ಇತಿಹಾಸ ನಿರ್ಮಾಣಕ್ಕೆ ಸಜ್ಜಾದ ಟೀಂ ಇಂಡಿಯಾ
ಸಿಡ್ನಿ, ಮಾ.25: ವಿಶ್ವಕಪ್ 2015 ಟೂರ್ನಿಯ ಎರಡನೇ ಸೆಮಿಫೈನಲ್ ಭಾರತ ಹಾಗೂ ಅತಿಥೇಯ ಆಸ್ಟ್ರೇಲಿಯಾ ನಡುವೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ (ಮಾ.26) ಬೆಳಗ್ಗೆ 9.00ಗಂಟೆ (ಭಾರತೀಯ ಕಾಲಮಾನ ಪ್ರಕಾರ) ಗೆ ಆರಂಭವಾಗಲಿದೆ. ಹೊಸ ಇತಿಹಾಸ ನಿರ್ಮಾಣದ ಗುರಿಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯುತ್ತಿದೆ.
ಮಾ.29ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಯಾವ ತಂಡ ಸೆಣಸಲಿದೆ ಎಂಬ ಉತ್ತರ ನಾಳೆ ಸಂಜೆ ಸಿಗಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ತಲುಪುವ ಮೊದಲೇ ಅನೇಕ ದಾಖಲೆಗಳನ್ನು ನಿರ್ಮಿಸಿವೆ. ನಾಳೆ ಪಂದ್ಯದಲ್ಲೂ ಅನೇಕ ಹೊಸ ಇತಿಹಾಸ ನಿರ್ಮಿಸಲಿದೆ. [ಧೋನಿ ರಣತಂತ್ರ ಇಂದಿಗೂ ಎಂದೆಂದಿಗೂ]
ಕಳೆದ 40 ವರ್ಷಗಳಲ್ಲಿ ಯಾವ ಟೀಂ ಇಂಡಿಯಾ ಮಾಡದ ಸಾಧನೆಯನ್ನು ಮಾಡುವ ಅವಕಾಶ ಎಂಎಸ್ ಧೋನಿ ತಂಡ ಸಾಧಿಸುವ ಉತ್ಸಾಹದಲ್ಲಿದೆ. ವಿಶ್ವಕಪ್ 2015 ಟೂರ್ನಿಯಲ್ಲಿ ಸತತ 7 ಪಂದ್ಯಗಳನ್ನು ಗೆದ್ದು ಈಗಾಗಲೇ ಧೋನಿ ಪಡೆ ಹೊಸ ದಾಖಲೆ ಬರೆದಿದೆ. ಒಂದು ವೇಳೆ ಮಾ.26ರಂದು ಆಸ್ಟ್ರೇಲಿಯಾವನ್ನು ಭಾರತ ಸೋಲಿಸಿದರೆ ಈ ಕೆಳಗಿನ ದಾಖಲೆಗಳನ್ನು ಟೀಂ ಇಂಡಿಯಾ ಧೂಳಿಪಟವಾಗಲಿದೆ.[ಧೋನಿ ವಿಶ್ವಕಪ್ ಗೆಲ್ಲಬೇಕು: ಪಾಕಿಸ್ತಾನಿ ಫ್ಯಾನ್]

ಸಿಡ್ನಿಯಲ್ಲಿ ಭಾರತಕ್ಕಾಗಿ ಕಾದಿರುವ ಸಾಧನೆಗಳು:
* ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಬಾರಿ ಫೈನಲ್ ತಲುಪುವ ಅವಕಾಶ ಟೀಂ ಇಂಡಿಯಾ ಕೈಲಿದೆ.
* ಟೀಂ ಇಂಡಿಯಾ ನಾಯಕ ಧೋನಿ ಸತತ ಫೈನಲ್ ಗೆ ತಂಡವನ್ನು ಕೊಂಡೊಯ್ದ ಸಾಧನೆ ಮಾಡಬಹುದು.
* ಧೋನಿ, ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಅವರು ಎರಡು ವಿಶ್ವಕಪ್ ಫೈನಲ್ಸ್ ಆಡುವ ಅವಕಾಶ ಪಡೆಯಲಿದ್ದಾರೆ. ಎಲ್ಲರೂ 2011 ವಿಶ್ವಕಪ್ ಫೈನಲ್ ನಲ್ಲಿ ಆಡಿದ್ದರು. ಆರ್ ಅಶ್ವಿನ್ ಅವರು ಕಳೆದ ವಿಶ್ವಕಪ್ ತಂಡದಲ್ಲಿದ್ದರೂ ಫೈನಲ್ ಪಂದ್ಯದಲ್ಲಿ ಆಡಿರಲಿಲ್ಲ. [ಭಾರತ ಆಸೀಸ್ ಕಾಳಗದ 10 ಇಂಟರೆಸ್ಟಿಂಗ್ ಸಂಗತಿ]
* ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎರಡು ಬಾರಿ ಸೋಲಿಸಿದ ನಾಯಕ ಎನಿಸಿಕೊಳ್ಳಲು ಧೋನಿಗೆ ಒಳ್ಳೆ ಚಾನ್ಸ್. 2011ರಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ರಿಕಿ ಪಾಂಟಿಂಗ್ ಪಡೆಯನ್ನು ಅಹಮದಾಬಾದಿನಲ್ಲಿ ಧೋನಿ ಪಡೆ ಸೋಲಿಸಿತ್ತು. [ಬುಕ್ಕಿಗಳ ಭವಿಷ್ಯ : ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲುವ ಕುದುರೆ]
* ಆಸ್ಟ್ರೇಲಿಯಾ ತಂಡ ಇದುವರೆವಿಗೂ 6 ಬಾರಿ ಸೆಮಿಫೈನಲ್ ತಲುಪಿದ್ದು, ಒಮ್ಮೆ ಕೂಡಾ ಸೋಲು ಕಂಡಿಲ್ಲ. ಐದು ಬಾರಿ ಗೆಲುವು ಸಾಧಿಸಿದ್ದು, ಒಂದು ಪಂದ್ಯ ಟೈ ಮಾಡಿಕೊಂಡಿದೆ. ಹೀಗಾಗಿ ಆಸ್ಟ್ರೇಲಿಯಾಕ್ಕೆ ಮೊದಲ ಬಾರಿ ಸೆಮೀಸ್ ನಲ್ಲಿ ಸೋಲುಣಿಸಿದ ದಾಖಲೆ ಧೋನಿ ನಿರ್ಮಿಸಬಹುದು.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications