For Quick Alerts
ALLOW NOTIFICATIONS  
For Daily Alerts
 

T20 ವಿಶ್ವಕಪ್: ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾದ ಅಫ್ಘಾನಿಸ್ತಾನ vs ನ್ಯೂಜಿಲೆಂಡ್ ಪಂದ್ಯ

NZ vs AFG Match

ಮೆಲ್ಬರ್ನ್‌ನ ಎಂಸಿಜಿ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ vs ನ್ಯೂಜಿಲೆಂಡ್ ನಡುವಿನ ಐಸಿಸಿ ಟಿ20 ವಿಶ್ವಕಪ್ ಸೂಪರ್ 12 ಪಂದ್ಯವು ಒಂದೂ ಎಸೆತ ಕಾಣದೆ ರದ್ದಾಗಿದೆ. ಬಿಟ್ಟು ಬಿಡದೆ ಕಾಡಿದ ವರುಣ, ಟಿ20 ವಿಶ್ವಕಪ್‌ನಲ್ಲಿ ಮತ್ತೊಂದು ಪಂದ್ಯವನ್ನ ಆಹುತಿಗೆ ತೆಗೆದುಕೊಂಡಿದ್ದಾನೆ.

ಬುಧವಾರ (ಅ.26) ಎಂಸಿಜಿ ಸ್ಟೇಡಿಯಂ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಪರಿಣಾಮ, ಮಳೆಯು ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪಂದ್ಯಕ್ಕೆ ಅಡ್ಡಿಯಾದಂತೆ, ಅಫ್ಘಾನ್ ಮತ್ತು ಕಿವೀಸ್ ಪಂದ್ಯಕ್ಕೆ ತಡೆಯೊಡ್ಡಿತು. ಹೀಗಾಗಿಯೇ ಟಾಸ್ ಕೂಡ ವಿಳಂಭಗೊಂಡಿತು. ಇನ್ನೇನು ಟಾಸ್ ಆಗಬಹುದು ಎನ್ನುವಷ್ಟರಲ್ಲಿ ಮಳೆಯು ಕಣ್ಣಾಮುಚ್ಚಾಲೆ ಆಟವಾಡಿತು. ಹಲವು ಸಮಯ ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪರಿಣಾಮ ಮ್ಯಾಚ್ ರೆಫರಿ ಪಂದ್ಯವನ್ನು ರದ್ದು ಎಂದು ಘೋಷಿಸಿದ್ದಾರೆ.

ಉಭಯ ತಂಡಗಳಿಗೂ ತಲಾ 1 ಪಾಯಿಂಟ್ ಹಂಚಿಕೆ

ಉಭಯ ತಂಡಗಳಿಗೂ ತಲಾ 1 ಪಾಯಿಂಟ್ ಹಂಚಿಕೆ

ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಪಂದ್ಯವು ರದ್ದಾದ ಪರಿಣಾಮವಾಗಿ ಉಭಯ ತಂಡಗಳಿಗೂ 1 ಪಾಯಿಂಟ್ ಹಂಚಿಕೆಯಾಗಿದೆ. ಸೂಪರ್ 12 ಪಂದ್ಯದ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 89ರನ್‌ಗಳಿಂದ ಸೋಲಿಸಿರುವ ನ್ಯೂಜಿಲೆಂಡ್ ಗೆಲುವಿನ ಓಟವನ್ನ ಮುಂದುವರಿಸುವ ಲೆಕ್ಕಾಚಾರದಲ್ಲಿತ್ತು. ಆದ್ರೆ ಮಳೆಯ ಕಾಟಕ್ಕೆ ಬೇಸತ್ತು 1 ಪಾಯಿಂಟ್‌ಗೆ ತೃಪ್ತಿ ಪಡುವಂತಾಗಿದೆ. ಮತ್ತೊಂದೆಡೆ ಶ್ರೀಲಂಕಾ ವಿರುದ್ಧ ಮೊದಲ ಪಂದ್ಯವನ್ನ ಸೋತಿದ್ದ ಮೊಹಮ್ಮದ್ ನಬಿ ನಾಯಕತ್ವದ ಅಫ್ಘಾನಿಸ್ತಾನ ಗೆಲುವಿನ ಖಾತೆ ತೆರೆಯುವ ಮೊದಲೇ ವರುಣ ಅಡ್ಡಗಾಲಿಟ್ಟಿದ್ದು ಕೇವಲ 1 ಪಾಯಿಂಟ್‌ ಪಡೆದು ನಿರಾಸೆ ಅನುಭವಿಸಿದೆ.

ಪಾಕಿಸ್ತಾನ ವಿರುದ್ಧ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಟಿ20 ರ್ಯಾಂಕಿಂಗ್ ಏರಿಕೆ: ಇನ್ನೇನಿದ್ರೂ ನಂಬರ್ 1 ಟಾರ್ಗೆಟ್‌

ಅಫ್ಘಾನಿಸ್ತಾನ ಸೆಮಿಫೈನಲ್ ತಲುಪುವ ಹಾದಿ ಬಹುತೇಕ ಕಷ್ಟಸಾಧ್ಯ

ಅಫ್ಘಾನಿಸ್ತಾನ ಸೆಮಿಫೈನಲ್ ತಲುಪುವ ಹಾದಿ ಬಹುತೇಕ ಕಷ್ಟಸಾಧ್ಯ

ಗ್ರೂಪ್ 1ನಲ್ಲಿ ಸ್ಥಾನ ಪಡೆದಿರುವ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಆಡಿರುವ ಎರಡು ಪಂದ್ಯಗಳಿಂದ ಕ್ರಮವಾಗಿ 3 ಮತ್ತು 1 ಅಂಕಗಳಿಸಿವೆ. ಕಿವೀಸ್ 3 ಅಂಕದೊಂದಿಗೆ ಗ್ರೂಪ್‌ನ ಅಗ್ರಸ್ಥಾನಿಯಾಗಿದ್ದು, ಕೇವಲ 1 ಅಂಕ ಪಡೆದಿರುವ ಅಫ್ಘಾನಿಸ್ತಾನ ಪಾಯಿಂಟ್ಸ್ ಟೇಬಲ್ ತಳಭಾಗದಲ್ಲಿದ್ದು, ಸೆಮಿಫೈನಲ್ ತಲುಪುವ ಹಾದಿ ತುಂಬಾ ಕಠಿಣಗೊಂಡಿದೆ.

ಗ್ರೂಪ್ 2ರಲ್ಲೂ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವಿನ ಪಂದ್ಯವು ರದ್ದಾಯಿತು. ಗೆಲ್ಲುವ ಅವಕಾಶ ಹೊಂದಿದ್ದ ದಕ್ಷಿಣ ಆಫ್ರಿಕಾ ಮಳೆಯಿಂದಾಗಿ ಗೆಲ್ಲುವ ಅವಕಾಶ ಕಳೆದುಕೊಂಡಿತು.

ಕೊಹ್ಲಿ ನಿವೃತ್ತಿ ಆಗೋವರೆಗೂ ಪಾಕಿಸ್ತಾನ ಗೆಲ್ಲಲ್ಲ ಎಂಬುದು ಆತನಿಗೆ ಗೊತ್ತಿದೆ: ಅಖ್ತರ್ ವಿರುದ್ಧ ನೆಟ್ಟಿಗರು ಟ್ರೋಲ್

ಮಳೆಯ ಕಾಟ, ಇಂಗ್ಲೆಂಡ್ ವಿರುದ್ಧ ಐರ್ಲೆಂಡ್‌ಗೆ ಗೆಲುವು

ಮಳೆಯ ಕಾಟ, ಇಂಗ್ಲೆಂಡ್ ವಿರುದ್ಧ ಐರ್ಲೆಂಡ್‌ಗೆ ಗೆಲುವು

ಈ ಪಂದ್ಯಕ್ಕೂ ಮುನ್ನ ಎಂಸಿಜಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪಂದ್ಯಕ್ಕೂ ವರುಣ ತಡೆಯೊಡ್ಡಿತು. 158 ರನ್ ಗುರಿ ಮುಟ್ಟಿದ ಇಂಗ್ಲೆಂಡ್ ಮಳೆಯಿಂದಾಗಿ ಪಂದ್ಯ ನಿಲ್ಲುವ ಮೊದಲು 14.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 105ರನ್ ಕಲೆಹಾಕಿತು. ಆದ್ರೆ ದುರಾದೃಷ್ಟವಶಾತ್ ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ ಇಂಗ್ಲೆಂಡ್‌ 5ರನ್‌ಗಳಿಂದ ಹಿಂದಿತ್ತು. ಪರಿಣಾಮ ಮಳೆ ನಿಲ್ಲದ ಕಾರಣ ಐರ್ಲೆಂಡ್‌ಗೆ 5ರನ್‌ಗಳ ಗೆಲುವು ಸಂಪಾದಿಸಿದೆ.

ಉಭಯ ತಂಡಗಳು ಆಡಿರುವ ಎರಡು ಪಂದ್ಯಗಳಿಂದ ಒಂದು ಗೆಲುವು ಮತ್ತು ಒಂದು ಸೋಲನ್ನ ಕಾಣುವ ಮೂಲಕ 2 ಪಾಯಿಂಟ್‌ ಗಳಿಸಿದ್ದು, ಗ್ರೂಪ್ 1ರ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕ್ರಮವಾಗಿ 3 ಮತ್ತು 4ನೇ ಸ್ಥಾನ ಅಲಂಕರಿಸಿವೆ. ಮೊದಲೆರಡು ಸ್ಥಾನವನ್ನ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಅಲಂಕರಿಸಿವೆ.

ಸಂಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Story first published: Wednesday, October 26, 2022, 16:51 [IST]
Other articles published on Oct 26, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+