ಸಾರಾ ಬಗ್ಗೆ ಇಲ್ಲಸಲ್ಲದ ವರದಿ ಕಂಡು ಸಚಿನ್ ಗರಂ
ಮುಂಬೈ, ಏ.27: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮುದ್ದಿನ ಪುತ್ರಿ ಸಾರಾ ಬಾಲಿವುಡ್ ಪ್ರವೇಶಿಸುವ ಸುದ್ದಿಗೆ ಫುಲ್ ಸ್ಟಾಪ್ ಬಿದ್ದಿದೆ. 18ರ ಹರೆಯದ ಮರಾಠಿ ಬೆಡಗಿ ಸಾರಾ ಬಣ್ಣದ ಬದುಕು ಆರಂಭಗೊಳ್ಳುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿ ಕಂಡು ಅಪ್ಪ ಸಚಿನ್ ಗರಂ ಆಗಿದ್ದಾರೆ.
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿನ್ ಅವರು ನನ್ನ ಮಗಳು ವ್ಯಾಸಂಗದಲ್ಲಿ ತಲ್ಲೀನಳಾಗಿದ್ದಾಳೆ. ವಿದ್ಯಾಭ್ಯಾಸದಲ್ಲಿ ಸಂತೋಷ ಕಾಣುತ್ತಿದ್ದಾಳೆ. ಆಕೆ ಸಿನಿಮಾ ಜಗತ್ತಿಗೆ ಪ್ರವೇಶಿಸುತ್ತಿದ್ದಾಳೆ ಎಂದು ಬಂದಿರುವ ಊಹಾ ಪೋಹ ಸುದ್ದಿಗಳನ್ನು ಕಂಡು ತುಂಬಾ ಬೇಸರವಾಗುತ್ತಿದೆ ಎಂದು ಸಚಿನ್ ಹೇಳಿದ್ದಾರೆ. [ಸಚಿನ್ 42ರ ಹುಟ್ಟುಹಬ್ಬಕ್ಕೆ 42 ಸಾಧನೆಗಳ ಮೆಲುಕು]

ನಟ ಶಾಹಿದ್ ಕಪೂರ್ ಜತೆ ಸಾರಾ ನಟಿಸುತ್ತಿದ್ದಾರೆ. ಇದಕ್ಕೆ ಕುಟುಂಬದ ಒಪ್ಪಿಗೆ ಸಿಕ್ಕಿದೆ. ಕರೀನಾ ಕಪೂರ್ ಜೊತೆಗಿನ 'ಉಡ್ತಾ ಪಂಜಾಬ್' ಚಿತ್ರದ ನಂತರ ಶಾಹೀದ್ ಅವರು ಸಾರಾ ಜೊತೆ ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಸಾರಾ ತೆಂಡೂಲ್ಕರ್ ಮುಂಬೈನ ಧೀರೂಬಾಯ್ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಿಲಯನ್ಸ್ ಕೈಗೊಂಡಿರುವ ಎಲ್ಲರಿಗೂ ವಿದ್ಯಾಭ್ಯಾಸ ಯೋಜನೆಯಲ್ಲಿ ಸಚಿನ್ ಜೊತೆಗೆ ಕಾಣಿಸಿಕೊಂಡಿದ್ದಾರೆ.
ಆಗಾಗ ಬಿಡುವು ಸಿಕ್ಕಾಗ ಅಪ್ಪ ಅಮ್ಮನ ಜೊತೆ ಕ್ರಿಕೆಟ್ ಅಂಗಳಕ್ಕೂ ಬರುತ್ತಾರೆ. ಸಾರಾ ಅವರು ಟಿವಿ ನಟ ಹಿಮಾಂಶು ಕೊಹ್ಲಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಗಾಳಿಸುದ್ದಿ ಈ ಹಿಂದೆ ಹಬ್ಬಿದ್ದನ್ನು ಇಲ್ಲಿ ಸ್ಮರಿಸಬಹುದು.
ಐಪಿಎಲ್ 2015 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ 'ಐಕಾನ್' ಆಟಗಾರರಲ್ಲಿ ಯುವ ಪ್ರತಿಭೆಗಳನ್ನು ಹುರಿದುಂಬಿಸುವ ಕೆಲಸದಲ್ಲಿ ಸಚಿನ್ ನಿರತರಾಗಿದ್ದಾರೆ. ಏ. 24ರಂದು 42ನೇ ವಸಂತಕ್ಕೆ ಕಾಲಿರಿಸಿದ ಸಚಿನ್ ಅವರು ಫೋಟೋ-ವಿಡಿಯೋ ಶೇರಿಂಗ್ ತಾಣ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications