ಏಷ್ಯಾಕಪ್ 2022: ತಂಡಕ್ಕೆ ಆಯ್ಕೆಯಾದರೂ ಕೆಎಲ್ ರಾಹುಲ್ ಆಡುವುದು ಅನುಮಾನ; ಬದಲಿ ಆಟಗಾರ ರೆಡಿ!

ಕೊನೆಯದಾಗಿ 2018ರಲ್ಲಿ ನಡೆದಿದ್ದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಈ ಬಾರಿ ಮರಳಿ ಬಂದಿದ್ದು, ಕ್ರೀಡಾಭಿಮಾನಿಗಳು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಈ ಮಿನಿ ವಿಶ್ವಕಪ್‌ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಇನ್ನು ಈ ಟೂರ್ನಿಗಾಗಿ ಈಗಾಗಲೇ ತಂಡಗಳು ಪ್ರಕಟಿಸಿದ್ದು, ಬಿಸಿಸಿಐ ನಿನ್ನೆಯಷ್ಟೇ ( ಆಗಸ್ಟ್ 8 ) ಹದಿನೈದು ಆಟಗಾರರ ತಂಡವನ್ನು ಪ್ರಕಟಿಸಿದ್ದು, ತಂಡವನ್ನು ಯಾರೂ ಊಹಿಸಿರದ ರೀತಿಯಲ್ಲಿ ಆಯ್ಕೆಗಾರರು ರಚಿಸಿದ್ದಾರೆ.

ಮಹಾರಾಜ ಟ್ರೋಫಿ: ಮನೀಶ್ ಅರ್ಧಶತಕ, ಶಿವಮೊಗ್ಗಕ್ಕೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದ ಗುಲ್ಬರ್ಗಾಮಹಾರಾಜ ಟ್ರೋಫಿ: ಮನೀಶ್ ಅರ್ಧಶತಕ, ಶಿವಮೊಗ್ಗಕ್ಕೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದ ಗುಲ್ಬರ್ಗಾ

ಹೌದು, ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗುವ ಟೀಮ್ ಇಂಡಿಯಾ ಈ ರೀತಿ ಇರಲಿದೆ ಎಂಬುದನ್ನು ಕ್ರಿಕೆಟ್ ಪ್ರಿಯರು ಊಹಿಸಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಆಡದ ರವಿಚಂದ್ರನ್ ಅಶ್ವಿನ್ ಹಾಗೂ ಆಡಿದ ಕೆಲ ಟಿ ಟ್ವೆಂಟಿ ಪಂದ್ಯಗಳಲ್ಲಿ ಹೆಚ್ಚು ರನ್ ನೀಡಿ ದುಬಾರಿಯಾಗಿದ್ದ ಅವೇಶ್ ಖಾನ್ ಅವರನ್ನು ಬಿಸಿಸಿಐ ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡಿದ್ದು ಆ‍ಶ್ಚರ್ಯ ಮೂಡಿಸಿತ್ತು. ಇನ್ನು ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಇಲ್ಲದಿರುವುದು ಮತ್ತೊಂದು ಆಶ್ಷರ್ಯಕ್ಕೆ ಕಾರಣವಾಗಿತ್ತು.

Asia Cup 2022: ಏಷ್ಯಾಕಪ್‌ಗಾಗಿ 2 ವಾರಗಳ ಮುಂಚೆಯೇ ಅಭ್ಯಾಸ ಆರಂಭಿಸಲಿದ್ದಾರೆ ವಿರಾಟ್ ಕೊಹ್ಲಿAsia Cup 2022: ಏಷ್ಯಾಕಪ್‌ಗಾಗಿ 2 ವಾರಗಳ ಮುಂಚೆಯೇ ಅಭ್ಯಾಸ ಆರಂಭಿಸಲಿದ್ದಾರೆ ವಿರಾಟ್ ಕೊಹ್ಲಿ

ಹೀಗೆ ಸಾಕಷ್ಟು ಅನಿರೀಕ್ಷಿತ ಅಂಶಗಳನ್ನು ಹೊಂದಿರುವ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಅವರಿಗೆ ಸ್ಥಾನವನ್ನು ನೀಡಿದ್ದೂ ಸಹ ತುಸು ಆಶ್ಚರ್ಯವನ್ನು ಮೂಡಿಸಿತ್ತು ಎನ್ನಬಹುದು. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನೂ ಆಡದ ಹಾಗೂ ಸಾಲು ಸಾಲು ಗಾಯದ ಸಮಸ್ಯೆ ಮತ್ತು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೆಎಲ್ ರಾಹುಲ್ ಅವರನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಆರಿಸುವುದು ಅನುಮಾನ ಎನ್ನಲಾಗಿತ್ತು. ಆದರೆ, ಬಿಸಿಸಿಐ ಕೆಎಲ್ ರಾಹುಲ್ ಅವರಿಗೆ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾದ ತಂಡದಲ್ಲಿ ಸ್ಥಾನ ನೀಡಿದ್ದು ಮಾತ್ರವಲ್ಲದೇ, ಉಪನಾಯಕನ ಸ್ಥಾನವನ್ನೂ ಸಹ ನೀಡಿದೆ. ಹೀಗೆ ಅವಕಾಶ ಸಿಕ್ಕರೂ ಸಹ ಕೆಎಲ್ ರಾಹುಲ್ ಏಷ್ಯಾಕಪ್ ಟೂರ್ನಿಯಲ್ಲಿ ಆಡುವುದು ಅನುಮಾನ ಮೂಡಿಸಿದೆ.

ಏಷ್ಯಾಕಪ್‌ನಲ್ಲಿ ಕಣಕ್ಕಿಳಿಯಲು ಫಿಟ್‌ನೆಸ್ ಮುಖ್ಯ

ಏಷ್ಯಾಕಪ್‌ನಲ್ಲಿ ಕಣಕ್ಕಿಳಿಯಲು ಫಿಟ್‌ನೆಸ್ ಮುಖ್ಯ

ಇನ್ನು ಸಾಲು ಸಾಲು ಗಾಯದ ಸಮಸ್ಯೆ ಹಾಗೂ ಅನಾರೋಗ್ಯದ ಸಮಸ್ಯೆಯಿಂದ ಬಳಲಿರುವ ಕೆಎಲ್ ರಾಹುಲ್ ಅವರಿಗೆ ಏಷ್ಯಾಕಪ್‌ಗೆ ಪ್ರಕಟವಾಗಿರುವ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿದ್ದರೂ ಸಹ ಅವರು ಟೂರ್ನಿಯಲ್ಲಿ ಕಣಕ್ಕಿಳಿಯಬೇಕೆಂದರೆ ಅದಕ್ಕೂ ಮುನ್ನ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲೇಬೇಕಾದ ಅಗತ್ಯವಿದೆ. ಹೀಗಾಗಿ ಟೀಮ್ ಇಂಡಿಯಾ ಯುಎಇಗೆ ಪ್ರಯಾಣ ಕೈಗೊಳ್ಳುವ ಮುನ್ನ ಕೆಎಲ್ ರಾಹುಲ್ ಫಿಟ್‌ನೆಸ್ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ ಸಂಪೂರ್ಣವಾಗಿ ಫಿಟ್ ಆದರೆ ಮಾತ್ರ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯನ್ನು ಬಲ್ಲ ಮೂಲಗಳು ತಿಳಿಸಿವೆ.

ಕೆಎಲ್ ರಾಹುಲ್ ಬದಲಿ ಆಟಗಾರ ರೆಡಿ

ಕೆಎಲ್ ರಾಹುಲ್ ಬದಲಿ ಆಟಗಾರ ರೆಡಿ

ಇನ್ನು ಕೆಎಲ್ ರಾಹುಲ್ ಒಂದುವೇಳೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಯಶಸ್ವಿಯಾಗದೇ ಇದ್ದರೆ ಟೂರ್ನಿಗೆ ಹೆಚ್ಚುವರಿ ಆಟಗಾರನಾಗಿ ಆಯ್ಕೆಯಾಗಿರುವ ಶ್ರೇಯಸ್ ಐಯ್ಯರ್ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಜತೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ.

Sanju , DK ಹಾಗು Ashwin ಅಭಿಮಾನಿಗಳಿಗೆ ಮನರಂಜನೆ ಕೊಟ್ಟಿದ್ದು ಹೀಗೆ | *Cricket |OneIndia Kannada
ಟೂರ್ನಿಗೆ ಪ್ರಕಟವಾಗಿರುವ ಭಾರತ ತಂಡ

ಟೂರ್ನಿಗೆ ಪ್ರಕಟವಾಗಿರುವ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

ಹೆಚ್ಚುವರಿ ‌ಅಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಐಯ್ಯರ್ ಮತ್ತು ದೀಪಕ್ ಚಹರ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 9, 2022, 22:32 [IST]
Other articles published on Aug 9, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X