ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಸರಣಿ : ಗವಾಸ್ಕರ್, ಸಚಿನ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ

india vs australia test ; ಗವಾಸ್ಕರ್, ಸಚಿನ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ | Oneindia Kannada
 Australia Vs India: Virat Kohli on the verge of surpassing Sachin Tendulkar, Sunil Gavaskar record

ಬೆಂಗಳೂರು, ನವೆಂಬರ್ 29: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಅವರ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಡಿಸೆಂಬರ್ 06ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.

30 ವರ್ಷ ವಯಸ್ಸಿನ ಕೊಹ್ಲಿ ಅವರು ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 87 ಎಸೆತಗಳಲ್ಲಿ 64ರನ್ ಗಳಿಸಿ ಲಯಕ್ಕೆ ಮರಳಿರುವುದನ್ನು ತೋರಿಸಿದ್ದಾರೆ. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಅವರು ಒಂದು ಶತಕ ಗಳಿಸಿದರೂ ಸಾಕು. ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.

ಸಚಿನ್ ಅವರು 20 ಪಂದ್ಯಗಳಲ್ಲಿ 6 ಟೆಸ್ಟ್ ಶತಕಗಳನ್ನು ಆಸ್ಟ್ರೇಲಿಯಾ ವಿರುದ್ಧ ಆಸೀಸ್ ನೆಲದಲ್ಲಿ ಬಾರಿಸಿದ್ದಾರೆ. ಕೊಹ್ಲಿ ಅವರು 8 ಪಂದ್ಯಗಳಲ್ಲಿ 5 ಶತಕಗಳಿಸಿದ್ದಾರೆ. ಸುನಿಲ್ ಗವಾಸ್ಕರ್ ಅವರು 11 ಪಂದ್ಯಗಳಿಂದ 5 ಶತಕ ಬಾರಿಸಿದ್ದಾರೆ.

ಅಭ್ಯಾಸ ಪಂದ್ಯಕ್ಕೆ ಶಾರ್ಟ್ಸ್ ಧರಿಸಿ ಬಂದ ಕೊಹ್ಲಿ ವಿರುದ್ಧ ಕಿಡಿಅಭ್ಯಾಸ ಪಂದ್ಯಕ್ಕೆ ಶಾರ್ಟ್ಸ್ ಧರಿಸಿ ಬಂದ ಕೊಹ್ಲಿ ವಿರುದ್ಧ ಕಿಡಿ

2018ರಲ್ಲಿ ಕೊಹ್ಲಿ 4 ಟೆಸ್ಟ್ ಶತಕ ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ(ಸೆಂಚುರಿಯನ್) ವಿರುದ್ಧ 1, ಇಂಗ್ಲೆಂಡ್ ವಿರುದ್ಧ 2 (ಬರ್ಮಿಂಗ್ ಹ್ಯಾಮ್ ಹಾಗೂ ನಾಟಿಂಗ್ ಹ್ಯಾಮ್ ) ಹಾಗೂ ರಾಜ್ ಕೋಟ್ ನಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಒಂದು ಶತಕ.

ಗವಾಸ್ಕರ್ ಅವರು ವೆಸ್ಟ್ ಇಂಡೀಸ್ ವಿರುದ್ಧ 13 ಶತಕ ಬಾರಿಸಿದ್ದರು. ತೆಂಡೂಲ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧ 11 ಶತಕ ಗಳಿಸಿದ್ದರು. ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ 6 ಶತಕ ಬಾರಿಸಿದ್ದಾರೆ.

2014-15ರ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ 4 ಪಂದ್ಯಗಳಿಂದ 4 ಶತಕದೊಂದಿಗೆ 692ರನ್ ಗಳಿಸಿರುವ ಕೊಹ್ಲಿ ಅವರು ಒಟ್ಟಾರೆ, 62ರನ್ ಸರಾಸರಿಯಂತೆ 992ರನ್ ಬಾರಿಸಿದ್ದಾರೆ.

Story first published: Friday, November 30, 2018, 1:00 [IST]
Other articles published on Nov 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X