ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಆರ್‌ಸಿಬಿ ತಂಡದ ಇಬ್ಬರು ಆಸ್ಟ್ರೇಲಿಯನ್ ಕ್ರಿಕೆಟಿಗರು ಐಪಿಎಲ್‌ನಿಂದ ಔಟ್

Adam Zampa and Kane Richardson pull out of IPL 2021

ಆರ್‌ಸಿಬಿ ತಂಡದ ಇಬ್ಬರು ಆಸ್ಟ್ರೇಲಿಯನ್ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿದು ತವರಿಗೆ ಮರಳುವ ನಿರ್ಧಾರ ಕೈಗೊಂಡಿದ್ದಾರೆ. ಸ್ಪಿನ್ನರ್ ಆಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ಈ ಬಾರಿಯ ಐಪಿಎಲ್ ಪಯಣವನ್ನು ಮೊಟಕುಗೊಳಿಸಲು ನಿರ್ಧರಿಸಿದ ಆಟಗಾರರಾಗಿದ್ದಾರೆ.

ವೈಯಕ್ತಿಕ ಕಾರಣಗಳನ್ನು ನೀಡಿ ಈ ಇಬ್ಬರು ಆಟಗಾರರು ತವರಿಗೆ ವಾಪಾಸಾಗಲು ನಿರ್ಧಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಆರ್‌ಸಿಬಿ ಫ್ರಾಂಚೈಸಿ ಕೂಡ ಸ್ಪಷ್ಟಪಡಿಸಿದ್ದು ಇಬ್ಬರು ಆಟಗಾರರು ಟೂರ್ನಿಯಿಂದ ಹೊರನಡೆಯುತ್ತಿರುವುದನ್ನು ಖಚಿತಪಡಿಸಿದೆ.

ಐಪಿಎಲ್ 2021: ಹೈದರಾಬಾದ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿಐಪಿಎಲ್ 2021: ಹೈದರಾಬಾದ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ

ಆರ್‌ಸಿಬಿ ಅಧಿಕೃತ ಪ್ರಕಟಣೆ

ಆರ್‌ಸಿಬಿ ಅಧಿಕೃತ ಪ್ರಕಟಣೆ

"ವೈಯಕ್ತಿಕ ಕಾರಣಗಳನ್ನು ನೀಡಿ ಆಸ್ಟ್ರೇಲಿಯಾದ ಆಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ತವರಿಗೆ ವಾಪಾಸಾಗುತ್ತಿದ್ದಾರೆ. ಈ ಐಪಿಎಲ್ ಆವೃತ್ತಿಯ ಉಳಿದ ಪಂದ್ಯಗಳಿಗೆ ಅವರು ಲಭ್ಯವಾಗಿರುವುದಿಲ್ಲ. ಎಲ್ಲಾ ರೀತಿಯಿಂದಲೂ ಆರ್‌ಸಿಬಿ ಫ್ರಾಂಚೈಸಿ ಈ ಆಟಗಾರರಿಗೆ ಬೆಂಬಲವನ್ನು ನೀಡುತ್ತದೆ" ಎಂದು ಆರ್‌ಸಿಬಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್‌ಸಿಬಿ ಅಧಿಕೃತ ಪ್ರಕಟಣೆ

ಆರ್‌ಸಿಬಿ ಅಧಿಕೃತ ಪ್ರಕಟಣೆ

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ವೇಗಿ ಆಂಡ್ರೋ ಟೈ ಕೂಡ ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡು ತವರಿಗೆ ಮರಳಿದಿದ್ದರು . ಆಂಡ್ರೋ ಟೈ ಡೆಲ್ಲಿ ಕ್ಯಾಪಟಿಲ್ಸ್ ತಂಡದ ಸದಸ್ಯರಾಗಿದ್ದಾರೆ. ಅದಾದ ಬಳಿಕ ಡೆಲ್ಲಿ ತಂಡದ ಅನುಭವಿ ಆಟಗಾರ ಆರ್ ಅಶ್ವಿನ್ ಕೂಡ ಈ ಬಾರಿಯ ಐಪಿಎಲ್‌ನಿಂದ ವಿರಾಮ ಪಡೆಯುತ್ತಿರುವುದನ್ನು ತಿಳಿಸಿದ್ದಾರೆ.

ಆರ್‌ಆರ್ ತಂಡಕ್ಕೆ ಲಿವಿಂಗ್ಸ್ಟನ್ ಶಾಕ್

ಆರ್‌ಆರ್ ತಂಡಕ್ಕೆ ಲಿವಿಂಗ್ಸ್ಟನ್ ಶಾಕ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ರಾಜಸ್ಥಾನ್ ರಾಯಲ್ಸ್ ತಂಡದ ಸದಸ್ಯ ಲಿಯಾನ್ ಲಿವಿಂಗ್ಸ್ಟನ್ ಬಯೋಬಬಲ್ ಕಾರಣದಿಂದಾಗಿ ಮೊದಲಿಗೆ ಈ ಬಾರಿಯ ಐಪಿಎಲ್‌ನಿಂದ ಹೊರ ನಡೆದ ಆಟಗಾರನಾಗಿದ್ದಾರೆ.

ಭಾರತದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಆತಂಕ

ಭಾರತದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಆತಂಕ

ಸದ್ಯ ಭಾರತದಲ್ಲಿ ಕೊರೊನಾ ಪರಿಸ್ಥಿತಿ ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದರೂ ಕಠಿಣ ಬಯೋಬಬಲ್‌ನ ಕಾರಣದಿಂದಾಗಿ ಐಪಿಎಲ್ ಸದ್ಯಕ್ಕೆ ಸುಸೂತ್ರವಾಗಿ ನಡೆಯುತ್ತಿದೆ. ಭಾರೀ ಮುನ್ನಚ್ಚರಿಕೆ ಹಾಗೂ ಎಚ್ಚರಿಕೆಯ ಕ್ರಮಗಳಿಂದಾಗಿ ಐಪಿಎಲ್‌ಗೆ ಈವರೆಗೆ ದೊಡ್ಡ ಮಟ್ಟದ ಆತಂಕ ಮೂಡಿಸಿಲ್ಲ. ಐಪಿಎಲ್ ಆರಂಭಕ್ಕೂ ಮುನ್ನ ಒಂದಷ್ಟು ಕೊರೊನಾ ವೈರಸ್ ಪ್ರಕರಣಗಳು ಕಂಗೆಡಿಸಿದರೂ ಬಿಸಿಸಿಐ ಕೈಗೊಂಡಿರುವ ಕ್ರಮಗಳ ಕಾರಂದಿಂದಾಗಿ ಯಶಸ್ವಿಯಾಗಿ ನಿಯಂತ್ರಣ ಮಾಡಿಕೊಳ್ಳಲಾಗಿದೆ.

Story first published: Monday, April 26, 2021, 13:46 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X