ನಾಯಕನಾಗಿ 11 ಶತಕ ಸಿಡಿಸಿ ಗವಾಸ್ಕರ್ ದಾಖಲೆ ಸರಿಗಟ್ಟಿದ ಕೊಹ್ಲಿ

Posted By:

ಕೋಲ್ಕತ್ತಾ, ನವೆಂಬರ್ 20: ಪ್ರವಾಸಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು.

ಮೊದಲ ಟೆಸ್ಟ್ : ಕೊಹ್ಲಿ ಭರ್ಜರಿ ಶತಕ, ಲಂಕಾಕ್ಕೆ 231ರನ್ ಟಾರ್ಗೆಟ್

ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ದ ವಿರಾಟ್ ಕೊಹ್ಲಿ ಅಜೇಯ 105 ಬಾರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ 50ನೇ ಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಕೊಹ್ಲಿ 11ನೇ ಶತಕ ಬಾರಿಸಿ ಸುನೀಲ್ ಗವಾಸ್ಕರ್ ದಾಖಲೆ ಸರಿಸಮಕ್ಕೆ ನಿಂತರು.

Virat Kohli equals Sunil Gavaskar's record of most number of centuries in Tests as Indian captain

ಸುನೀಲ್ ಗವಾಸ್ಕರ್ ಭಾರತ ತಂಡದ ನಾಯಕರಾಗಿ ಟೆಸ್ಟ್ ನಲ್ಲಿ 11 ಶತಕಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದಾರೆ, ಇದೀಗ ಕೂಡ ಲಂಕಾ ವಿರುದ್ಧ 11ನೇ ಶತಕ ಸಿಡಿಸಿ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದರು.

ಕೊಹ್ಲಿ ಹುಟ್ಟುಹಬ್ಬದ ವಿಶೇಷ, 2017ರ ಸಾಧನೆಗಳ ಹಿನ್ನೋಟ!

ಈ ಶತಕದ ನೆರವಿನಿಂದ ಕೊಹ್ಲಿ ಏಕದಿನ ಕ್ರಿಕೆಟ್ 32 ಹಾಗೂ ಟೆಸ್ಟ್ ನಲ್ಲಿ 18 ಒಟ್ಟು 50 ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Story first published: Monday, November 20, 2017, 15:35 [IST]
Other articles published on Nov 20, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ