ಶ್ರೀಲಂಕಾಗೆ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ತಂಡದ ಬಗ್ಗೆ ಲಂಕಾ ಕೋಚ್ ಹೇಳಿದ್ದಿಷ್ಟು!

ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಶಿಖರ್ ಧವನ್ ನೇತೃತ್ವದ ಭಾರತ ತಂಡ ತೆರಳಿದೆ. ಶಿಖರ್ ಧವನ್ ನೇತೃತ್ವದ ಈ ತಂಡದಲ್ಲಿ ಭಾರತದ ಪ್ರಮುಖ ಸ್ಟಾರ್ ಆಟಗಾರರು ಇಲ್ಲ. ಹಾಗಿದ್ದರೂ ಭಾರತ ತಂಡವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಆರ್ಥರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಗಾಗಿ ಭಾರತ ಪೂರ್ಣ ಸಾಮರ್ಥ್ಯದ ತಂಡವನ್ನು ಕಳುಹಿಸದ ಬಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾ ಲಂಕಾ ಮಂಡಳಿಯ ವಿರುದ್ಧ ಟೀಕೆಯನ್ನು ಮಾಡಿದ್ದರು. ಭಾರತ ತಂಡವನ್ನು ದ್ವಿತೀಯ ದರ್ಜೆಯ ತಂಡ ಎಂದು ಜರಿದಿದ್ದರು. ಶ್ರೀಲಂಕಾ ಮಾಜಿ ನಾಯಕನ ಈ ಮಾತಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಶ್ರೀಲಂಕಾ ಕ್ರಿಕೆಟ್ ತಂಡದ ಕೋಚ್ ಭಾರತೀಯ ತಂಡದ ಸಾಮರ್ಥ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಆ್ಯಂಡಿ ಬಾಲ್ಬಿರ್ನಿ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್‌ಗೆ ಜಯಆ್ಯಂಡಿ ಬಾಲ್ಬಿರ್ನಿ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್‌ಗೆ ಜಯ

"ಇದು ಭಾರತೀಯ ಕ್ರಿಕೆಟ್ ತಂಡದ ಅದ್ಭುತವಾದ ತಂಡ ಎಂಬ ಅರಿವು ನಮಗಿದೆ. ಹೀಗಾಗಿ ಯಾವುದೇ ಭ್ರಮೆಯಲ್ಲಿ ನಾವಿಲ್ಲ. ಭಾರತೀಯ ತಂಡ ಬಲಿಷ್ಠವಾಗಿದೆ. ಅವರಲ್ಲಿ ಅನೇಕ ಅತ್ಯುತ್ತಮ ಆಟಗಾರರು ಇದ್ದಾರೆ. ಇದು ಐಪಿಎಲ್‌ನ ಆಲ್‌ಸ್ಟಾರ್ ಇಲೆವೆನ್‌ನಂತಿದೆ" ಎಂದು ಮಿಕ್ಕಿ ಆರ್ಥರ್ ಹೇಳಿದ್ದಾರೆ.

"ಅವರದ್ದು ಅದ್ಭುತ ಆಟಗಾರರನ್ನು ಒಳಗೊಂಡ ತಂಡವಾಗಿದೆ. ನಮ್ಮ ಪಾಲಿಗೆ ಇದು ಯುವ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಬಗ್ಗೆ ಗಮನಹರಿಸುವ ಸಮಯವಾಗಿದೆ" ಎಂದು ಮಿಕ್ಕಿ ಆರ್ಥರ್ ಸ್ಪೋರ್ಟ್ಸ್‌ಕೀಡಾಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ಇನ್ನು ಟೀಮ್ ಇಂಡಿಯಾದಲ್ಲಿ ದೊಡ್ಡ ಸ್ಟಾರ್ ಆಟಗಾರರು ಇಲ್ಲದಿದ್ದರೂ ಭಾರತ ತಂಡ ಹೊಂದಿರುವ ಪ್ರತಿಭಾವಂತ ಆಟಗಾರರ ಪಡೆಯನ್ನು ನೋಡಿ ತಾನು ಅಸೂಯೆಪಟ್ಟಿರುವುದಾಗಿ ಮಿಕ್ಕಿ ಆರ್ಥರ್ ಹೇಳಿಕೊಂಡಿದ್ದಾರೆ.

R Ashwin ಟೆಸ್ಟ್ ಮ್ಯಾಚ್ ಗೆಲ್ಲಿಸೋಕೆ ನಾನ್ ರೆಡೀ!! | Oneindia Kannada

ಭಾರತ ಹಾಗೂ ಶ್ರೀಲಂಕಾ ತಮಡಗಳ ನಡುವಿನ ಸೀಮಿತ ಓವರ್‌ಗಳ ಸರಣಿ ಕೊರೊನಾವೈರಸ್‌ನ ಕಾರಣದಿಮದಾಗಿ ಮುಂದೂಡಲ್ಪಟ್ಟಿದೆ. ಮೂರು ಏಕದಿನ ಹಾಗೂ ಮೂರಿ ಟಿ20 ಪಂದ್ಯಗಳ ಸರಣಿ ಜುಲಥ 18ರಿಂದ ಆರಂಭವಾಗಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 14, 2021, 22:50 [IST]
Other articles published on Jul 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X