Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ಓಪನ್ ಫೈನಲ್: ರಾಫೆಲ್ ನಡಾಲ್ ಐತಿಹಾಸಿಕ ಗೆಲುವಿಗೆ ಇನ್ನೊಂದೇ ಹೆಜ್ಜೆ

Rafael Nadal

ಆಸ್ಟ್ರೇಲಿಯನ್ ಓಪನ್ ಟೆನಿಸ್ ಸರಣಿ ಇದೀಗ ಕ್ಲೈಮ್ಯಾಕ್ಸ್ ತಲುಪಿದೆ. ಯಾರು ಚಾಂಪಿಯನ್‌ಷಿಪ್‌ ಗೆಲ್ಲುತ್ತಾರೆ ಎಂಬುದು ಭಾನುವಾರ ತಿಳಿಯಲಿದೆ. ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್‌ರ ಅತಿ ಹೆಚ್ಚು ಗ್ರ್ಯಾಂಡ್‌ಸ್ಲ್ಯಾಮ್ ಗೆಲುವಿನ ದಾಖಲೆಗೆ ಪೈಪೋಟಿ ನಡೆಸುತ್ತಿರುವ ಸ್ಪೇನ್‌ನ ಗೂಳಿ ರಾಫೆಲ್ ನಡಾಲ್ ಈಗಾಗಲೇ ಫೈನಲ್ ಪ್ರವೇಶಿಸಿದ್ದಾರೆ.

ರೋಜರ್ ಫೆಡರರ್ ಮತ್ತು ಜೊಕೊವಿಕ್‌ರ ದಾಖಲೆ ಮುರಿಯಲು ಮತ್ತು 21ನೇ ಪ್ರಶಸ್ತಿ ತನ್ನದಾಗಿಸಿಕೊಳ್ಳಲು ನಡಾಲ್‌ಗೆ ಇನ್ನೊಂದು ಗೆಲುವಷ್ಟೇ ಬೇಕಿದೆ. ಫೆಡರರ್, ನಡಾಲ್ ಹಾಗೂ ಜೊಕೊವಿಕ್ ತಲಾ 20 ಗ್ರ್ಯಾಂಡ್ ಸ್ಲ್ಯಾಮ್‌ ಪ್ರಶಸ್ತಿಗಳನ್ನ ಜಯಿಸಿದ್ದಾರೆ. ಆದ್ರೀಗ ನಡಾಲಗೆ ಅತಿ ಹೆಚ್ಚು ಗ್ರ್ಯಾಂಡ್‌ ಸ್ಲ್ಯಾಮ್ ಗೆಲ್ಲುವ ದಾಖಲೆ ಬರೆಯಲು ಅವಕಾಶ ಸಿಕ್ಕಿದೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಸ್ಟಾರ್ ಆಟಗಾರ ನಡಾಲ್ ಹಾಗೂ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಮೆಡ್ವೆಡೆವ್ ಮುಖಾಮುಖಿಯಾಗಲಿದ್ದು, ಭಾರತೀಯ ಕಾಲಮಾನ ಭಾನುವಾರ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯ ಟೆನಿಸ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಅದಕ್ಕೆ ಕಾರಣ ನಡಾಲ್ ಸೃಷ್ಟಿಸಬೇಕಾದ ದಾಖಲೆ.

ನಡಾಲ್ ಎದುರಾಳಿ ಉತ್ತಮ ಫಾರ್ಮ್‌ನಲ್ಲಿದ್ದಾರೆ!
ಈಗಾಗಲೇ ದಾಖಲೆ ನಿರ್ಮಿಸಿದ್ದ ಜೊಕೊವಿಕ್ ಅವರನ್ನು ಕಳೆದ ವರ್ಷದ ಯುಎಸ್ ಓಪನ್ ಫೈನಲ್‌ನಲ್ಲಿ ರಷ್ಯಾದ ಮೆಡ್ವೆಡೆವ್ ಸೋಲಿಸಿದ್ದರು. ಮೆಡ್ವೆಡೆವ್ ಪ್ರಸ್ತುತ ನಡಾಲ್‌ಗೆ ಸವಾಲು ಹಾಕುತ್ತಿದ್ದಾರೆ. ಮೆಡ್ವೆಡೆವ್ ಅವರು ನಡಾಲ್‌ಗಿಂತತ 10 ವರ್ಷ ಚಿಕ್ಕವರಾಗಿದ್ದು, ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಮೆಡ್ವೆಡೆವ್, ನಡಾಲ್ ದಾಖಲೆಯ ಸಮೀಪದಲ್ಲಿದ್ದರು. ಇದನ್ನು ಗೆದ್ದರೆ ಅವರು 21ನೇ ಪ್ರಶಸ್ತಿ ಹೊಂದಿರುತ್ತಾರೆ. ನನಗೆ ಇದು ಕೇವಲ 2. ಇದರಿಂದ ನಡಾಲ್ ಮೇಲೆ ಒತ್ತಡ ಬೀಳುತ್ತದೆ. ಅದೇ ಒತ್ತಡದಲ್ಲಿ ಜೊಕೊವಿಚ್ ಕೂಡ ಇದ್ದರು, ಆದ್ರೀಗ ನನ್ನ ಪಾಲಿಗೆ ಉತ್ತಮ ಅವಕಾಶವಾಗಿದ್ದು, ನಾನು ಖಂಡಿತ ಗೆಲ್ಲುತ್ತೇನೆ ಎಂಬ ಭರವಸೆ ಇದೆ ಎಂದರು.

ಇವರಿಬ್ಬರು 2019ರ ಯುಎಸ್ ಓಪನ್‌ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದರು. ನಡಾಲ್ ಮೆಡ್ವೆಡೆವ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದರು. ಹೀಗಾಗಿ ಮೆಡ್ವೆಡೆವ್ ನಡಾಲ್‌ ಮೇಲೆ ಸೇಡು ತೀರಿಸಿಕೊಳ್ಳಲು ರೆಡಿಯಾಗಿದ್ದಾರೆ. ಇಬ್ಬರು ಇದುವರೆಗೆ 4 ಬಾರಿ ಮುಖಾಮುಖಿಯಾಗಿದ್ದಾರೆ. ನಡಾಲ್ ಮೂರು ಬಾರಿ ಮತ್ತು ಮೆಡ್ವೆಡೆವ್ ಒಮ್ಮೆ ಗೆದ್ದಿದ್ದಾರೆ. ನಡಾಲ್ ದಾಖಲೆ ಸೃಷ್ಟಿಸುತ್ತಾರೋ ಅಥವಾ ಮೆಡ್ವೆಡೆವ್ ತಿರುಗೇಟು ನೀಡುತ್ತಾರೋ ಎಂಬುದು ಭಾನುವಾರ ತಿಳಿಯಲಿದೆ.

ರಾಫೆಲ್ ನಡಾಲ್ ಸೆಮಿಫೈನಲ್‌ನಲ್ಲಿ ಇಟಲಿಯ ಮ್ಯಾಟಿಯೊ ಬೆರಟ್ಟಿನಿ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಡಾಲ್ 14ನೇ ಶ್ರೇಯಾಂಕದ ಕೆನಡಾದ ಡೆನಿಸ್ ಶಪೊವಾಲೊವ್ ಅವರನ್ನು ಸೋಲಿಸಿದರು.

Story first published: Saturday, January 29, 2022, 23:15 [IST]
Other articles published on Jan 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+