ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು? ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾನಿಯಾ ಹೇಳಿದ್ದೇನು?

ಭಾರತದ ಏಸ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪತಿ ಶೋಯೆಬ್ ಮಲಿಕ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಸುದ್ದಿಗಳು ಹರಿದಾಡುತ್ತಿದೆ. ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನಲು ಕಾರಣ ಆಕೆಯ ಇತ್ತೀಚಿನ ಇನ್‌ಸ್ಟಾಗ್ರಾಮ್ ಸ್ಟೋರಿ ಆಗಿದೆ.
ಈ ಸೆಲೆಬ್ರೆಟಿ ದಂಪತಿಗಳು ದೂರವಾಗುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಸಾನಿಯಾ ಇನ್‌ಸ್ಟಾಗ್ರಾಮ್ ಸ್ಟೋರಿಯು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಸಾನಿಯಾ ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ನಿಗೂಢ ರೀತಿಯಲ್ಲಿ ಸಂದೇಶವನ್ನು ಹರಿಬಿಟ್ಟಿತ್ತು, ಆಕೆಯ ಖಾಸಗಿ ಜೀವನವು ಎಲ್ಲವೂ ಸರಿಯಿಲ್ಲ ಎಂಬಂತೆ ಗೋಚರಿಸುತ್ತಿದೆ.
ಏಪ್ರಿಲ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲ್ಲಿಕ್ ದಂಪತಿಗೆ 4 ವರ್ಷದ ಮಗನಿದ್ದಾನೆ. ಈತನ ಹೆಸರು ಇಜಾನ್ ಮಿರ್ಜಾ ಮಲ್ಲಿಕ್. ಇದೇ ವರ್ಷದಲ್ಲೇ ಟೆನಿಸ್ ಸ್ಟಾರ್ ಸಾನಿಯಾ ಮತ್ತು ಪಾಕಿಸ್ತಾನ ಕ್ರಿಕೆಟರ್ ಶೋಯೆಬ್ ಮಲಿಕ್ ಇಜ್ಹಾನ್ ಹುಟ್ಟುಹಬ್ಬ ಆಚರಿಸಲು ದುಬೈಗೆ ತೆರಳಿದ್ದರು.
ಒಡೆದ ಹೃದಯಗಳು ಎಲ್ಲಿ ಹೋಗುತ್ತವೆ?
ಸದ್ಯ ಹರಿದಾಡಿರುವ ವದಂತಿಯ ಪ್ರಕಾರ ಈ ಸ್ಟಾರ್ ದಂಪತಿಯ ಖಾಸಗಿ ಜೀವನವು ಅಷ್ಟಾಗಿ ಚೆನ್ನಾಗಿಲ್ಲ ಎನ್ನಲಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇನ್‌ಸ್ಟಾಗ್ರಾಮ್ ಸ್ಟೋರಿ ಬ್ರೇಕಪ್ ರೀತಿಯ ಸಂದೇಶವನ್ನು ಹೊಂದಿದ್ದು, ಬಹುಶಃ ಸಾನಿಯ-ಶೋಯೆಬ್ ದೂರವಾಗಿರಬಹುದು ಎಂದು ಸುದ್ದಿಯಾಗಿದೆ.
ಸಾನಿಯಾ ಮಿರ್ಜಾ ತನ್ನ ಇನ್‌ಸ್ಟಾಗ್ರಾಮ್‌ಲ್ಲಿ ''ಒಡೆದ ಹೋದ ಹೃದಯಗಳು ಎಲ್ಲಿ ಹೋಗುತ್ತವೆ? ಅಲ್ಲಾನನ್ನು ಹುಡುಕಲು'' ಎಂಬ ಸಂದೇಶ ಹಾಕಿದ್ದಾರೆ. ಈ ನಿಗೂಢ ರೀತಿಯ ಸಂದೇಶವನ್ನು ಸಾನಿಯಾ ಪೋಸ್ಟ್ ಮಾಡಿದ ಬೆನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಟ್ರಾವಿಸ್ ಹೆಡ್ ಕಂಬ್ಯಾಕ್
ಕಷ್ಟದ ದಿನಗಳನ್ನ ನೆನೆದು ಪೋಸ್ಟ್ ಮಾಡಿದ್ದ ಸಾನಿಯಾ
ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ತನ್ನ ಪೋಸ್ಟ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಮಗನೊಂದಿಗೆ ಅಮೂಲ್ಯ ಕ್ಷಣಗಳನ್ನ ಕಳೆಯುತ್ತಿರುವ ಫೋಟೋವೊಂದನ್ನು ಹರಿಬಿಟ್ಟಿದ್ದ ಸಾನಿಯಾ ''ಕಷ್ಟದ ದಿನಗಳಲ್ಲಿ ನನಗೆ ಸಿಕ್ಕ ಕ್ಷಣಗಳು'' ಎಂದು ಶೀರ್ಷಿಕೆ ನೀಡಿದ್ದರು.
ಆದ್ರೆ ಸಾನಿಯಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ ಎಂದು ಸಂದೇಶ ನೀಡುತ್ತಿದ್ದಂತೆ ಒಂದಕ್ಕೊಂದು ಫೋಟೋಗಳ ಜೊತೆಗೆ ಶೀರ್ಷಿಕೆಯ ಹೋಲಿಕೆ ಶುರುವಾಗಿದ್ದು, ಸಾನಿಯಾ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲವೆಂಬಂತೆ ಗೋಚರವಾಗುತ್ತಿದೆ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಎಲ್ಲಿಯೂ ತಮ್ಮ ದಾಂಪತ್ಯ ಬಿರುಕಿನ ಕುರಿತಾಗಿ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಜಾಕೆಟ್ ವಾಸನೆ ನೋಡಿ ಫುಲ್ ಟ್ರೋಲ್ ಆದ ರವಿಚಂದ್ರನ್ ಅಶ್ವಿನ್: ಕಾಲೆಳೆದ ಹರ್ಭಜನ್ ಸಿಂಗ್

ಟಿ20 ವಿಶ್ವಕಪ್ ಪಾಕಿಸ್ತಾನ ಸ್ಕ್ವಾಡ್‌ನಲ್ಲಿ ಅವಕಾಶ ಪಡೆಯದ ಶೋಯೆಬ್ ಮಲಿಕ್
ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ಗಾಗಿ ಸ್ಕ್ವಾಡ್ ಘೋಷಿಸಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಯ್ಕೆಯಲ್ಲಿ ಅಚ್ಚರಿಯನ್ನು ನೀಡಿತ್ತು. ಏಕೆಂದರೆ ಸ್ಕ್ವಾಡ್‌ನಲ್ಲಿ ಅನುಭವಿ ಬ್ಯಾಟರ್ ಶೋಯೆಬ್ ಮಲಿಕ್ಗೆ ಕೊಕ್ ನೀಡಲಾಯಿತು. ಕಳೆದ ಟಿ20 ವಿಶ್ವಕಪ್‌ನಲ್ಲಿ ಆತನ ಅನುಭವವು ತಂಡಕ್ಕೆ ನೆರವಾಗಿತ್ತು. ಆದ್ರೆ ಈ ಬಾರಿ ಶೋಯೆಬ್ ಮಲಿಕ್ ಆಯ್ಕೆ ಪಾಕ್ ಕ್ರಿಕೆಟ್ ಮಂಡಳಿ ಹಿಂದೇಟು ಹಾಕಿತು.
ಪ್ರಸ್ತುತ ಶೋಯೆಬ್ ಮಲ್ಲಿಕ್ ತಂಡದಲ್ಲಿ ಅವಕಾಶ ಸಿಗದ ಹಿನ್ನಲೆಯಲ್ಲಿ ಪಾಕಿಸ್ತಾನ ಕ್ರೀಡಾ ಚಾನೆಲ್ A ಸ್ಪೋರ್ಟ್ಸ್‌ನಲ್ಲಿ ಚರ್ಚೆಯಲ್ಲಿ ಭಾಗವಹಿಸುತ್ತಿದ್ದು, ಪಾಕಿಸ್ತಾನದ ಲೆಜೆಂಡರಿ ಆಟಗಾರರಾದ ಮಿಸ್ಬಾ ಉಲ್ ಹಕ್, ವಕಾರ್ ಯೂನಿಸ್ ಮತ್ತು ವಾಸಿಂ ಅಕ್ರಂ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications