
ಬದಲಾಗದಿದ್ರೆ ಉಳಿಗಾಲವಿಲ್ಲ
ಪ್ರಖರತೆ ಕಳೆದುಕೊಂಡಿದ್ದ ಶಿಖರ್ ಧವನ್ ಇತ್ತೀಚಿನ ಪಂದ್ಯಗಳಲ್ಲಿ ತನ್ನ ಇರುವಿಕೆಯನ್ನು ತೋರಿಸುತ್ತಿದ್ದಾರೆ. ಆದರೆ ಭಾರತದ ಬ್ಯಾಟಿಂಗ್ ಸಾಲಿನಲ್ಲಿ ಇನ್ನೊಂದಿಷ್ಟು ಮಂದಿ ಚೇತರಿಕೆ ತೋರಿಸಿಕೊಳ್ಳುವುದರ ಅಗತ್ಯವಿದೆ. ಸದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕೆಎಲ್ ರಾಹುಲ್ ಮತ್ತು ಪಂತ್‌ಗೆ ಹೆಚ್ಚು ಅವಕಾಶ ದೊರೆತಿವೆ. ಆದರೆ ಅವಕಾಶಕ್ಕೆ ತಕ್ಕಂತ ಗಮನಾರ್ಹ ಪ್ರದರ್ಶನವನ್ನು ಇಬ್ಬರೂ ಇತ್ತೀಚೆಗೆ ನೀಡಿದ್ದಿಲ್ಲ. ರಾಹುಲ್-ಪಂತ್ ಎಚ್ಚೆತ್ತುಕೊಳ್ಳದಿದ್ದರೆ ತಂಡಕ್ಕೂ ನಷ್ಟದ ಜೊತೆಗೆ ಇಬ್ಬರೂ ಯುವ ಆಟಗಾರರಿಗೂ ನಷ್ಟವಾಗಲಿದೆ.

ಸ್ಫೋಟಕ ಬ್ಯಾಟ್ಸ್ಮನ್ ಗಳು
ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಸರದಿ ಚೆನ್ನಾಗಿದೆ. ಆದರೆ ಬ್ಯಾಟ್ಸ್ಮನ್‌ಗಳು ಕೊಂಚ ಬಿರುಸಿನಾಟ ಪ್ರದರ್ಶಿಸಬೇಕಾದ ಅನಿವಾರ್ಯತೆಯಿದೆ. ಯಾಕೆಂದರೆ ಆಸೀಸ್‌ನಲ್ಲಿ ಟಿ20ಗೆ ಸೂಕ್ತವೆನಿಸುವ ಬ್ಯಾಟ್ಸ್ಮನ್‌ಗಳ ಸರದಿಯಲ್ಲಿ ಆ್ಯರನ್ ಫಿಂಚ್, ಡಿ ಆರ್ಕಿ ಶಾರ್ಟ್, ಗ್ಲೆನ್ ಮ್ಯಾಕ್ಸ್‌ವೆಲ್ ನಂತವರಿದ್ದಾರೆ. ಹೀಗಾಗಿಯೇ ಫಿಂಚ್, ಈ ಮಾದರಿಯಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದಿದ್ದರು.

ಮೈಖೇಲ್‌ನಲ್ಲೂ ಲೈವ್‌ಸ್ಕೋರ್
ಎರಡನೇ ಟಿ20 ಪಂದ್ಯವು ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಶುಕ್ರವಾರ (ನವೆಂಬರ್ 23, ಭಾರತೀಯ ಕಾಲಮಾನದ ಪ್ರಕಾರ) 1.20pmಗೆ ಆರಂಭಗೊಳ್ಳಲಿದೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ಪಂದ್ಯದ ನೇರ ಪ್ರಸಾರ ಸಿಗಲಿದೆ. ಸೋನಿ Livನಲ್ಲೂ ಪಂದ್ಯ ವೀಕ್ಷಿಸಬಹುದು. ಜೊತೆಗೆ 'ಮೈಖೇಲ್ ಕನ್ನಡ'ವೂ ಪಂದ್ಯದ ಲೈವ್‌ಸ್ಕೋರ್ ಪ್ರಕಟಿಸಲಿದೆ.

ಸಂಭಾವ್ಯ ಭಾರತ ತಂಡ
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆ), ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ / ವಾಷಿಂಗ್ಟನ್ ಸುಂದರ್, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಖಲೀಲ್ ಅಹ್ಮದ್ / ಯುಜುವೇಂದ್ರ ಚಾಹಲ್.

ಸಂಭಾವ್ಯ ಆಸ್ಟ್ರೇಲಿಯಾ ತಂಡ
ಆ್ಯರನ್ ಫಿಂಚ್ (ಸಿ), ಡಿ ಆರ್ಕಿ ಶಾರ್ಟ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಬೆನ್ ಮೆಕ್ಡರ್ಮಾಟ್, ಅಲೆಕ್ಸ್ ಕ್ಯಾರಿ (ವಿಕೆ), ಆಂಡ್ರ್ಯೂ ಟೈ, ಆಡಮ್ ಜಂಪಾ, ಜಾಸನ್ ಬೆಹ್ರೆನ್ಡಾರ್ಫ್, ಬಿಲ್ಲಿ ಸ್ಟ್ಯಾನ್ಲೇಕ್.