ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟಿ20: ಭಾರತ ಗೆಲ್ಲಿಲ್ಲ, ಆಸ್ಟ್ರೇಲಿಯಾ ಸೋಲ್ಲಿಲ್ಲ, ಎರಡಕ್ಕೂ ಮಳೆ ಬಿಡ್ಲಿಲ್ಲ!

India vs Australia Second T20i: The match has been called off

ಮೆಲ್ಬರ್ನ್, ನವೆಂಬರ್ 23: ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 23) ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯ ಅತ್ತ ಆಸ್ಟ್ರೇಲಿಯಾ ಗೆಲ್ಲದೆ, ಇತ್ತ ಭಾರತವೂ ಸೋಲದೆ ಅಂತ್ಯ ಕಂಡಿದೆ. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಪಂದ್ಯದ ಫಲಿತಾಂಶ ಕೊನೆಗೂ ಬಾರದಾಯಿತು.

ವಿಶ್ವಕಪ್ ಹೊಸ್ತಿಲಲ್ಲಿ ಎಡವಿದ ಭಾರತದ ಮಹಿಳೆಯರು: ಇಂಗ್ಲೆಂಡ್ ವಿರುದ್ಧ ಸೋಲುವಿಶ್ವಕಪ್ ಹೊಸ್ತಿಲಲ್ಲಿ ಎಡವಿದ ಭಾರತದ ಮಹಿಳೆಯರು: ಇಂಗ್ಲೆಂಡ್ ವಿರುದ್ಧ ಸೋಲು

ಪಂದ್ಯದ ಸ್ಕೋರ್‌ಕಾರ್ಡ್

ಟಾಸ್ ಸೋತ ಆಸ್ಟ್ರೇಲಿಯಾ ಬ್ಯಾಟಿಂಗ್‌ಗೆ ಇಳಿದ ಸ್ವಲ್ಪ ಸಮಯದಿಂದಲೇ ಮಳೆಯ ಆಟವೂ ನಿಧಾನವಾಗಿ ಆರಂಭವಾಯ್ತು. ಆಸೀಸ್ ತಂಡ ಬೆನ್ ಮ್ಚ್ದೆರ್ಮೊತ್ತ್ 32 ರನ್ ನೆರವಿನೊಂದಿಗೆ 19 ಓವರ್ ನಲ್ಲಿ 7 ವಿಕೆಟ್ ಕಳೆದು 132 ರನ್ ಪೇರಿಸಿತು.

ಆಸ್ಟ್ರೇಲಿಯಾ ಇನ್ನಿಂಗ್ಸ್‌ನ್ನು 19ನೇ ಓವರ್ ಗೆ ಮೊಟಕುಗೊಳಿಸಿ ಡಕ್ವರ್ಥ್ ಲೂಯೀಸ್ ನಿಯಮದ ಪ್ರಕಾರ ಭಾರತಕ್ಕೆ 11 ಓವರ್ ನಲ್ಲಿ 90 ರನ್ ಪೇರಿಸಲು ಗುರಿ ನೀಡಲಾಗಿತ್ತು. ಆದರೆ ಮಳೆ ನಿಲ್ಲಲೇಯಿಲ್ಲ. ಫಲಿತಾಂಶವಿಲ್ಲವೆಂದು ಘೋಷಿಸಿ ಪಂದ್ಯಕ್ಕೆ ಅಂತ್ಯ ಹಾಡಲಾಯಿತು. ಹೀಗಾಗಿ ಅತ್ತ ಭಾರತ ಗೆಲ್ಲದೆ, ಆಸ್ಟ್ರೇಲಿಯಾ ಸೋಲದೆ ಪಂದ್ಯ ಮುಗಿಯಿತು!

ಮೂರು ಪಂದ್ಯಗಳ ಈ ಟಿ20 ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ (ಡಕ್ವರ್ಥ್ ಲೂಯೀಸ್ ನಿಯಮದ ಪ್ರಕಾರ) ಗೆದ್ದಿದ್ದರಿಂದ ಭಾರತಕ್ಕೆ ಇಂದಿನ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಆದರೆ ಪಂದ್ಯವನ್ನು ಮಳೆ ನುಂಗಿ ನೀರು ಕುಡಿಯಿತು! ಅಂತಿಮ ಪಂದ್ಯವೊಂದು ಬಾಕಿಯುಳಿದಿದ್ದು ಅದರಲ್ಲಾದರೂ ಭಾರತ ಗೆಲ್ಲಲೇ ಬೇಕಿದೆ. ಇಲ್ಲದಿದ್ದರೆ ಸರಣಿ 2-0ಯಿಂದ ಆಸೀಸ್ ವಶವಾಗಲಿದೆ!

Story first published: Friday, November 23, 2018, 17:22 [IST]
Other articles published on Nov 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X