ವಿರಾಟ್ -ಅನುಷ್ಕಾ ನಡುವೆ ಸನ್ನಿ, ಕಮಲ್, ಟ್ವೀಟ್ ಟಾಕ್
ಕೋಲ್ಕತ್ತಾ, ಏ.14: 'ಆಕೆ ಬಂದಿದ್ದಾಳಾ?" ಎಂದು ಆರ್ ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹತ್ತಿರ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೇಳಿದ್ದು ಕಳೆದ ಎರಡು ಮೂರು ದಿನಗಳಿಂದ ಟ್ವಿಟ್ಟರ್ ನಲ್ಲಿ ಕಿಚ್ಚು ಹಬ್ಬಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈಗ ವಿರಾಟ್- ಅನುಷ್ಕಾ ಹಾಗೂ ಸನ್ನಿ(ಗವಾಸ್ಕರ್) ನಡುವೆ ಕಮಲ್ ಖಾನ್ ಎಂಟ್ರಿ ಕೊಟ್ಟಿದ್ದಾರೆ.
ಹಿಂದಿ ಚಿತ್ರರಂಗದ ಪ್ರತಿಭೆ ಕಮಲ್ ಆರ್ ಖಾನ್ ಅವರು ಚಿತ್ರರಂಗಕ್ಕಿಂತ ಟ್ವಿಟ್ಟರ್ ಮೂಲಕವೇ ಹೆಚ್ಚು ಜನಪ್ರಿಯತೆ ಗಳಿಸಿದ್ದು ಸುಳ್ಳಲ್ಲ. ಈಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ನಡುವಿನ ಪ್ರೇಮ ಪ್ರಸಂಗದ ಬಗ್ಗೆ ಟ್ವೀಟ್ ಮಾಡಿ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಪ್ರೀತಿ ಪ್ರೇಮ ಎಂದ ಮೇಲೆ ತ್ಯಾಗ ಮಾಡಲೇಬೇಕು. ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮಾಡಿದ ತ್ಯಾಗದಂತೆ ಆರ್ ಸಿಬಿ ಈಗ ಐಪಿಎಲ್ ನಲ್ಲಿ ತ್ಯಾಗಕ್ಕೆ ಸಿದ್ಧವಾಗಿದೆ ಎಂದು ಟ್ವೀಟ್ ಮಾಡಿ ಇಬ್ಬರ ನಡುವಿನ ಪ್ರೇಮಕ್ಕೆ ಕಿಚ್ಚು ಹಚ್ಚಿದ್ದಾರೆ. [ಕೊಹ್ಲಿ- ಅನುಷ್ಕಾ ಬೆನ್ನಿಗೆ ನಿಂತ ಯುವರಾಜ್ ಸಿಂಗ್]
ಗವಾಸ್ಕರ್ ಅವರೇನೋ ತುಂಟತನದ ಪ್ರಶ್ನೆ ಎಸೆದು ಕೊಹ್ಲಿ ಮುಖದಲ್ಲಿ ಮುಗುಳ್ನಗೆ ಉಕ್ಕಿಸಿದ್ದರು. ಅದರೆ, ಕಮಲ್ ಆರ್ ಖಾನ್ ಟ್ವೀಟ್ ಗೆ ಹೆಚ್ಚಾಗಿ ವಿರೋಧದ ಟ್ವೀಟ್ ಬಾಣಗಳೆ ಬಂದಿವೆ. [ಕೊಹ್ಲಿ- ಅನುಷ್ಕಾ ತೆಗಳುವುದನ್ನು ನಿಲ್ಲಿಸ್ರಪ್ಪ ಸಾಕು!]
ವಿಶ್ವಕಪ್ ಕಪ್ ಸೆಮಿಫೈನಲ್ ನಂತರದ ಘಟನಾವಳಿಯಿಂದ ನಮ್ಮಿಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಯಿತು ಎಂದು ಸ್ವತಃ ಕೊಹ್ಲಿ ಬಹಿರಂಗವಾಗಿ ಒಪ್ಪಿಕೊಂಡ ಮೇಲೂ ಇಬ್ಬರ ಸಂಬಂಧ ಟ್ವಿಟ್ಟರ್ ಅರಳಿಕಟ್ಟೆಯಲ್ಲಿ ದಿನನಿತ್ಯದ ಚರ್ಚಾ ವಸ್ತುವಾಗಿದೆ.

ಗವಾಸ್ಕರ್ ಅವರೇನೋ ತುಂಟತನದ ಪ್ರಶ್ನೆ
ಗವಾಸ್ಕರ್ ಅವರೇನೋ ತುಂಟತನದ ಪ್ರಶ್ನೆ ಎಸೆದು ಕೊಹ್ಲಿ ಮುಖದಲ್ಲಿ ಮುಗುಳ್ನಗೆ ಉಕ್ಕಿಸಿದ್ದರು. ಅದರೆ, ಕಮಲ್ ಆರ್ ಖಾನ್ ಟ್ವೀಟ್ ಗೆ ಹೆಚ್ಚಾಗಿ ವಿರೋಧದ ಟ್ವೀಟ್ ಬಾಣಗಳೇ ಬಂದಿವೆ.
ವಿಶ್ವಕಪ್ ಶಾಪ ಬದಲಾಯಿತೇ?
ವಿಶ್ವಕಪ್ ಸೆಮಿಫೈನಲ್ ನಲ್ಲಿ ಕೊಹ್ಲಿ ವಿಫಲವಾಗಲು ಅನುಷ್ಕಾ ಕಾರಣ. ತಂಡಕ್ಕೆ ಇದ ಶಾಪ ಈಗ ಬದಲಾಗಿದೆ. ಆರ್ ಸಿಬಿಗೆ ಗೆಲುವು ಲಭಿಸಲಿದೆ ಎಂದು ಕೋಲ್ಕತ್ತಾ ಪಂದ್ಯದ ಸಂದರ್ಭದಲ್ಲಿ ಟ್ವೀಟ್ ಗಳು ಬರಲಾರಂಭಿಸಿದವು.
ಕಮಲ್ ಆರ್ ಖಾನ್ ಕಿರಿಕಿರಿ ಟ್ವೀಟ್
ಕಮಲ್ ಆರ್ ಖಾನ್ ಕಿರಿಕಿರಿ ಟ್ವೀಟ್ ಹೀಗಿದೆ ನೋಡಿ...
ಗಾಯಕ ರಘು ದೀಕ್ಷಿತ್ ಟ್ವೀಟ್
ಗಾಯಕ ರಘು ದೀಕ್ಷಿತ್ ಟ್ವೀಟ್ ಮಾಡಿ ಸುನಿಲ್ ಗವಾಸ್ಕರ್ ತುಂಟತನವನ್ನು ಪ್ರಶಂಸಿಸಿದ್ದಾರೆ.
ಇದೆಂಥಾ ಪ್ರಶ್ನೆ ಮಿ. ಗವಾಸ್ಕಾರ್
ಇದೆಂಥಾ ಪ್ರಶ್ನೆ ಮಿ. ಗವಾಸ್ಕಾರ್ ನೀವು ಈ ರೀತಿ ಪ್ರಶ್ನೆ ಮಾಡುತ್ತೀರಿ ಎಂದುಕೊಂಡಿರಲಿಲ್ಲ.
ರಿಚಿ ಬೆನೊ ಏಕೆ ಮಿಸ್ ಆಗುತ್ತಾರೆ?
ರಿಚಿ ಬೆನೊ ಏಕೆ ಮಿಸ್ ಆಗುತ್ತಾರೆ? ಎಂದರೆ ಇಂಥ ಅನರ್ಥ ಪ್ರಶ್ನೆಗಳನ್ನು ಕೇಳಿದಾಗ ತಿಳಿಯುತ್ತದೆ.
ಕ್ರಿಕೆಟ್ ಬಗ್ಗೆ ಮಾತನಾಡಿ ಸಾಕು
ಕ್ರಿಕೆಟ್ ಬಗ್ಗೆ ಮಾತನಾಡಿ ಸಾಕು, ಆಟಗಾರರ ಬಗ್ಗೆ ಕಾಮೆಂಟೆಟರ್ಸ್ ಮಾತನಾಡುವುದು ಬೇಡ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications