ಒಡೆಯರ್ ಕೆಪಿಎಲ್ 2014 ತಂಡಗಳ ಅಂಕ ಪಟ್ಟಿ
ಬೆಂಗಳೂರು, ಸೆ.3: ಮೈಸೂರಿನಲ್ಲಿ ಶುಭಾರಂಭ ಮಾಡಿದ ಕಾರ್ಬನ್ ಸ್ಮಾರ್ಟ್ ಕರ್ನಾಟಕ ಪ್ರಿಮಿಯರ್ ಲೀಗ್ ಟಿ20 ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಬೆಳಗಾವಿ ತಂಡ 200 ರನ್ ಗಡಿ ದಾಟಿದ್ದು, ಕರಣ್ ನಾಯರ್ ಶತಕ ಈವರೆಗಿನ ಮುಖ್ಯಾಂಶ ಎನ್ನಬಹುದು. ರಾಕ್ ಸ್ಟಾರ್ಸ್ ತಂಡ ಸತತ ಸೋಲು ಕಂಡು ಮನರಂಜನೆ ನೀಡದ ಸೆಲೆಬ್ರಿಟಿಗಳೆನಿಸಿಕೊಂಡಿದ್ದಾರೆ. ಈ ನಡುವೆ ಹಾಲಿ ಚಾಂಪಿಯನ್ ಮಂಗಳೂರು ಯುನೈಟೆಡ್ ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ.
ಕೆಪಿಎಲ್ ಇನ್ನೇನು ಬೆಂಗಳೂರಿಗೆ ಕಾಲಿಡಲಿದೆ. ಸೆ.5 ರಿಂದ ಬೆಂಗಳೂರಿನಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಇದಕ್ಕಾಗಿ ಮಂಗಳವಾರ (ಸೆ.2)ರಿಂದ ಕೆಎಸ್ ಸಿಎ ಟಿಕೆಟ್ ನೀಡುತ್ತಿದೆ.[ಈ ಬಗ್ಗೆ ವಿವರ ಇಲ್ಲಿದೆ]
ವೇಳಾಪಟ್ಟಿ || ಕೆಪಿಎಲ್ ಎಬಿಸಿಡಿ
ಆ.28ರಂದು ಒಡೆಯರ್ ಕೆಪಿಎಲ್ ಟೂರ್ನಿ ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಆರಂಭವಾಗಿದ್ದು, ಸೆ.5 ರಿಂದ ಸೆ.7ರ ತನಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ಅಂತಿಮ ಹಂತದ ಪಂದ್ಯಗಳು ಹುಬ್ಬಳ್ಳಿಯಲ್ಲಿ ಸೆ.9 ಹಾಗೂ ಸೆ.12ರಂದು ನಡೆಯಲಿದೆ. ರೌಂಡ್ ರಾಬಿನ್ ಲೀಗ್ ನಲ್ಲಿ ಎಲ್ಲಾ ತಂಡಗಳು ಪರಸ್ಪರ ಕಾದಾಡಲಿವೆ. ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ತಂಡಗಳು ಸೆಮಿಸ್ ಪ್ರವೇಶಿಸಲಿವೆ.
ಸೆಲೆಬ್ರಿಟಿಗಳ ತಂಡ ರಾಕ್ ಸ್ಟಾರ್ಸ್ ಜೊತೆಗೆ ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಮೈಸೂರು ವಾರಿಯರ್ಸ್, ಹುಬ್ಳಿ ಟೈಗರ್ಸ್, ಬಳ್ಳಾರಿ ಟಸ್ಕರ್ಸ್ ತಂಡಗಳು ಕಣದಲ್ಲಿವೆ. ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಸೋಮವಾರ ಸೆ.2 ಕ್ಕೆ ಅನುಗುಣವಾಗಿ ಅಂಕಪಟ್ಟಿ ಇಂತಿದೆ: [ತಂಡಗಳ ಮೇಲೆ ಕ್ಲಿಕ್ ಮಾಡಿ ತಂಡದಲ್ಲಿರುವ ಆಟಗಾರರ ವಿವರ ಓದಿ]
| ತಂಡಗಳು | ಆಡಿದ ಪಂದ್ಯಗಳು | ಗೆಲುವು | ಸೋಲು | ಅಂಕಗಳು |
| ಮೈಸೂರು ವಾರಿಯರ್ಸ್ | 5 | 4 | 1 | 8 |
| ಮಂಗಳೂರು ಯುನೈಟೆಡ್ | 5 | 4 | 1 | 8 |
| ಬಿಜಾಪುರ್ ಬುಲ್ಸ್ | 5 | 4 | 1 | 8 |
| ಬೆಳಗಾವಿ ಪ್ಯಾಂಥರ್ಸ್ | 5 | 2 | 3 | 4 |
| ಹುಬ್ಳಿ ಟೈಗರ್ಸ್ | 4 | 2 | 2 | 4 |
| ಬಳ್ಳಾರಿ ಟಸ್ಕರ್ಸ್ | 5 | 1 | 4 | 2 |
| ರಾಕ್ ಸ್ಟಾರ್ಸ್ | 5 | 0 | 5 | 0 |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications