ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟಿ20 ಶ್ರೇಯಾಂಕ ಪಟ್ಟಿ: ರಾಹುಲ್ ಸ್ಥಾನ ಕಸಿದ ರಿಜ್ವಾನ್, 8ನೇ ಸ್ಥಾನದಲ್ಲಿ ಮುಂದುವರಿದ ಕೊಹ್ಲಿ

ICC T20I Rankings: KL Rahul lost 5th place replaced by Mohammad Rizwan Adam Zampa moves 2 places

ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದ ಬಳಿಕ ಐಸಿಸಿ ನೂತನ ಟಿ20 ಶ್ರೇಯಾಂಕಪಟ್ಟಿಯನ್ನು ಪ್ರಕಟಿಸಿದೆ. ಈ ನೂತನ ಪಟ್ಟಿಯಲ್ಲಿ ಪಾಕಿಸ್ತಾನದ ಉಪ ನಾಯಕ ಮೊಹಮ್ಮದ್ ರಿಜ್ವಾನ್ ಏರಿಕೆ ಕಂಡಿದ್ದು ಟಾಪ್ ಐದರಲ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ 8ನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಐದನೇ ಶ್ರೇಯಾಂಕದಲ್ಲಿದ್ದ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಏರಿಕೆ ಕಂಡಿದ್ದಾರೆ. ಆಡಂ ಜಂಪಾ ಎರಡು ಸ್ಥಾನಗಳ ಏರಿಕೆ ಕಂಡಿದ್ದು ಟಾಪ್ 3 ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ 3ನೇ ಅತಿ ಹೆಚ್ಚಿನ ರನ್‌ಗಳಿಸಿದ ಆಟಗಾರನಾಗಿದ್ದಾರೆ. ಟೂರ್ನಿಯಲ್ಲಿ ರಿಜ್ವಾನ್ 281 ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಮತ್ತೊಂದೆಡೆ ಬೌಲಿಂಗ್‌ನಲ್ಲಿ ಆಡಂ ಜಂಪಾ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರನಾಗುದ್ದಾರೆ. ಜಂಪಾ 13 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.

ಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರ

ಇನ್ನು ಆಡಂ ಜಂಪಾ ಅವರ ಸಹ ಆಟಗಾರರಾದ ಜೋಶ್ ಹೇಜಸ್‌ವುಡ್ ಹಾಗೂ ಮಿಚೆಲ್ ಮಾರ್ಶ್ ಕೂಡ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಉತ್ತಮ ಏರಿಕೆ ಕಂಡ ಆಟಗಾರರಾಗಿದ್ದಾರೆ. ಪವರ್‌ಪ್ಲೇನಲ್ಲಿ ಹಾಗೂ ಡೆತ್ ಓವರ್‌ಗಳಲ್ಲಿ ಹೇಜಲ್‌ವುಡ್ ಅಮೋಘ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾದ ಅದ್ಭುತ ವಿಶ್ವಕಪ್ ಅಭಿಯಾನದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿಯೂ ಕೂಡ ಹೇಜಲ್‌ವುಡ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ್ದು ನಾಲ್ಕು ಓವರ್‌ಗಳ ಬೌಲಿಂಗ್‌ನಲ್ಲಿ ಕೇವಲ 16 ರನ್‌ ನೀಡಿದ್ದು 3 ವಿಕೆಟ್ ಕಬಳಿಸಿ ನ್ಯೂಜಲೆಂಡ್ ತಂಡಕ್ಕೆ ಕಡಿವಾಣ ಹಾಕಿದರು. ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ವೇಗದ ಬೌಲರ್ ಎನಿಸಿರುವ ಹೇಜಲ್‌ವುಡ್ 11 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಬ್ಯಾಟಿಂಗ್‌ನಲ್ಲಿ ಕೂಡ ಆಟಗಾರರು ಕೆಲ ಪ್ರಮುಖ ಬದಲಾವಣೆ ಕಂಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರು ನ್ಯೂಜಿಲೆಂಡ್ ತಂಡದ ಡೆವೋನ್ ಕಾನ್ವೆ ಅಮೋಘ ಪ್ರದರ್ಶನದ ಕಾರಣಕ್ಕೆ ಅವರ ಸ್ಥಾನದಲ್ಲಿಯೂ ಏರಿಕೆಯಾಗಿದೆ. ಈ ಪಂದ್ಯದಲ್ಲಿ 46 ರನ್‌ಗಳ ಕೊಡುಗೆ ನೀಡಿದ್ದ ಅವರು ಶ್ರೇಯಾಂಕಪಟ್ಟಿಯಲ್ಲಿ 3 ಸ್ಥಾನಗಳ ಏರಿಕೆ ಕಂಡಿದ್ದು ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

ರಾಹುಲ್ ದ್ರಾವಿಡ್ 'ಟೀಂ ಮ್ಯಾನ್': ತಂಡದಲ್ಲಿ ಸಾಂಘಿಕ ಹೋರಾಟಕ್ಕೆ ಒತ್ತು ನೀಡಲಿದ್ದಾರೆ ಎಂದ KLರಾಹುಲ್ ದ್ರಾವಿಡ್ 'ಟೀಂ ಮ್ಯಾನ್': ತಂಡದಲ್ಲಿ ಸಾಂಘಿಕ ಹೋರಾಟಕ್ಕೆ ಒತ್ತು ನೀಡಲಿದ್ದಾರೆ ಎಂದ KL

ಇನ್ನು ಆಸ್ಟ್ರೇಲಿಯಾ ಪರವಾಗಿ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದು ಮಿಂಚಿದ ಮಿಚೆಲ್ ಮಾರ್ಶ್ ಫೈನಲ್ ಪಂದ್ಯದಲ್ಲಿ 50 ಎಸೆತಗಳಲ್ಲಿ 77 ರನ್‌ ಬಾರಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಮಾರ್ಶ್ 6 ಸ್ಥಾನಗಳ ಪ್ರಗತಿ ಕಂಡಿದ್ದು 13ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮತ್ತೀಓರ್ವ ಆಟಗಾರ ಡೇವಿಡ್ ವಾರ್ನರ್ 8 ಸ್ಥಾನಗಳ ಏರಿಕೆ ಕಂಡಿದ್ದು 33ನೇ ಶ್ರೇಯಾಂಕಕ್ಕೆ ತಲುಪಿದ್ದಾರೆ. ವಾರ್ನರ್ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತ vs ನ್ಯೂಜಿಲೆಂಡ್‌ ಟಿ20: 2-1 ಅಂತರದಲ್ಲಿ ಸರಣಿ ಗೆಲ್ಲಲಿರುವ ತಂಡವನ್ನು ಊಹಿಸಿದ ಹರ್ಭಜನ್ ಸಿಂಗ್ಭಾರತ vs ನ್ಯೂಜಿಲೆಂಡ್‌ ಟಿ20: 2-1 ಅಂತರದಲ್ಲಿ ಸರಣಿ ಗೆಲ್ಲಲಿರುವ ತಂಡವನ್ನು ಊಹಿಸಿದ ಹರ್ಭಜನ್ ಸಿಂಗ್

ಇನ್ನು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿಯೂ ಬದಲಾವಣೆಯಾಗಿದ್ದು ಇಂಗ್ಲೆಂಡ್ ತಂಡದ ಲಿಯಾಮ್ ಲಿವಿಂಗ್ಸ್ಟನ್ ಉತ್ತಮ ಪ್ರಗತಿ ಕಂಡ ಪ್ರಮುಖ ಆಟಗಾರನಾಗಿದ್ದಾರೆ. ಏಳು ಸ್ಥಾನಗಳ ಏರಿಕೆ ಕಂಡಿರುವ ಲಿಯಾನ್ ಲಿವಿಂಗ್ಸ್ಟನ್ 3ನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಹಾಗೂ ದಕ್ಷಿಣ ಆಫ್ರಿಕಾದ ತಬ್ರೇಜ್ ಶಂಸಿ ಮೊದಲ ಎರಡು ಸ್ಥಾನಗಳಲ್ಲಿದ್ದರೆ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಂ ಪ್ರಥಮ ಸ್ಥಾನ ಹಾಗೂ ಡೇವಿಡ್ ಮಲನ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಪ್ಘಾನಿಸ್ತಾನದ ನಾಯಕ ಮೊಹಮ್ಮದ್ ನಬಿ ಪ್ರಥಮ ಸ್ಥಾನ ಹಾಗೂ ಶಕೀಬ್ ಅಲ್ ಹಸನ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಗೇಮ್ ಪ್ಲ್ಯಾನ್ ಸಕ್ಸಸ್ ಆಗಿದ್ದು ಹೇಗೆ ಅಂತಾ ಹೇಳಿದ ರೋಹಿತ್ | Oneindia Kannada

Story first published: Wednesday, November 17, 2021, 19:47 [IST]
Other articles published on Nov 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X