ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದ ಆ್ಯಂಡರ್ಸನ್

ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದ ಆ್ಯಂಡರ್ಸನ್ | Oneindia Kannada
india england test series virat kohli lying james anderson

ಲಂಡನ್, ಜುಲೈ 23: 'ಭಾರತ ಗೆಲುವಿನ ಹಾದಿಯಲ್ಲಿ ಓಟ ಮುಂದುವರಿಸುವವರೆಗೂ ನಾನು ರನ್ ಗಳಿಸುತ್ತೇನೆಯೋ ಅಥವಾ ಇಲ್ಲವೋ ಎನ್ನುವುದು ಮುಖ್ಯವಾಗುವುದಿಲ್ಲ' ಎಂಬ ವಿರಾಟ್ ಕೊಹ್ಲಿ ಹೇಳಿಕೆಯು ಸುಳ್ಳು ಎಂದು ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಹೇಳಿದ್ದಾರೆ.

ಆಗಸ್ಟ್ 1 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅವರ ವೈಯಕ್ತಿಕ ಫಾರ್ಮ್ ಮುಖ್ಯಪಾತ್ರ ವಹಿಸುವುದಿಲ್ಲ ಎಂದು ಕೊಹ್ಲಿ ಭಾವಿಸಿದರೆ ಅದು ಸುಳ್ಳಾಗುತ್ತದೆ ಎಂದು ಆಂಡರ್ಸನ್ ವಿಶ್ಲೇಷಿಸಿದ್ದಾರೆ.

ಮಹಿಳೆ ಮೇಲೆ ಸ್ನೇಹಿತ ಅತ್ಯಾಚಾರವೆಸಗಿದ್ದು ದನುಷ್ಕ ಅಮಾನತಿಗೆ ಕಾರಣ!ಮಹಿಳೆ ಮೇಲೆ ಸ್ನೇಹಿತ ಅತ್ಯಾಚಾರವೆಸಗಿದ್ದು ದನುಷ್ಕ ಅಮಾನತಿಗೆ ಕಾರಣ!

'ಅವರು ರನ್ ಗಳಿಸುತ್ತಾರೆಯೇ ಅಥವಾ ಇಲ್ಲವೇ ಎನ್ನುವುದು ಗಣನೆಗೆ ಬರುವುದಿಲ್ಲವೇ? ನನಗನ್ನಿಸುತ್ತದೆ ಅವರು ಸುಳ್ಳು ಹೇಳುತ್ತಿದ್ದಾರೆ' ಎಂದು ಇಂಗ್ಲೆಂಡ್ ವೇಗಿ ಹೇಳಿದ್ದಾರೆ.

2014ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ರನ್ ಗಳಿಸಲು ಪರದಾಡಿದ್ದರು. ಐದು ಟೆಸ್ಟ್‌ಗಳಲ್ಲಿ ಕೊಹ್ಲಿ ಕೇವಲ 134 ರನ್ ದಾಖಲಿಸಿದ್ದರು. ಇದು ಟೆಸ್ಟ್ ಸರಣಿಗಳಲ್ಲಿ ಅವರ ಅತ್ಯಂತ ಕಳಪೆ ಪ್ರದರ್ಶನವಾಗಿತ್ತು.

india england test series virat kohli lying james anderson

ಪ್ರವಾಸದ ಆರಂಭದಲ್ಲಿ ಕೊಹ್ಲಿ ಫಾರ್ಮ್ ಕುರಿತು ಕೇಳಲಾದ ಪ್ರಶ್ನೆಗೆ ಕೊಹ್ಲಿ ನಕ್ಕಿದ್ದರು. ತಂಡ ಚೆನ್ನಾಗಿ ಆಡುವಾಗ ತಮ್ಮ ವೈಯಕ್ತಿಕ ಫಾರ್ಮ್ ಕುರಿತು ಚಿಂತಿಸದೆ ತಮ್ಮ ಸಮಯವನ್ನು ಎಂಜಾಯ್ ಮಾಡುವುದಾಗಿ ಹೇಳಿದ್ದರು.

'ಭಾರತಕ್ಕೆ ಇಲ್ಲಿ ಗೆಲ್ಲುವುದು ಬಹುಮುಖ್ಯವಾಗಿದೆ. ತಮ್ಮ ತಂಡಕ್ಕಾಗಿ ರನ್ ಗಳಿಸುವ ಅನಿವಾರ್ಯತೆಯಲ್ಲಿ ಕೊಹ್ಲಿ ಇದ್ದಾರೆ. ಇದನ್ನು ತಂಡದ ನಾಯಕನಿಂದ ಹಾಗೂ ಜಗತ್ತಿನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಅವರಿಂದ ನಿರೀಕ್ಷಿಸುವುದು ಸಹಜ' ಎಂದು ಆಂಡರ್ಸನ್ ಹೇಳಿದ್ದಾರೆ.

ರಿಷಬ್ ಪಂತ್ ಭಾರತದ ಭವಿಷ್ಯದ ತಾರೆ :ರಾಹುಲ್ ದ್ರಾವಿಡ್ರಿಷಬ್ ಪಂತ್ ಭಾರತದ ಭವಿಷ್ಯದ ತಾರೆ :ರಾಹುಲ್ ದ್ರಾವಿಡ್

'ಕೊಹ್ಲಿ ಅವರು ಪಂದ್ಯಗಳ ದೃಷ್ಟಿಯಿಂದ ಕಠಿಣ ಅಭ್ಯಾಸ ನಡೆಸಿದ್ದಾರೆ ಎನ್ನುವುದು ನನಗೆ ಗೊತ್ತು. ಇದು ಕೊಹ್ಲಿ ಹಾಗೂ ನನ್ನ ನಡುವೆ ಮಾತ್ರವಲ್ಲ, ಆದರೆ ಅವರ ಮತ್ತು ನಮ್ಮ ಉಳಿದ ಬೌಲರ್‌ಗಳ ನಡುವಣ ಕದನವಾಗಿರುತ್ತದೆ. ಸಾಕಷ್ಟು ಕುತೂಹಲಕಾರಿಯಾಗಿದೆ' ಎಂದು ಮೆಚ್ಚುಗೆಯ ಮಾತನ್ನಾಡಿದ್ದಾರೆ.

2016ರಲ್ಲಿ ಭಾರತ ಪ್ರವಾಸ ವೇಳೆ ಆಂಡರ್ಸನ್ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್ ಪಡೆದಿದ್ದರು.

'ಇಂದಿನ ದಿನಗಳಲ್ಲಿ ಕ್ರಿಕೆಟಿಗರು ಪಂದ್ಯಗಳ ತುಣುಕುಗಳನ್ನು ನೋಡಿ ಮಾತ್ರ ಕಲಿಯುವುದಿಲ್ಲ. ಹಿಂದಿನ ಅನುಭವಗಳಿಂದಲೂ ಕಲಿತುಕೊಳ್ಳುತ್ತಾರೆ. ನಾನು 2014ರ ಸರಣಿಯಲ್ಲಿ ಕಲಿತ ಕೊಹ್ಲಿಯಂತಹ ಆಟಗಾರನ ಗುಣಮಟ್ಟದ ಆಟವನ್ನು ನಿರೀಕ್ಷಿಸುತ್ತಿದ್ದೇನೆ' ಎಂದು ಆಂಡರ್ಸನ್ ಹೇಳಿದ್ದಾರೆ.

Story first published: Monday, July 23, 2018, 19:00 [IST]
Other articles published on Jul 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X