Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PSL ಶುರುವಾದ ಮೇಲೆ ಪಾಕಿಸ್ತಾನ ಎಷ್ಟು ಕಪ್ ಗೆದ್ದಿದೆ: ವಾಸಿಂ ಅಕ್ರಂಗೆ ನೆಟ್ಟಿಗರ ತಿರುಗೇಟು

Wasim akram

ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಅಸ್ತಿತ್ವದ ಬಗ್ಗೆ ಪ್ರಶ್ನೆಗಳು ಶುರುವಾಗಿದೆ. ಐಪಿಎಲ್‌ನಿಂದ ಸಾಕಷ್ಟು ಯುವ ಪ್ರತಿಭೆಗಳು ಹೊರಬಂದರೂ ಸಹ, ಭಾರತ ಏಕೆ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲಗೊಂಡಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಟೀಂ ಇಂಡಿಯಾ ಬೌಲಿಂಗ್ ವೈಫಲ್ಯವು ಸೆಮಿಫೈನಲ್‌ನಲ್ಲಿ ಬಹಿರಂಗವಾಗಿದೆ. ಎದುರಾಳಿಯ ಒಂದು ವಿಕೆಟ್ ಪಡೆಯಲಾಗದ ಟೀಂ ಇಂಡಿಯಾ ನಿಜಕ್ಕೂ ಬಲಿಷ್ಠವೇ ಎಂಬೆಲ್ಲಾ ಪ್ರಶ್ನೆಗಳು ಉದ್ಭವಗೊಂಡಿದೆ. ಬೌಲಿಂಗ್ ಅಷ್ಟೇ ಅಲ್ಲದೆ ಬ್ಯಾಟಿಂಗ್ ವೈಫಲ್ಯವೂ ಭಾರತದ ಸೋಲಿಗೆ ಕಾರಣವಾಗಿದೆ. ಉತ್ತಮ ಆರಂಭ ಪಡೆಯದ ಪರಿಣಾಮ ಭಾರತ 15 ಓವರ್‌ಗಳಲ್ಲಿ 100ರ ಗಡಿದಾಟಿತು. ಆದ್ರೆ ಅದೇ ಇಂಗ್ಲೆಂಡ್ ತಂಡವು ಕೇವಲ 10 ಓವರ್‌ಗಳಲ್ಲಿ 100ರನ್ ಗಡಿ ಮುಟ್ಟಿತು.

ಜಾಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಮುರಿಯದ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್‌ಗೆ ಅಮೋಘ ಗೆಲುವನ್ನು ತಂದುಕೊಟ್ಟರು. 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಟೀಂ ಇಂಡಿಯಾ ಬರಿಗೈನಲ್ಲಿ ವಾಪಸ್ಸಾಯಿತು.

ಐಪಿಎಲ್ ಅಸ್ತಿತ್ವದ ಬಗ್ಗೆ ಎದುರಾಗಿದೆ ಭಾರೀ ಟೀಕೆ

ಐಪಿಎಲ್ ಅಸ್ತಿತ್ವದ ಬಗ್ಗೆ ಎದುರಾಗಿದೆ ಭಾರೀ ಟೀಕೆ

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿರುವ ಟೀಂ ಇಂಡಿಯಾ, ಐಸಿಸಿ ವಿಶ್ವಕಪ್ ಗೆದ್ದು ದಶಕವೇ ಕಳೆದು ಹೋಗಿದೆ. ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್‌ ಗೆದ್ದ ಬಳಿಕ, ವಿರಾಟ್ ಕೊಹ್ಲಿ ಹಾಗೂ ಈಗ ರೋಹಿತ್ ಶರ್ಮಾ ಕೂಡ ಕಪ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಐಪಿಎಲ್‌ನಂತಹ ದೊಡ್ಡ ಮಟ್ಟದ ಟಿ20 ಲೀಗ್ ಆಡಿಸಿದ್ರೂ ಟಿ20 ವಿಶ್ವಕಪ್‌ ಗೆಲ್ಲದ ಭಾರತವನ್ನು ದೂಷಿಸಿದ್ದಾರೆ. ಐಪಿಎಲ್‌ನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುತ್ತೇವೆ, ಭಾರತೀಯ ಕ್ರಿಕೆಟ್ ಬೆಳೆಯುತ್ತಿದೆ ಎಂದ ಮೇಲೆ ಐಸಿಸಿ ಟ್ರೋಫಿಯನ್ನೂ ಗೆಲ್ಲಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಂಬಿದ್ರೆ ನಂಬಿ, ಬಿಟ್ರೆ ಬಿಡಿ:T20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತದ ಪರ ಕೊನೆಯ ಬಾರಿಗೆ ವಿಕೆಟ್ ಪಡೆದಿದ್ದು ವಿರಾಟ್ ಕೊಹ್ಲಿ!

ಐಪಿಎಲ್ ಶುರುವಾದಾಗಿನಿಂದ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ: ವಾಸಿಂ ಅಕ್ರಂ

ಐಪಿಎಲ್ ಶುರುವಾದಾಗಿನಿಂದ ಭಾರತ ಟಿ20 ವಿಶ್ವಕಪ್ ಗೆದ್ದಿಲ್ಲ: ವಾಸಿಂ ಅಕ್ರಂ

ಐಪಿಎಲ್ ಕುರಿತಾಗಿ ಟೀಕೆಗಿಳಿದವರ ಸಾಲಿಗೆ ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಂ ಕೂಡ ಸೇರ್ಪಡೆಯಾಗಿದ್ದಾರೆ. ಐಪಿಎಲ್ ಪರಿಚಯವಾದಾಗಿನಿಂದ ಟೀಂ ಇಂಡಿಯಾ ಟಿ20 ವಿಶ್ವಕಪ್‌ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ್ದಾರೆ. ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆದ್ದಿದ್ದು 2007ರಲ್ಲಿ ಮತ್ತು ಐಪಿಎಲ್ ಉದ್ಘಾಟನಾ ಆವೃತ್ತಿ 2008ರಲ್ಲಿ ಎಂಬುದು ಗಮನಾರ್ಹವಾಗಿದೆ.

T20 ವಿಶ್ವಕಪ್‌ ಗೆಲ್ಲಲು ಸಾಧ್ಯವಾಗದಿದ್ರೆ, ಐಪಿಎಲ್ ಏಕೆ ಬೇಕು?: ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಕಿಡಿ

ವಾಸಿಂ ಅಕ್ರಂ ವಿರುದ್ಧ ಮುಗಿಬಿದ್ದ ಭಾರತದ ಅಭಿಮಾನಿಗಳು

ಪಾಕ್ ಲೆಜೆಂಡ್ ವಾಸಿಂ ಅಕ್ರಂ ಹೇಳಿಕೆ ಹೊರಬೀಳುತ್ತಿದ್ದಂತೆ ಟೀಂ ಇಂಡಿಯಾ ಅಭಿಮಾನಿಗಳು ಪಾಕಿಸ್ತಾನದ ಸ್ವಿಂಗ್ ಕಿಂಗ್ ವಿರುದ್ಧ ಮುಗಿಬಿದ್ದಿದ್ದಾರೆ. ಐಪಿಎಲ್ ವಿಚಾರ ಹಾಗಿರ್ಲಿ, ಪಾಕಿಸ್ತಾನ್ ಪ್ರೀಮಿಯ್ ಲೀಗ್(ಪಿಎಸ್‌ಎಲ್) ಶುರುವಾದ ಮೇಲೆ ಪಾಕಿಸ್ತಾನ ಎಷ್ಟು ಐಸಿಸಿ ಟ್ರೋಫಿ ಗೆದ್ದಿದೆ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಬಳಿ 150+ ಬೌಲಿಂಗ್ ಮಾಡುವ ಬೌಲರ್ಸ್ ಸಾಕಷ್ಟಿದ್ದಾರೆ ಎನ್ನುವ ಪಾಕಿಸ್ತಾನ, ಎಷ್ಟು ವಿಶ್ವಕಪ್‌ ತನ್ನದಾಗಿಸಿಕೊಂಡಿದೆ ಎಂದು ಭಾರತೀಯ ಅಭಿಮಾನಿಗಳು ಟೀಕಾ ಪ್ರಹಾರ ನಡೆಸಿದ್ದಾರೆ. ಇಷ್ಟಲ್ಲದೆ ಐಪಿಎಲ್ ಮತ್ತು ಪಿಎಸ್‌ಎಲ್‌ನ ಮೌಲ್ಯವನ್ನು ಸಹ ಹೋಲಿಕೆ ಮಾಡಿದ್ದು, ವಿರಾಟ್ ಕೊಹ್ಲಿಯ 1 ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ ಪಡೆಯುವ ಹಣದ ಮೌಲ್ಯವು , ಪಾಕಿಸ್ತಾನದ ಪಿಎಸ್‌ಎಲ್‌ ಟ್ರೋಫಿ ಗೆದ್ದವರಿಗೆ ಕೊಡುವುದಿಲ್ಲ ಎಂದು ಕಾಲೆಳೆದಿದ್ದಾರೆ.

Story first published: Friday, November 11, 2022, 20:27 [IST]
Other articles published on Nov 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+