For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಅನುಪಸ್ಥಿತಿಯಲ್ಲಿ ವಿರಾಟ ರೂಪ ಪ್ರದರ್ಶಿಸಿದ ಸೂರ್ಯಕುಮಾರ್: 3ನೇ ಕ್ರಮಾಂಕಕ್ಕೆ ಎದುರಾಯ್ತು ಕಠಿಣ ಸ್ಪರ್ಧೆ!

Suryakumar yadav

ಭಾರತದ ಮಿಸ್ಟರ್ 360 ಪ್ಲೇಯರ್ ಎಂದೇ ಖ್ಯಾತಿ ಪಡೆದಿರುವ ಯುವ ಕ್ಲಾಸಿಕ್ ಆಟಗಾರ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಕಿವೀಸ್ ತಂಡದಿಂದ ಗೆಲುವನ್ನ ಕಸಿದುಕೊಂಡಿದ್ದಾರೆ.

ನ್ಯೂಜಿಲೆಂಡ್ ನೀಡಿದ 165ರನ್‌ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಭರ್ಜರಿ ಆರಂಭವನ್ನೇನೊ ಪಡೆಯಿತು. 5 ಓವರ್‌ಗಳೊಳಗೆ 50 ರನ್ ದಾಖಲಿಸಿತು. ಆದ್ರೆ ರಾಹುಲ್ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಮಿಚೆಲ್ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದ್ರು.

ಉಪನಾಯಕ ರಾಹುಲ್ ನಿರ್ಗಮನದ ಬಳಿಕ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಅತ್ಯಂತ ಸುಲಭವಾಗಿ, ಲೀಲಾಜಾಲವಾಗಿ ಬ್ಯಾಟ್‌ ಬೀಸುವ ಮೂಲಕ ಅಭಿಮಾನಿಗಳ ರಂಜಿಸಿದ್ದಲ್ಲದೆ, ಕಿವೀಸ್ ಬೌಲರ್‌ಗಳನ್ನ ಚಳಿಯಲ್ಲೂ ಬೆವರಿಸಿಬಿಟ್ರು.

ಬೌಂಡರಿ ಸಿಕ್ಸರ್‌ಗಳ ಬೇಟೆಯಾಡಿದ ಸೂರ್ಯಕುಮಾರ್

ಬೌಂಡರಿ ಸಿಕ್ಸರ್‌ಗಳ ಬೇಟೆಯಾಡಿದ ಸೂರ್ಯಕುಮಾರ್

40 ಎಸೆತಗಳಲ್ಲಿ 62 ರನ್‌ಗಳನ್ನ ಸಿಡಿಸಿದ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವನ್ನ ವಹಿಸಿದ್ರು. ಆಕರ್ಷಕ ಬ್ಯಾಟಿಂಗ್ ಜೊತೆಗೆ 155ರ ಸ್ಟ್ರೈಕ್‌ರೇಟ್‌ ಬ್ಯಾಟ್‌ ಬೀಸಿದ ಸೂರ್ಯ ಟೀಮ್ ಇಂಡಿಯಾವನ್ನ ಸುರಕ್ಷಿತ ಹಂತಕ್ಕೆ ತಲುಪಿಸಿದ್ರು. ರೋಹಿತ್ ಜೊತೆಗೂಡಿ ಮುಂಬೈ ಇಂಡಿಯನ್ಸ್ ಪರ ಅದೆಷ್ಟೋ ಇನ್ನಿಂಗ್ಸ್ ಕಟ್ಟಿರುವ ಯಾದವ್‌ಗೆ ನ್ಯೂಜಿಲೆಂಡ್ ಎದುರು ಬ್ಯಾಟ್ ಬೀಸುವುದು ಅಷ್ಟು ಕಷ್ಟವೆನಿಸಲಿಲ್ಲ.

ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಧಾರವಾದ ಬ್ಯಾಟ್ಸ್‌ಮನ್

ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಧಾರವಾದ ಬ್ಯಾಟ್ಸ್‌ಮನ್

ವಿರಾಟ್ ಕೊಹ್ಲಿ ವಿಶ್ರಾಂತಿ ಆಧರಿಸಿ ಟಿ20 ಸರಣಿಯಿಂದಲೇ ಹೊರಗುಳಿದಿದ್ದಾರೆ. ಕೊಹ್ಲಿ ನೆಚ್ಚಿನ ಮತ್ತು ಖಾಯಂ ಕ್ರಮಾಂಕವಾದ ಮೂರನೇ ಆರ್ಡರ್‌ನಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ವಿರಾಟ್‌ ರೀತಿಯಲ್ಲೇ ಎದುರಾಳಿ ಬೌಲರ್‌ಗಳನ್ನ ಹುರಿದು ಮುಕ್ಕಿದ್ರು. ಚೇಸಿಂಗ್‌ ಮಾಸ್ಟರ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಕೈ ಹಿಡಿದು ನಡೆಸಿದ ಯಾದವ್ ಭಾರತಕ್ಕೆ ಗೆಲುವಿನ ಮಾಲೆ ತೊಡಿಸಿದ್ರು.

ಟೀಂ ಇಂಡಿಯಾಗೆ ಗೆಲುವಿನ ಶುಭಾರಂಭ: ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಗೆಲುವು

ಮೂರನೇ ಕ್ರಮಾಂಕದಲ್ಲಿ ಎದುರಾಯ್ತು ಕಠಿಣ ಸ್ಪರ್ಧೆ

ಮೂರನೇ ಕ್ರಮಾಂಕದಲ್ಲಿ ಎದುರಾಯ್ತು ಕಠಿಣ ಸ್ಪರ್ಧೆ

ಹೊಸ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್ ರಾಹುಲ್ ಇನ್ಮುಂದೆ ಟಿ20 ಪಂದ್ಯಗಳಲ್ಲಿ ಬಹುತೇಕ ನೆಚ್ಚಿನ ಓಪನಿಂಗ್ ಜೋಡಿ ಆಗಿರೋದ್ರಲ್ಲಿ ಅನುಮಾನವಿಲ್ಲ. ಆದ್ರೆ ಮೂರನೇ ಕ್ರಮಾಂಕದಲ್ಲಿ ಆಡ್ತಿದ್ದ ವಿರಾಟ್ ಕೊಹ್ಲಿ, ಮುಂದಿನ ಟಿ20 ಸರಣಿಗಳಲ್ಲಿ ಮತ್ತೆ ಮೂರನೇ ಕ್ರಮಾಂಕದಲ್ಲೇ ಆಡ್ತಾರ ಅನ್ನೋದು ಕೂಡ ಚರ್ಚೆಗೆ ಕಾರಣವಾಗಿದೆ. ಸೂರ್ಯಕುಮಾರ್ ಯಾದವ್ ಕೊಹ್ಲಿ ಜಾಗದಲ್ಲಿ ಸಿಕ್ಕ ಅವಕಾಶವನ್ನ ಸದುಪಯೋಗ ಪಡಿಸಿಕೊಂಡಿದ್ದಾರೆ. ಇನ್ನುಳಿದ ಎರಡು ಟಿ20 ಪಂದ್ಯದಲ್ಲೂ ಉತ್ತಮ ಆಟ ಪ್ರದರ್ಶಿಸುವ ಆಸೆ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಕೊಹ್ಲಿ ವಾಪಸ್ ಬಂದ ಮೇಲೂ ರೋಹಿತ್ ಸೂರ್ಯಕುಮಾರ್‌ನನ್ನ ಮೂರನೇ ಕ್ರಮಾಂಕದಲ್ಲಿ ಮುಂದುವರಿಸಿ, ಕೊಹ್ಲಿಗೆ ನಾಲ್ಕನೇ ಕ್ರಮಾಂಕದಲ್ಲಿ ಆಡುವಂತೆ ಸೂಚಿಸಬಹುದಾ ಎಂಬ ಪ್ರಶ್ನೆ ಎದುರಾಗಿದೆ.

ಪಾಕಿಸ್ತಾನದಲ್ಲಿ ಚಾಂಪಿಯನ್ ಟ್ರೋಫಿ: 'ಸಮಯ ಬಂದಾಗ ಅಂತಿಮ ನಿರ್ಧಾರ' ಎಂದ ಅನುರಾಗ್ ಠಾಕೂರ್!

Guptill ಔಟ್ ಆದಾಗ Chahar ಹೀಗೆ ಮಾಡಿದ್ದೇಕೆ | Oneindia Kannada
ಭಾರತದ ಮಿಸ್ಟರ್ 360 ಡಿಗ್ರಿ ಪ್ಲೇಯರ್

ಭಾರತದ ಮಿಸ್ಟರ್ 360 ಡಿಗ್ರಿ ಪ್ಲೇಯರ್

ಈ ಮೊದಲೇ ತಿಳಿಸಿದಂತೆ ಸೂರ್ಯಕುಮಾರ್ ಭಾರತಕ್ಕೆ ಸಿಕ್ಕ ಮೊದಲ 360 ಡಿಗ್ರಿ ಪ್ಲೇಯರ್ ಅಂದ್ರೆ ತಪ್ಪಾಗಲಾರದು. ಮೈದಾನದ ಯಾವ ಮೂಲೆಗೆ ಬೇಕಾದ್ರು ಚೆಂಡನ್ನ ಅಟ್ಟಬಲ್ಲ ತಾಕತ್ತು ಸೂರ್ಯನಿಗಿದೆ. ಪಂದ್ಯದಿಂದ ಪಂದ್ಯಕ್ಕೆ ಮತ್ತಷ್ಟು ಪ್ರಕಾಶಮಾನವಾಗುತ್ತಿರುವ ಸೂರ್ಯಕುಮಾರ್ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯೋದ್ರಲ್ಲಿ ಅನುಮಾನವಿಲ್ಲ. ಮುಂದಿನ ದಿನಗಳಲ್ಲಿ ಕೊಹ್ಲಿ ಕಂಬ್ಯಾಕ್ ಮಾಡಿದ ಬಳಿಕ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎನ್ನುವುದು ಚರ್ಚೆ ಹುಟ್ಟುಹಾಕಿದೆ.

ಐಸಿಸಿ ಟಿ20 ಶ್ರೇಯಾಂಕ ಪಟ್ಟಿ: ರಾಹುಲ್ ಸ್ಥಾನ ಕಸಿದ ರಿಜ್ವಾನ್, 8ನೇ ಸ್ಥಾನದಲ್ಲಿ ಮುಂದುವರಿದ ಕೊಹ್ಲಿ

Story first published: Wednesday, November 17, 2021, 23:58 [IST]
Other articles published on Nov 17, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+