೀಯ ಗೆಳೆಯನಾಗಿ, ಆತನ ಕುರಿತಾಗಿ ಖುಷಿಯಿದೆ. ಆದ್ರೆ ಒಂದು ದಿನ ಮಾತ್ರ ಆತ ರನ್‌ಗಳಿಸಬಾರದು'' ಎಂದು ಕೆವಿನ್ ಪೀಟರ್ಸನ್ ತನ್ನ ಖಾಸಗಿ ಬ್ಲಾಗ್‌ ಬೆಟ್‌ವೇನಲ್ಲೂ ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವ ಕುರಿತಾಗಿ ಮತ್ತಷ್ಟು ಮಾತನಾಡಿರುವ ಪೀಟರ್ಸನ್, ಕೊಹ್ಲಿ ಅಬ್ಬರದಿಂದಾಗಿ ಭಾರತದ ಇತರೆ ಆಟಗಾರರು ಮಿಂಚುತ್ತಿದ್ದಾರೆ. ಕೊಹ್ಲಿ ಆಟವು ಇತರೆ ಆಟಗಾರರಿಗೂ ಸ್ಫೂರ್ತಿ ತುಂಬಿದೆ. ಕೊಹ್ಲಿ ಜೊತೆಗೆ ಸೂರ್ಯಕುಮಾರ್ ಯಾದವ್ ಪ್ರಸ್ತುತ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಅಬ್ಬರಿಸುತ್ತಿದ್ದಾರೆ.

ಸೂರ್ಯಕುಮಾರ್ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

Story first published: Tuesday, November 8, 2022, 19:30 [IST]
Other articles published on Nov 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X