ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ವಿಶ್ವಕಪ್ ಗೆಲ್ಲಬೇಕು: ಪಾಕಿಸ್ತಾನಿ ಫ್ಯಾನ್

By Mahesh

ಬೆಂಗಳೂರು, ಮಾ.25: ಭಾರತದ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲಿ ಎಂಬ ಆಸೆ ಇದೆ. ಅದರೆ, ಪಾಕಿಸ್ತಾನ ಅಪ್ಪಟ ಕ್ರಿಕೆಟ್ ಪ್ರೇಮಿಯೊಬ್ಬರು ಧೋನಿ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಕನಸು ಕಂಡಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಪಂದ್ಯ ಎಲ್ಲೇ ನಡೆದರೂ ಕಷ್ಟಪಟ್ಟು ಟಿಕೆಟ್ ಪಡೆದು ಪಂದ್ಯ ವೀಕ್ಷಿಸುವ ಈ ಕ್ರಿಕೆಟ್ ಪ್ರೇಮಿಗೆ ಮಾ.29ರಂದು ಮೆಲ್ಬೋರ್ನ್ ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ಭರ್ಜರಿ ಸಿಕ್ಸರ್ ಮೂಲಕ ಪಂದ್ಯ ಗೆಲ್ಲಿಸಬೇಕು ಎಂಬ ಆಸೆ ಇದೆಯಂತೆ.

<strong>ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</strong>ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ

ಕರಾಚಿ ಮೂಲದ ಮಹಮ್ಮದ್ ಬಷೀರ್ ರನ್ನು ನೀವು ಮೈದಾನದಲ್ಲಿ ನೋಡಿರಬಹುದು. ಭಾರತದ ಸಚಿನ್ ಭಕ್ತ ಸುಧೀರ್ ಇದ್ದಂತೆ ಬಷೀರ್ ಅವರು ಧೋನಿ ಭಕ್ತ. ಧೋನಿ ಅವರ ಪಂದ್ಯಗಳನ್ನು ನೋಡಲು ದೇಶದಿಂದ ದೇಶಕ್ಕೆ ಬರುತ್ತಾರೆ. ಕೆಲವೊಮ್ಮೆ ಟಿಕೆಟ್ ಸಿಗದೆ ದೇವರ ಮೊರೆ ಹೋಗುತ್ತಾರೆ. ಬಷೀರ್ ಪಾಲಿನ ದೇವರಾದ ಧೋನಿ ಟಿಕೆಟ್ ಕೊಡಿಸುತ್ತಾರೆ ಇದೆಲ್ಲವೂ 2011ರಿಂದ ನಡೆದುಕೊಂಡು ಬಂದಿದೆ.

Pakistan's cricket fan loves Dhoni, wants India to win World Cup

ಧೋನಿ ಪುತ್ರಿ ಲಕ್ ಇದೆ: 2011ರಲ್ಲಿ ಧೋನಿಗೆ ಅವರ ಪತ್ನಿ ಸಾಕ್ಷಿ ಲಕ್ ಇತ್ತು. ಈಗ ಅವರ ಪುತ್ರಿ ಅದೃಷ್ಟ ತರುತ್ತಾಳೆ. ನಾನು ಮೂಲತಃ ಕರಾಚಿಯವನಾದರೂ ಚಿಕಾಗೋದಲ್ಲಿ ನೆಲೆಸಿದ್ದೇನೆ. ನನ್ನ ಪತ್ನಿ ರಫೀಯಾ ಭಾರತದ ಹೈದರಾಬಾದ್ ಮೂಲದವರು. ಧೋನಿ ನನ್ನ ಪಾಲಿನ ಹೀರೋ ಎಂದು 62 ವರ್ಷದ ಅಪ್ಪಟ ಅಭಿಮಾನಿ ಬಷೀರ್ ಮೆಲ್ಬೋರ್ನ್ ನಲ್ಲಿ ಗಲ್ಫ್ ನ್ಯೂಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ. [ಫೈನಲ್ ಪಂದ್ಯಗಳ ಮೆಲುಕು]

ಭಾರತ ಪಂದ್ಯಗಳನ್ನು ವೀಕ್ಷಿಸಲು ಬರುವ ಬಷೀರ್ ತಮ್ಮ ಟೀ ಶರ್ಟ್ ಮೇಲೆ 'ಐ ಲವ್ ಯೂ ಧೋನಿ' ಎಂದು ಬರಹ ಅಚ್ಚು ಹಾಕಿಸಿಕೊಂಡು ಬರುತ್ತಾರೆ. ವಿಶ್ವಕಪ್, ವಿಶ್ವಟಿ20,ಚಾಂಪಿಯನ್ಸ್ ಟ್ರೋಫಿ ಹೀಗೆ ಧೋನಿ ಕಪ್ ಎತ್ತಿದಾಗೆಲ್ಲ ಮಗುವಿನಂತೆ ಎರಡು ಕೈ ಮೇಲೆತ್ತಿ ಬಷೀರ್ ಕುಣಿದಾಡಿದ್ದಾರೆ.

MS Dhoni with 2011 WC trophy

ಧೋನಿ ಕೊಟ್ಟ ಗಿಫ್ಟ್: 2011ರ ವಿಶ್ವಕಪ್ ನಲ್ಲಿ ಮ್ಯಾಚ್ ಟಿಕೆಟ್ ಸಿಗುವುದು ಕಷ್ಟವಾಗಿದ್ದ ಸಂದರ್ಭದಲ್ಲಿ ಧೋನಿ ನನಗೆ ಟಿಕೆಟ್ ಕೊಡಿಸಿದರು. ನಾನು ಹಸಿದಿದ್ದಾಗ ಸ್ಯಾಂಡ್ ವಿಚ್ ಕೊಟ್ಟರು. ಅವರು ಎಷ್ಟೇ ದೊಡ್ಡ ಸೆಲೆಬ್ರಿಟಿಯಾದರೂ ಸರಳ ಜೀವಿ. ಅವರ ಮಗು ಅವರಿಗೆ ಲಕ್ ತರುತ್ತದೆ ಎಂದು ನಾನು ನಂಬಿದ್ದೇನೆ ಎಂದು ಬಷೀರ್ ಖುಷಿಯಿಂದ ಹೇಳಿದರು.

ಇದಕ್ಕೂ ಮುನ್ನ ಬಾಂಗ್ಲಾದೇಶದಲ್ಲಿ ನಡೆದ ವಿಶ್ವ ಟಿ20 ಫೈನಲ್ ಪಂದ್ಯ ಹಾಗೂ ಬೆಂಗಳೂರಿನಲ್ಲಿ 2012ರಲ್ಲಿ ನಡೆದ ಭಾರತ-ಪಾಕಿಸ್ತಾನ ಕದನ ವೀಕ್ಷಿಸಲು ಬಷೀರ್ ಗೆ ಧೋನಿ ನೆರವಾಗಿದ್ದಾರೆ.

ವಿಶ್ವಕಪ್ 2015 ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಧೋನಿಯನ್ನು ಭೇಟಿ ಮಾಡಿ ಆತ್ಮೀಯ ಅಪ್ಪುಗೆ ನೀಡಿ ಮತ್ತೊಮ್ಮೆ 'ನಿಮ್ಮ ಪುತ್ರಿ ನಿಮಗೆ ಅದೃಷ್ಟ ತರಲಿ, ಭಾರತಕ್ಕೆ ವಿಶ್ವಕಪ್ ಜೊತೆ ಮರಳಿ' ಎಂದು ಬಷೀರ್ ಹಾರೈಸಿದ್ದಾರೆ. ಬಷೀರ್ ಹಾರೈಕೆ ನಿಜವಾಗಲಿ, ಧೋನಿ-ಬಷೀರ್ ಬಾಂಧವ್ಯ ಹೀಗೆ ಮುಂದುವರೆಯಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ.



ಮತ್ತೊಬ್ಬ ಬೆಂಬಲಿಗ:
ಸಿಡ್ನಿಯಲ್ಲಿ ಕ್ಯಾಬ್ ಡ್ರೈವರ್ ಆಗಿರುವ ಪಾಕಿಸ್ತಾನಿ ಜೊತೆ ಮಾತನಾಡಿದ ಒನ್ ಇಂಡಿಯಾ ಪ್ರತಿನಿಧಿ ಮಾತನಾಡಿದಾಗ ಭಾರತ ಉತ್ತಮ ತಂಡ ಹೊಂದಿದ್ದು, ಭಾರತ ಕಪ್ ಗೆಲ್ಲಲಿದೆ ಎಂದಿದ್ದಾರೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X