Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹುಟ್ಟುಹಬ್ಬದ ದಿನ ಹೊಸ ಲೋಕಕ್ಕೆ ಸಚಿನ್ ಎಂಟ್ರಿ!

ಮುಂಬೈ, ಏ.24: ಕ್ರಿಕೆಟ್ ದಿಗ್ಗಜ ಸಚಿನ್ ರಮೇಶ್ ತೆಂಡೂಲ್ಕರ್ ಅವರು ತಮ್ಮ 42ನೇ ಹುಟ್ಟುಹಬ್ಬದ ದಿನ ಹೊಸ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯತೆ ಗಳಿಸಿರುವ ಸಚಿನ್ ಅವರು ಶುಕ್ರವಾರ ಇನ್ಸ್ಟಾಗ್ರಾಮ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಫೋಟೋ ವಿಡಿಯೋ ಹಂಚಿಕೆಗಾಗಿ ಇರುವ ಇನ್ಸ್ಟ್ರಾಗ್ರಾಮ್ ವೆಬ್ ತಾಣದಲ್ಲಿ ಕ್ರಿಕೆಟ್ ದೇವರ ಅಕೌಂಟ್ ಓಪನ್ ಆಗಿದೆ. ಫ್ಯಾಮಿಲಿ ಜೊತೆ ಲಂಚ್ ಮುಗಿಸಿಕೊಂಡು ಸಂಜೆ ವೇಳೆಗೆ ಸೆಲ್ಫಿ ವಿತ್ ಫ್ಯಾಮಿಲಿ ತೆಗೆದ ಫೋಟೋ ಶೇರ್ ಮಾಡಿದ್ದಾರೆ.[ಸಚಿನ್ 42ರ ಹುಟ್ಟುಹಬ್ಬಕ್ಕೆ 42 ಸಾಧನೆಗಳ ಮೆಲುಕು]

ನಿರೀಕ್ಷೆಯಂತೆ ಸಚಿನ್ ಅವರ ಮೊದಲ ಪೋಸ್ಟ್ ಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಚಿನ್ ಕುಟುಂಬದ ಗ್ರೂಪ್ ಸೆಲ್ಫಿಗೆ Instagramನಲ್ಲಿ 5,187 ಮಂದಿ ಲೈಕ್ ಮಾಡಿದ್ದಾರೆ. 22.2K ಮಂದಿ ಹಿಂಬಾಲಕರಿದ್ದಾರೆ.

Sachin Tendulkar makes Instagram debut on his 42nd birthday


ಇದೇ ಫೋಟೋವನ್ನು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಹಾಕಿರುವ ಸಚಿನ್ ಅವರು ಇನ್ಸ್ಟಾಗ್ರಾಮ್ ಗೆ ಎಂಟ್ರಿಕೊಟ್ಟಿದ್ದಾಗಿ ಘೋಷಿಸಿದ್ದಾರೆ. ಈ ಫೇಸ್ ಬುಕ್ ಪೋಸ್ಟ್ ಗೆ 55,622 ಲೈಕ್ಸ್ 1.7k ಕಾಮೆಂಟ್ಸ್ ಬಂದಿದೆ. 600ಕ್ಕೂ ಅಧಿಕ ಬಾರಿ ಹಂಚಿಕೆಯಾಗಿದೆ.(ಅಂಕಿ ಅಂಶಗಳು ಈ ಸಮಯ 18.20ಕ್ಕೆ ಸರಿಯಾಗಿ)

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಸಾಮಾಜಿಕ ಜಾಲ ತಾಣಗಳಲ್ಲಿ ಸಚಿನ್ ತೆಂಡೂಲ್ಕರ್ ಜನಪ್ರಿಯತೆ ಮುಂದುವರೆದಿದೆ. ಫೇಸ್ ಬುಕ್ ನಲ್ಲಿ ಸುಮಾರು 24 ಮಿಲಿಯನ್ ಹಿಂಬಾಲಕರು ಹಾಗೂ ಟ್ವಿಟ್ಟರ್ ನಲ್ಲಿ 9 ಮಿಲಿಯನ್ ಹಿಂಬಾಲಕರಿದ್ದಾರೆ.

2013ರಲ್ಲಿ ವೃತ್ತಿ ಬದುಕಿಗೆ ಅಂತ್ಯ ಹಾಡಿದ ಕ್ರಿಕೆಟ್ ಮಾಂತ್ರಿಕ್ ಸಚಿನ್ ಅವರು ನಂತರ ಕ್ರಿಕೆಟ್ ಅಲ್ಲದೆ ಇನ್ನಿತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.[ಸಚಿನ್ -ಲಾರಾ ಅಪೂರ್ವ ಚಿತ್ರ ಭಾರಿ ಮೆಚ್ಚುಗೆ]

ಶಿವಾಜಿ ಪಾರ್ಕಿನಿಂದ ಶಾರ್ಜವರೆಗೆ, ವಾಂಖೆಡೆಯಿಂದ ಎಂಸಿಜಿವರೆಗೆ, ಈಡನ್ ಗಾರ್ಡನ್ಸ್ ನಿಂಡ ಲಾರ್ಡ್ಸ್ ತನಕ ಸಚಿನ್ ಬ್ಯಾಟ್ ನಿಂದ ಹರಿದ ರನ್ ಹೊಳೆ ನಾನಾ ಕಥೆಗಳನ್ನು ಹೇಳುತ್ತದೆ.

200ನಾಟೌಟ್ ಎಂಬ ಸಂಸ್ಥೆ ತೆಂಡೂಲ್ಕರ್ ಬದುಕಿನ ಸಮಗ್ರ ಚಿತ್ರಣವನ್ನು ಮುಂದಿಡಲು ಯತ್ನಿಸುತ್ತಿದೆ. [ಸಚಿನ್ ಚಿತ್ರಕ್ಕೊಂದು ಹೆಸರು ಕೊಡಿ] 2016ರಲ್ಲಿ ಸುಮಾರು 2,000 ಚಿತ್ರಮಂದಿರಗಳಲ್ಲಿ ಈ ಡಾಕ್ಯುಮೆಂಟರಿ ಚಿತ್ರ ಪ್ರದರ್ಶನಗೊಳ್ಳಲಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+