Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಎಸ್‌ಕೆ ವಿರುದ್ಧ ಜಯದೊಂದಿಗೆ ವೈಯಕ್ತಿಕ ದಾಖಲೆ ಬರೆಯುವತ್ತ ಕೊಹ್ಲಿ ಚಿತ್ತ!

ಚೆನೈ ವಿರುದ್ಧ ದಾಖಲೆ ಬರೆಯಲು ರೆಡಿಯಾಗಿದ್ದಾರೆ ಕೊಹ್ಲಿ..!?
IPL 2019: Virat Kohli eyes twin records in opener against CSK

ಬೆಂಗಳೂರು, ಮಾರ್ಚ್ 20: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಚೆನ್ನೈಯಲ್ಲಿ ಮಾರ್ಚ್ 23ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಿನೊಂದಿಗೆ ವೈಯಕ್ತಿಕ ದಾಖಲೆ ಬರೆಯುವ ಯೋಜನೆಯಲ್ಲಿದ್ದಾರೆ.

ಚೆನ್ನೈ ಪಂದ್ಯವನ್ನು ಗೆದುಕೊಳ್ಳುವುದೇ ಕೊಹ್ಲಿ ಬಳಗದ ಮೊದಲ ಗುರಿ. ಇದರೊಂದಿಗೆ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿದರೆ ವೈಯಕ್ತಿಕ ದಾಖಲೆಯೂ ಸೃಸ್ಟಿಯಾಗಲಿದೆ. ಆರಂಭಿಕ ಪಂದ್ಯದಲ್ಲಿ ಕೊಹ್ಲಿ ಕೇವಲ 37 ರನ್ ಗಳಿಸಿದರೂ ಸಾಕು; ಐಪಿಎಲ್‌ನಲ್ಲಿ ವೈಯಕ್ತಿಕ ಅತ್ಯಧಿಕ ರನ್‌ಗಾಗಿ ಕೊಹ್ಲಿ ಮೊದಲ ಸ್ಥಾನ ಆವರಿಸಿಕೊಳ್ಳಲಿದ್ದಾರೆ.

ಐಪಿಎಲ್‌ನಲ್ಲಿ ಒಟ್ಟು 4948 ರನ್ ಗಳಿಸಿರುವ ಕೊಹ್ಲಿ ವೈಯಕ್ತಿಕ ಅತ್ಯಧಿಕ ರನ್‌ ಗಳಿಸಿದವರಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ಒಟ್ಟು 4985 ರನ್‌ನೊಂದಿಗೆ ಈ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಮತ್ತೊಂದು ಗಮ್ಮತ್ತಿನ ಸಂಗತಿಯೆಂದರೆ ಚೆನ್ನೈ ಪಂದ್ಯದಲ್ಲಿ ಕೊಹ್ಲಿ ಆರ್‌ಸಿಬಿಯಿಂದ ಆರಂಭಿಕರಾಗಿ ಮೈದಾನಕ್ಕಿಳಿದರೆ ಅತ್ತ ರೈನಾ ಕೂಡ ಸಿಎಸ್‌ಕೆಯಿಂದ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಇದಲ್ಲದೆ ಕೊಹ್ಲಿ ಇನ್ನೊಂದು ದಾಖಲೆ ಬರೆಯಲೂ ಅವಕಾಶವಿದೆ.

ಐಪಿಎಲ್ ನಲ್ಲಿ ಕೊಹ್ಲಿ ಒಟ್ಟು 38 ಸಾರಿ ಅರ್ಧಶತಕ (50+ ರನ್) ಬಾರಿಸಿದ್ದಾರೆ. ಚೆನ್ನೈ ಪಂದ್ಯದಲ್ಲಿ ವಿರಾಟ್ ಇನ್ನೊಂದು ಅರ್ಧಶತಕ ದಾಖಲಿಸಿದರೂ ಸನ್ ರೈಸರ್ಸ್ ಹೈದರಾಬಾದ್‌ನ ಡೇವಿಡ್ ವಾರ್ನರ್ ದಾಖಲೆ ಸರಿದೂಗಲಿದೆ. ವಾರ್ನರ್ ಈಗ 39 ಅರ್ಧಶತಕ ದಾಖಲೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಅತ್ಯಧಿಕ 50+ ರನ್ ಗಾಗಿ ಕೊಹ್ಲಿ ಈಗ ದ್ವಿತೀಯ ಸ್ಥಾನದಲ್ಲಿದ್ದಾರೆ.

Story first published: Wednesday, March 20, 2019, 20:14 [IST]
Other articles published on Mar 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+