ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಆಸೀಸ್ ಕಾಳಗದ 10 ಇಂಟರೆಸ್ಟಿಂಗ್ ಸಂಗತಿ

By Prasad

ಸಿಡ್ನಿ, ಮಾ. 21 : ವಿಶ್ವಕಪ್‌ನ ನಾಲ್ಕು ಬಲಿಷ್ಠ ತಂಡಗಳು ಸೆಮಿಫೈನಲ್‌ನಲ್ಲಿ ಕಾದಾಡಲು ಕೆನೆದಾಡುತ್ತಿವೆ. ಮಾ.24ರಂದು ನಡೆಯಲಿರುವ ಮೊದಲ ಸೆಮಿ ಫೈನಲ್ ನಲ್ಲಿ ಅಜೇಯವಾಗುಳಿದಿರುವ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದರೆ, ಮಾ.26ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ನಲ್ಲಿ ಡಿಫೆಂಡಿಂಗ್ ಚಾಂಪಿಯನ್ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಸೆಡ್ಡು ಹೊಡೆಯಲಿದೆ.

ಸಹಜವಾಗಿ ಎಲ್ಲರ ಕಣ್ಣು, ಈ ಚಾಂಪಿಯನ್‌ಶಿಪ್‌ನಲ್ಲಿ ಅಜೇಯವಾಗುಳಿದಿದ್ದಲ್ಲದೆ ಎಲ್ಲ ತಂಡಗಳನ್ನು ಎಲ್ಲ ಪಂದ್ಯಗಳಲ್ಲಿ ಆಲೌಟ್ ಮಾಡಿ, ತನ್ನ ಬೌಲಿಂಗ್ ಶಕ್ತಿ ಏನೆಂದು ತೋರಿಸಿರುವ ಭಾರತ ಮತ್ತು ಹೋಸ್ಟ್ ಆಸ್ಟ್ರೇಲಿಯಾದ ಮೇಲೆ ನೆಟ್ಟಿದೆ. ಆಸಕ್ತಿಕರ ಸಂಗತಿಯೆಂದರೆ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎಂದೂ ಸೋತಿಲ್ಲ!

ಕ್ವಾರ್ಟರ್ ಫೈನಲ್ ನಲ್ಲಿ ಬಾಂಗ್ಲಾದೇಶವನ್ನು 109 ರನ್‌ಗಳಿಂದ ಸದೆಬಡಿದ ಭಾರತ ಸೆಮಿ ಫೈನಲ್ ತಲುಪಿದೆ. ಮತ್ತೊಂದು ಕ್ವಾರ್ಟರ್ ಫೈನಲ್ ನಲ್ಲಿ ಐದನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ತಂಡ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಕಷ್ಟಪಟ್ಟು ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಹಾಕಿದೆ. [ಇಂಡಿಯಾಗೆ ಬಹು ಪರಾಕ್ ಎಂದ ಮೋದಿ]

10 facts about India-Australia World Cup semi-final in Sydney

ಎರಡೂ ತಂಡಗಳ ನಡುವಿನ 10 ಇಂಟರೆಸ್ಟಿಂಗ್ ಸಂಗತಿಗಳತ್ತ ಕಣ್ಣು ಹಾಯಿಸಿ

1. ವಿಶ್ವಕಪ್‌ನಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಮತ್ತು ಆಸ್ಟ್ರೇಲಿಯಾ ಎದರಾಬದರಾಗುತ್ತಿವೆ. ಈ ಮೊದಲು ಸೂಪರ್ ಸಿಕ್ಸ್, ಕ್ವಾರ್ಟರ್ ಫೈನಲ್ ಮತ್ತು ಫೈನಲ್‌ನಲ್ಲಿ ಎದುರಾಗಿದ್ದವು.

2. ಈವರೆಗೆ ಭಾರತ ಮತ್ತು ಆಸ್ಟ್ರೇಲಿಯಾಗಳು 10 ಬಾರಿ ಕಾದಾಡಿದ್ದು, ಆಸ್ಟ್ರೇಲಿಯಾ 7ರಲ್ಲಿ ಗೆದ್ದಿದ್ದರೆ, ಭಾರತ ಕೇವಲ 3 ಬಾರಿ ಗೆಲುವು ಸಾಧಿಸಿದೆ.

3. ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ಒಂದೂ ಬಾರಿ ಸೋತಿಲ್ಲ. 1999ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಟೈ ಆಗಿದ್ದರೆ 5 ಬಾರಿ ಗೆದ್ದಿದೆ (1975, 1987, 1996, 2003, 2007)

4. ಭಾರತದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾ ವಿರುದ್ಧ 100ಕ್ಕೆ 100ರಷ್ಟು ಗೆಲುವು ಸಾಧಿಸಿದ್ದಾರೆ. 2011ರ ಕ್ವಾರ್ಟರ್ ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಸದೆಬಡಿದಿದ್ದರು.

5. ಈ ಟೂರ್ನಾಮೆಂಟಿನಲ್ಲಿ ಭಾರತ ಎಲ್ಲಾ 7 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಒಂದು ಪಂದ್ಯ(ನ್ಯೂಜಿಲೆಂಡ್ ವಿರುದ್ಧ)ದಲ್ಲಿ ಸೋತಿದೆ.

6. ಆಸ್ಟ್ರೇಲಿಯಾದ ವಿರುದ್ಧ ಭಾರತದ ಅಜಯ್ ಜಡೇಜಾ ಮಾತ್ರ ಸೆಂಚುರಿ ಬಾರಿಸಿದ್ದಾರೆ. ಆದರೆ, ಆಸ್ಟ್ರೇಲಿಯಾದ ಪರ ರಿಕ್ಕಿ ಪಾಂಟಿಂಗ್ 2 ಶತಕ ಬಾರಿಸಿದ್ದಾರೆ.

7. 2011ರಲ್ಲಿಯೂ ಆಡಿರುವ ಎರಡೂ ತಂಡಗಳ ಆಟಗಾರರು ಇವರೇ - ಧೋನಿ, ವಿರಾಟ್ ಕೊಹ್ಲಿ, ಆರ್ ಅಶ್ವಿನ್, ಸುರೇಶ್ ರೈನಾ, ಮೈಕೆಲ್ ಕ್ಲಾರ್ಕ್, ಶೇನ್ ವ್ಯಾಟ್ಸನ್, ಬ್ರಾಡ್ ಹಡಿನ್, ಮೈಕೆಲ್ ಜಾನ್ಸನ್.

8. ಸಿಡ್ನಿಯಲ್ಲಿ ಈ ಬಾರಿ ಭಾರತ ಮೊದಲ ಬಾರಿ ಆಡುತ್ತಿದ್ದರೆ, ಆಸ್ಟ್ರೇಲಿಯಾ ಎರಡನೇ ಬಾರಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾವನ್ನು ಸೋಲಿಸಿತ್ತು.

9. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆದ್ದರೆ, ಸತತ ಎರಡನೇ ಬಾರಿ ಫೈನಲ್ ತಲುಪಿದ ದಾಖಲೆ ಸೃಷ್ಟಿಸಲಿದೆ. ಈಹಿಂದೆ ಫೈನಲ್ ತಲುಪಿದ್ದು - 1983 (ಗೆದ್ದಿದೆ), 2003 (ಸೋತಿತು), 2011 (ಗೆದ್ದಿದೆ). ಆಸ್ಟ್ರೇಲಿಯಾ 6 ಬಾರಿ ಫೈನಲ್ ತಲುಪಿದೆ - 1975 (ಸೋತಿತು), 1987 (ಗೆದ್ದಿತು), 1996 (ಸೋತಿತು), 1999 (ಗೆದ್ದಿತು), 2003 (ಗೆದ್ದಿತು), 2007 (ಗೆದ್ದಿತು).

10. ಒಂದು ವೇಳೆ ಸೆಮಿ ಫೈನಲ್ ರದ್ದಾದರೆ, ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗುಳಿದು, ಪೂಲ್ ಬಿನಲ್ಲಿ ನಂ.1 ಸ್ಥಾನ ಪಡೆದಿದ್ದ ಭಾರತ ನೇರವಾಗಿ ಫೈನಲ್ ತಲುಪಲಿದೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X