
ಟಿ20 ವಿಶ್ವಕಪ್‌ನಲ್ಲಿ ಆಡುವ ಆಸೆ ಹೊಂದಿರುವ ದಿನೇಶ್ ಕಾರ್ತಿಕ್
ಐಸಿಸಿ 2019ರ ವಿಶ್ವಕಪ್ ಆಡಿದ ಬಳಿಕ ಟೀಂ ಇಂಡಿಯಾದಿಂದ ಹೊರಬಿದ್ದಿದ್ದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಮೂರು ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್ ಆಗಲು ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಫಿನಿಷರ್ ರೋಲ್ ನಿಭಾಯಿಸಿದ ಕಾರ್ತಿಕ್, ಐರ್ಲೆಂಡ್ ವಿರುದ್ಧದ ಚುಟುಕು ಸರಣಿಯಲ್ಲಿ ಕೂಡ ಉತ್ತಮವಾಗಿ ಆಡಿದ್ರು. ಆದ್ರೆ ಇಂಗ್ಲೆಂಡ್ ವಿರುದ್ಧ ಕಾರ್ತಿಕ್ ಆಟವು ಕಳೆಗುಂದಿದೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಹೊರೆಯಾಗಿದ್ದಾರೆ: ಡ್ಯಾನಿಶ್ ಕನೇರಿಯಾ

ದಿನೇಶ್ ಕಾರ್ತಿಕ್‌ಗೆ ಕ್ರಿಕೆಟ್ ಪಂಡಿತರ ಎಚ್ಚರಿಕೆ
ದಿನೇಶ್ ಕಾರ್ತಿಕ್ ಟೀಂ ಇಂಡಿಯಾದಲ್ಲಿ ಹೊಸ ಫಿನಿಷರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಸ್ಥಿರ ಪ್ರದರ್ಶನ ಅನಿವಾರ್ಯವಾಗಿದೆ. ಹೀಗಿರುವಾಗಿ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯಗಳಲ್ಲಿ ಕಾರ್ತಿಕ್ ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.
ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್‌ಗಾಗಿ ರಚಿಸಲಾಗುತ್ತಿರುವ ಭಾರತ ತಂಡದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅವರು ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳಲ್ಲಿ ಉತ್ತಮವಾಗಿ ಆಡಿದರು, ಆದರೆ ಇಂಗ್ಲೆಂಡ್ ಸರಣಿಯಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದ್ದಾರೆ. ಮೊದಲ ಪಂದ್ಯದಲ್ಲಿ 7 ಎಸೆತಗಳಲ್ಲಿ 11 ರನ್ ಗಳಿಸಿದ್ದ ಅವರು 2ನೇ ಪಂದ್ಯದಲ್ಲಿ 17 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಔಟಾದರು
ಭಾರತದ ಟಿ20 ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೊಹ್ಲಿ ಇರುವುದಿಲ್ಲ: ಅಜಯ್ ಜಡೇಜಾ

ಅನಗತ್ಯ ರನೌಟ್ ಆದ ಡಿಕೆ
ಎರಡನೇ ಟಿ20 ಪಂದ್ಯದಲ್ಲಿ ಎರಡು ರನ್ ಓಡಿದ್ದ ದಿನೇಶ್ ಕಾರ್ತಿಕ್ ಅನಗತ್ಯ ರನೌಟ್‌ನಿಂದಾಗಿ ತಂಡದ ಸ್ಕೋರ್ ತಗ್ಗಲು ನೇರ ಕಾರಣವಾದ್ರು. 17 ಎಸೆತಗಳಲ್ಲಿ ಕೇವಲ 12 ಕಲೆಹಾಕಿದ್ದ ಕಾರ್ತಿಕ್ ಕೊನೆಯ ಓವರ್‌ಗಳಲ್ಲಿ ಉತ್ತಮ ಆಟವಾಡಿದ್ರೆ ತಂಡದ ಸ್ಕೋರ್ 200ರ ಗಡಿದಾಟುತ್ತಿತ್ತು. ಆದ್ರೆ ರನೌಟ್ ಆಗಿದ್ದು ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಆಡುವುದು ಅನಿವಾರ್ಯವಾಗಿದೆ ಎಂದು ಕ್ರಿಕೆಟ್ ಪಂಡಿತರು ಎಚ್ಚರಿಕೆ ನೀಡಿದ್ದಾರೆ.
ಇದರ ಜೊತೆಗೆ ರನೌಟ್ ತಪ್ಪಿಸಲು ಡೈ ಹೊಡೆದ ರೀತಿಯ ಕುರಿತಾಗಿಯು ಎಚ್ಚರಿಕೆಯಿಂದರಬೇಕು. ಒಂದು ವೇಳೆ ಗಾಯಗೊಂಡಿದ್ದೇ ಆದಲ್ಲಿ ಆತನ ತಂಡದಿಂದ ಕೈ ಬಿಡುವ ಪರಿಸ್ಥಿತಿ ಎದುರಾಗಬಹುದು. ಮೊದಲೇ ಬೆಂಚ್‌ನಲ್ಲಿ ಸಾಕಷ್ಟು ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿರುವಾಗ ದಿನೇಶ್ ಕಾರ್ತಿಕ್ ಮತ್ತೊಂದು ಅವಕಾಶಕ್ಕಾಗಿ ಕಾಯುವುದು ಸರಿಯಲ್ಲ.
ರಿಕಿ ಪಾಂಟಿಂಗ್ ವಿಶ್ವದಾಖಲೆ ಸರಿಗಟ್ಟಲು, ರೋಹಿತ್‌ಗೆ ಇನ್ನೊಂದೇ ಹೆಜ್ಜೆ


Click it and Unblock the Notifications
