ಭಾರತಕ್ಕೆ ಗೆಲ್ಲಲು 205 ರನ್ ಗುರಿ ನೀಡಿದ ದಕ್ಷಿಣ ಆಫ್ರಿಕಾ

Posted By:
South Africa cricket team gives 205 target to India

ಸೆಂಚೂರಿಯನ್, ಫೆಬ್ರವರಿ 16: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ 6ನೇ ಹಾಗೂ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ ಭಾರತ ಗೆಲ್ಲಲು 205ರನ್ ಗುರಿ ನೀಡಿದೆ.

ಸರಣಿ ಉದ್ದಕ್ಕೂ ಬಿಗಿ ಬೌಲಿಂಗ್ ದಾಳಿ ನಡೆಸಿದ ಭಾರತದ ಬೌಲರ್‌ಗಳು ಕೊನೆಯ ಪಂದ್ಯದಲ್ಲೂ ತಮ್ಮ ಮೊನಚು ದಾಳಿಯನ್ನು ಮುಂದುವರೆಸಿ ದ.ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಭಾರತದ ಬೌಲರ್‌ಗಳ ಎದುರು ರನ್ ಗಳಿಸಲು ಪರದಾಡಿದ ದ.ಆಫ್ರಿಕಾ ಬ್ಯಾಟ್ಸ್‌ಮನ್‌ಗಳು 46.5 ಓವರ್‌ಗಳಲ್ಲಿ 204 ರನ್ ಗಳಿಸಿ ಆಲ್‌ಔಟ್ ಆದರು.

ಸರಣಿಯಲ್ಲಿ ಮೊದಲ ಪಂದ್ಯ ಆಡಿದ ಬೌಲರ್‌ ಶಾರ್ದೂಲ್ ಠಾಕೂರ್ 4 ವಿಕೆಟ್ ಗಳಿಸಿದರು. ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಸ್ಪಿನ್ನರ್ ಚಾಹಲ್ ತಲಾ 2 ವಿಕೆಟ್ ಗಳಿಸಿದರು. ಹಾರ್ದಿಕ್ ಪಾಂಡ್ಯಾ ಮತ್ತು ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು.

ದ.ಆಫ್ರಿಕಾ ಪರ ಜುಂಡೊ 54 ರನ್ ಗಳಿಸಿದ್ದು ಹೊರತು ಪಡಿಸಿದರೆ ಇನ್ನಾವ ಆಟಗಾರರೂ ಉತ್ತಮ ಪ್ರದರ್ಶನ ತೋರಲಿಲ್ಲ. ಡಿ.ವಿಲಿಯರ್ಸ್ 30 ರನ್ ಗಳಿಸಿ ದೊಡ್ಡ ಇನ್ನಿಂಗ್ಸ್‌ ಆಡುವ ಮುನ್ಸುಚನೆ ನೀಡಿದರಾದರೂ ಚಾಹಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

150 ರನ್‌ಗೆ 7 ವಿಕೆಟ್ ಕಳೆದುಕೊಂಡು ಕುಂಟುತ್ತಿದ್ದ ದ.ಆಫ್ರಿಕಾವನ್ನು ಬೌಲರ್‌ಗಳಾದ ಫೆಲುಕ್ವಾಯೊ (34) ಮತ್ತು ಮಾರ್ನೆ ಮಾರ್ಕಲ್ (20) ಇನ್ನೂರರ ಗಡಿ ದಾಟಿಸಿದರು.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಭಾರತದ ಬ್ಯಾಟ್ಸ್‌ಮನ್‌ಗಳಿಗೆ 205 ರನ್ ಸಾಧಾರಣ ಗುರಿಯಷ್ಟೆ ಆದರೆ ಉತ್ತಮ ಬೌಲಿಂಗ್ ದಾಳಿ ಹೊಂದಿರುವ ದ.ಆಫ್ರಿಕಾ ಮುಂದೆ ಸ್ವಲ್ಪ ಎಚ್ಚರ ತಪ್ಪಿದರೂ ಸೋಲು ಕಟ್ಟಿಟ್ಟ ಬುತ್ತಿ.

Story first published: Friday, February 16, 2018, 20:24 [IST]
Other articles published on Feb 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ