For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿ ಗೆದ್ದ ಭಾರತದ ನಾಯಕರು: ಗಂಗೂಲಿಯಿಂದ ಶಿಖರ್ ಧವನ್‌ವರೆಗೆ..

Sourav ganguly and shikhar dhawan

ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಂಡೀಸ್ ನೀಡಿದ್ದ 312 ರನ್‌ಗಳ ಟಾರ್ಗೆಟ್‌ ಅನ್ನು ಯಶಸ್ವಿಯಾಗಿ ಬೆನ್ನತ್ತಿ ಎರಡು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಅರ್ಧಶತಕದ ಜೊತೆಗೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಏಕದಿನ ಸರಣಿ ಗೆದ್ದು ಬೀಗಿತು. ಅಕ್ಷರ್ ಪಟೇಲ್ 35 ಎಸೆತಗಳಲ್ಲಿ ಅಜೇಯ 64 ರನ್‌ ಕಲೆಹಾಕಿ ತಂಡವನ್ನ ಗೆಲುವಿನ ಗೆರೆ ದಾಟಿಸಿದರು. ಇನ್ನೆರಡು ಎಸೆತ ಬಾಕಿ ಇರುವಂತೆ ಭಾರತ ಜಯದ ಮೆಟ್ಟಿಲು ತುಳಿಯಿತು.

ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ ಶಿಖರ್ ಧವನ್ ನಾಯಕತ್ವದಲ್ಲಿ ಭಾರತವು ಈ ಸರಣಿ ಗೆದ್ದಿರುವುದು ವಿಶೇಷ. ಏಕೆಂದರೆ ಕೆರಿಬಿಯನ್ ಅಂಗಳದಲ್ಲಿ ಲಿಮಿಟೆಡ್ ಓವರ್ ಕ್ರಿಕೆಟ್ ಸರಣಿ ಗೆಲುವು ಅಷ್ಟು ಸುಲಭದ ಮಾತಲ್ಲ. ಭಾರತದ ಯಾವ ನಾಯಕರು ವೆಸ್ಟ್ ಇಂಡೀಸ್‌ನಲ್ಲಿ ಸರಣಿ ಜಯಿಸಿದ್ದಾರೆ ಎಂಬುದನ್ನ ಈ ಕೆಳಗೆ ತಿಳಿಯಿರಿ.

ಸೌರವ್ ಗಂಗೂಲಿ (2002)

ಸೌರವ್ ಗಂಗೂಲಿ (2002)

ಟೀಂ ಇಂಡಿಯಾ ಬಹು ಯಶಸ್ವಿ ನಾಯಕ, ದಾದಾ ಖ್ಯಾತಿಯ ಸೌರವ್ ಗಂಗೂಲಿ, ವೆಸ್ಟ್ ಇಂಡೀಸ್‌ ಅಂಗಳದಲ್ಲಿ ಏಕದಿನ ಟ್ರೋಫಿ ಗೆದ್ದ ಟೀಂ ಇಂಡಿಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಯನ್ನ ಹೊಂದಿದ್ದಾರೆ.

2002ರ ಟೀಂ ಇಂಡಿಯಾ ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿ ತಂಡವನ್ನ ಮುನ್ನಡೆಸಿದ್ದ ಸೌರವ್ ಗಂಗೂಲಿ, ಏಕದಿನ ಸರಣಿ ಗೆಲ್ಲುವಲ್ಲಿ ಯಶಸ್ವಿಯಾದ್ರು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-2ರಿಂದ ಸೋಲನ್ನ ಅನುಭವಿಸಿದ ಬಳಿಕ, ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಕಂಬ್ಯಾಕ್ ಮಾಡಿತು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶ ಹೊರಬರಲಿಲ್ಲ. ಉಳಿದ ಮೂರು ಏಕದಿನ ಪಂದ್ಯಗಳಲ್ಲಿ ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿತು.

ಮೂರನೇ ಏಕದಿನ ಪಂದ್ಯದಲ್ಲಿ 186 ರನ್‌ಗಳ ಟಾರ್ಗೆಟ್‌ ಚೇಸ್ ಮಾಡಿದ ಟೀಂ ಇಂಡಿಯಾ, ಏಳು ವಿಕೆಟ್‌ಗಳ ಗೆಲುವು ಸಾಧಿಸಿತು. ನಾಲ್ಕನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಿರುಗೇಟು ನೀಡಿದ್ರೆ, ಐದನೇ ಹಾಗೂ ಅಂತಿಮ ಪಂದ್ಯದಲ್ಲಿ 56ರನ್‌ಗಳ ಗೆಲುವು ಸಾಧಿಸಿ ಭಾರತ ಸರಣಿ ಜಯಿಸಿತು.

ಎಂ.ಎಸ್ ಧೋನಿ (2009)

ಎಂ.ಎಸ್ ಧೋನಿ (2009)

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2009ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ, ನಾಲ್ಕು ಏಕದಿನ ಪಂದ್ಯಗಳ ಸರಣಿಯನ್ನ 2-1 ಅಂತರದಲ್ಲಿ ಗೆಲುವು ಸಾಧಿಸಿತು.

ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 339 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಆತಿಥೇಯರು 319ರನ್‌ಗಳಿಗೆ ಆಲೌಟ್ ಆದರು. ಎರಡನೇ ಏಕದಿನ ಪಂದ್ಯದಲ್ಲಿ ಭಾರತವನ್ನ ಹಿಮ್ಮೆಟ್ಟಿಸಿದ ವೆಸ್ಟ್ ಇಂಡೀಸ್, ಭಾರತವನ್ನ 188ರನ್‌ಗಳಿಗೆ ಆಲೌಟ್ ಮಾಡಿದ್ದಲ್ಲದೆ, 95 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ 8 ವಿಕೆಟ್‌ಗಳ ಗೆಲುವು ಸಂಪಾದಿಸಿತು.

ಆದ್ರೆ ಮೂರನೇ ಏಕದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಧೋನಿ ಟೀಂ ವಿಂಡೀಸ್ ತಂಡವನ್ನ 186ರನ್‌ಗಳಿಗೆ ಆಲೌಟ್ ಮಾಡಿದ್ದಲ್ಲದೆ, ಮಳೆಯಿಂದಾಗಿ ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 47, ಗೌತಮ್ ಗಂಭೀರ್ 44 ಹಾಗೂ ನಾಯಕ ಧೋನಿ ಅಜೇಯ 46ರನ್ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ನಾಲ್ಕನೇ ಏಕದಿನ ಪಂದ್ಯವನ್ನ ಹೇಗಾದ್ರೂ ಮಾಡಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ಲೆಕ್ಕಾಚಾರ ಹೊಂದಿದ್ದ ವಿಂಡೀಸ್‌ಗೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಅಂತಿಮ ಪಂದ್ಯ ರದ್ದುಗೊಂಡ ಪರಿಣಾಮ ಭಾರತ 2-1 ಅಂತರದಲ್ಲಿ ಸರಣಿ ಜಯಿಸಿತು.

Ind vs WI: ಏಕದಿನ ಮಾದರಿಯಲ್ಲಿ ಪಾಕಿಸ್ತಾನದ ಹೆಸರಿನಲ್ಲಿದ್ದ ದೊಡ್ಡ ದಾಖಲೆ ಮುರಿದ ಭಾರತ

ಸುರೇಶ್ ರೈನಾ (2011)

ಸುರೇಶ್ ರೈನಾ (2011)

2011ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮಹೇಂದ್ರ ಸಿಂಗ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಸುರೇಶ್ ರೈನಾ ಮುಂದಾಳತ್ವದಲ್ಲಿ ಮುನ್ನಡೆಯಿತು. ಏಕೈಕ ಟಿ20 ಪಂದ್ಯಗಳಲ್ಲಿ ಜಯಿಸಿದ ಬಳಿಕ
ಐದು ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಲ್ಲಿ ಗೆಲುವು ಸಾಧಿಸಿತು.

ಮೊದಲ ಮೂರು ಏಕದಿನ ಪಂದ್ಯಗಳನ್ನ ಸತತವಾಗಿ ಜಯಿಸಿದ್ದ ಭಾರತವು ಕೊನೆಯ ಎರಡು ಪಂದ್ಯಗಳಲ್ಲಿ ಮುಗ್ಗರಿಸಿತು. ಆದ್ರೆ ಅದಾಗಲೇ ಸರಣಿಯನ್ನ ಭಾರತ ಜಯಿಸಿತು. ಇದಾದ ಬಳಿಕ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನ ಕೂಡ ಭಾರತ ತನ್ನದಾಗಿಸಿಕೊಂಡಿತು. ಮೊದಲ ಪಂದ್ಯದಲ್ಲಿ 63ರನ್‌ಗಳಿಂದ ಜಯಿಸಿದ್ರೆ, ನಂತರದ ಎರಡು ಪಂದ್ಯಗಳಲ್ಲಿ ಡ್ರಾನಲ್ಲಿ ಅಂತ್ಯಗೊಂಡಿತು.

ಟಿ20 ಮತ್ತು ಏಕದಿನ ಸರಣಿಗೆ ಅಲಭ್ಯರಾಗಿದ್ದ ಎಂ.ಎಸ್ ಧೋನಿ ಟೆಸ್ಟ್ ಸರಣಿಯಲ್ಲಿ ಭಾರತವನ್ನ ಮುನ್ನಡೆಸಿದ್ರು.

ಭಾರತ ಪರವಾಗಿ ಆಡುವುದು ನನ್ನ ಕೈಯಲ್ಲಿಲ್ಲ: ಅಸಹಾಯಕತೆ ತೋಡಿಕೊಂಡಿದ್ಯಾಕೆ ಶ್ರೇಯಸ್ ಐಯ್ಯರ್!

ವಿರಾಟ್ ಕೊಹ್ಲಿ (2017)

ವಿರಾಟ್ ಕೊಹ್ಲಿ (2017)

ಎಂ.ಎಸ್ ಧೋನಿ ನಾಯಕತ್ವ ಬಿಟ್ಟುಕೊಟ್ಟ ಬಳಿಕ ನಾಯಕತ್ವ ಪಟ್ಟಕ್ಕೇರಿದ ವಿರಾಟ್ ಕೊಹ್ಲಿ, ಚೊಚ್ಚಲ ನಾಯಕತ್ವದಲ್ಲಿ ವಿಂಡೀಸ್ ಪ್ರವಾಸದಲ್ಲೇ ಸರಣಿ ಜಯಿಸಿದ್ದು ವಿಶೇಷವಾಗಿತ್ತು. ಆಟಗಾರನಾಗಿ ಕೆರಿಬಿಯನ್ ಅಂಗಳದಲ್ಲಿ ಮಿಂಚಿದ್ದ ವಿರಾಟ್‌, ನಾಯಕನಾಗಿಯೂ ಯಶಸ್ವಿಯಾದರು.

2017ರ ಪ್ರವಾಸದಲ್ಲಿ ಮೊದಲು ಐದು ಪಂದ್ಯಗಳ ಏಕದಿನ ಸರಣಿಯನ್ನಾಡಿದ ಟೀಂ ಇಂಡಿಯಾಗೆ ಮೊದಲ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿತು. ಪರಿಣಾಮ ಯಾವುದೇ ಫಲಿತಾಂಶವಿಲ್ಲದೆ ಪಂದ್ಯ ಕೊನೆಗೊಂಡಿತು. ಎರಡು ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಮವಾಗಿ 105 ಮತ್ತು 93ರನ್‌ಗಳ ಗೆಲುವು ಸಾಧಿಸಿತು.

ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ 190ರನ್‌ಗಳ ಗುರಿ ಬೆನ್ನತ್ತಲಾಗದೇ 179ರನ್‌ಗಳಿಗೆ ಆಲೌಟ್ ಆದ ಪರಿಣಾಮ ವಿಂಡೀಸ್ ಮೊದಲ ಜಯ ಸಾಧಿಸಿತು. ಆದ್ರೆ ಐದನೇ ಏಕದಿನ ಪಂದ್ಯವನ್ನ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸುಲಭವಾಗಿ ಜಯಿಸಿತು. ಈ ಪಂದ್ಯದಲ್ಲಿ ನಾಯಕ ಕೊಹ್ಲಿ ಅಜೇಯ 111, ದಿನೇಶ್ ಕಾರ್ತಿಕ್ ಅಜೇಯ 50 ರನ್ ಕಲೆಹಾಕಿ 206ರನ್‌ಗಳ ಟಾರ್ಗೆಟ್‌ ಬೆನ್ನತ್ತಿದರು.

ಇದಾದ ಬಳಿಕ ನಡೆದ ಏಕೈಕ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಗೆಲುವು ಸಂಪಾದಿಸಿತು.

2011ರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿದ್ದ ಈ ಮೂವರು ಇನ್ನೂ ಸಹ ನಿವೃತ್ತಿ ತೆಗೆದುಕೊಂಡಿಲ್ಲ!

ವಿರಾಟ್ ಕೊಹ್ಲಿ (2019)

ವಿರಾಟ್ ಕೊಹ್ಲಿ (2019)

2017ರ ನಂತರ ಎರಡು ವರ್ಷಗಳ ಬಳಿಕ ಕೊಹ್ಲಿ ನಾಯಕತ್ವದಲ್ಲಿ ಮತ್ತೆ ಕೆರಿಬಿಯನ್ ಪ್ರವಾಸ ಕೈಗೊಂಡ ಟೀಂ ಇಂಡಿಯಾ ಟ್ರೋಫಿಯೊಂದಿಗೆ ಮರಳಿತು. 2 ಟೆಸ್ಟ್, 3 ಏಕದಿನ ಮತ್ತು 3 ಟಿ20 ಪಂದ್ಯಗಳಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಿದ್ದವು.

ಟಿ20 ಸರಣಿಯಲ್ಲಿ ವಿಂಡೀಸ್ ತಂಡವನ್ನ 3-0 ಅಂತರದಲ್ಲಿ ವೈಟ್‌ವಾಶ್ ಮಾಡಿದ ಕೊಹ್ಲಿ ಟೀಂ 2-0 ಅಂತರದಲ್ಲಿ ಗೆದ್ದು ಬೀಗಿತು. ಇದರ ಜೊತೆಗೆ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನೂ ಸಹ 2-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ವೆಸ್ಟ್ ಇಂಡೀಸ್ ನೆಲದಲ್ಲಿ ಮೂರು ಫಾರ್ಮೆಟ್‌ನಲ್ಲಿ ವೈಟ್ ವಾಶ್ ಮಾಡಿದ ಏಕೈಕ ನಾಯಕ ಎಂಬ ಬಿರುದು ವಿರಾಟ್ ಕೊಹ್ಲಿಗೆ ಸಂದಿದೆ.

ಶಿಖರ್ ಧವನ್ (2022*)

ಶಿಖರ್ ಧವನ್ (2022*)

ಇದೀಗ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಿದ್ದರ ಹಿನ್ನಲೆಯಲ್ಲಿ ಶಿಖರ್ ಧವನ್ ನಾಯಕತ್ವದಲ್ಲಿ ಮುನ್ನೆಡೆದಿದ್ದ ಭಾರತ ಮತ್ತೊಂದು ಏಕದಿನ ಸರಣಿಯನ್ನ ತನ್ನ ಮಡಿಲಿಗೆ ಹಾಕಿಕೊಂಡಿದೆ. ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನ ಭಾರತ 2-0 ಅಂತರದಲ್ಲಿ ಗೆದ್ದು ಬೀಗಿದೆ.

ಈ ಗೆಲುವಿನ ಮೂಲಕ ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿಯನ್ನ ಜಯಿಸಿದ ಟೀಂ ಇಂಡಿಯಾ ನಾಯಕರ ಸಾಲಿಗೆ ಶಿಖರ್ ಧವನ್ ಸೇರ್ಪಡೆಯಾಗಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ಮೂರನೇ ಏಕದಿನ ಪಂದ್ಯ ಜುಲೈ 27ರಂದು ಟ್ರಿನಿಡಾಡ್‌ನಲ್ಲಿಯೇ ನಡೆಯಲಿದೆ.

Story first published: Monday, July 25, 2022, 14:50 [IST]
Other articles published on Jul 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+