ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇ-ನೈಟ್ ಮ್ಯಾಚ್: ಶಾಸ್ತ್ರಿ ಯೂ-ಟರ್ನ್ ಗೆ ಬಿಸಿಸಿಐ ಅಚ್ಚರಿ

BCCI surprised by Ravi Shastri’s U-turn to play Day Night Tests

ನವದೆಹಲಿ, ಮೇ 5: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಸಲುದ್ದೇಶಿಸಿದ್ದ ಡೇ-ನೈಟ್ ಪಂದ್ಯಾಟಗಳಿಗೆ ಟೀಮ್ ಇಂಡಿಯಾ ಹೆಡ್ ಕೋಚ್ ರವಿ ಶಾಸ್ತ್ರಿ ಹಿಂದೇಟು ಹಾಕುತ್ತಿರುವ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಚ್ಚರಿ ವ್ಯಕ್ತಪಡಿಸಿದೆ.

ಈ ಹಿಂದೆ ಡೇ-ನೈಟ್ ಟೆಸ್ಟ್ ನಲ್ಲಿ ತಂಡ ಪಾಲ್ಗೊಳ್ಳುವ ಬಗ್ಗೆ ಒಪ್ಪಿಗೆ ಸೂಚಿಸಿದ್ದ ರವಿ ಶಾಸ್ತ್ರಿ ಈಗ ಏಕಾಏಕಿ ಏನೋ ಕಾರಣ ನೀಡಿ ಯೂ ಟರ್ನ್ ಹೊಡೆಯುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಬಿಸಿಸಿಐ ಹೇಳಿದೆ.

ಕಳೆದ ವರ್ಷ ವೆಸ್ಟ್ ಇಂಡೀಸ್ ಟೆಸ್ಟ್ ಪ್ರವಾಸ ಸಂದರ್ಭ ವೆಸ್ಟ್ ಇಂಡೀಸ್ ನಲ್ಲಿ ವಿಂಡೀಸ್ ಮತ್ತು ಭಾರತ ತಂಡಗಳ ಮಧ್ಯೆ ಡೇ-ನೈಟ್ ಟೆಸ್ಟ ಮ್ಯಾಚ್ ನಡೆಸುವುದೆಂದು ನಿರ್ಧರಿಸಲಾಗಿತ್ತು. ಕೊಹ್ಲಿ ತಂಡ ಆಸ್ಟ್ರೇಲಿಯಾದಲ್ಲೂ ಹೊನಲು ಬೆಳಕಿನ ಟೆಸ್ಟ್ ಪಂದ್ಯಾಟದಲ್ಲಿ ಭಾಗವಹಿಸಲು ನಿರ್ಧರಿಸಿತ್ತು.

ಬಿಸಿಸಿಐ ಹಿರಿಯ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, 'ಸುಮಾರು ಮೂರು ತಿಂಗಳ ಹಿಂದೆ ಪಿಂಕ್ ಬಾಲ್ ನೊಂದಿಗಿನ ಈ ಡೇ-ನೈಟ್ ಟೆಸ್ಟ ಪ್ರಯೋಗಕ್ಕೆ ಹಿರಿಯ ಮಾಜಿ ಆಟಗಾರ, ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರೂ ಆಗಿರುವ ರವಿ ಶಾಸ್ತ್ರಿ ಒಪ್ಪಿದ್ದರು. ಆದರೆ ಈಗ ಇಂತಹ ಪಂದ್ಯಾಟಕ್ಕೆ ತಂಡ ಸಜ್ಜುಗೊಳ್ಳಲು 12ರಿಂದ 18 ತಿಂಗಳ ತರಬೇತಿಯ ಅವಶ್ಯಕತೆಯಿದೆ ಎನ್ನುತ್ತಿದ್ದಾರೆ' ಎಂದಿದ್ದಾರೆ.

'ಅದೂ ಯಾವ ರೀತಿಯ ತರಬೇತಿ, ಕಾಲಾವಧಿ ಹೊಂದಿಸಿಕೊಳ್ಳುವುದು ಹೇಗೆ ಎಂಬಲ್ಲ ಬಗ್ಗೆ ಯಾವುದೇ ಸೂಚನೆಯನ್ನು ಶಾಸ್ತ್ರಿ ನೀಡಿಲ್ಲ. ಒಟ್ಟಿನಲ್ಲಿ ಅವರು ಹಿಂದೇಟು ಹಾಕುತ್ತಿದ್ದಾರೆ' ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಸುಪ್ರೀಮ್ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಮಂಡಳಿ ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ಎರಡೂ ಕಡೆಯಲ್ಲೂ ಇಂಥ ಪಂದ್ಯಾಟ ನಡೆಸುವಂತಿಲ್ಲ. ನಡೆಸುವುದಿದ್ದರೂ ಹೆಡ್ ಕೋಚ್ ರವಿ ಶಾಸ್ತ್ರಿ ಸಲಹೆ ಪಡೆಯಬೇಕು ಎಂದು ಸೂಚಿಸಿತ್ತು. ರವಿ ಶಾಸ್ತ್ರಿ ಸಲಹೆಯ ನಂತರವೇ ಪಂದ್ಯ ಆಯೋಜನೆಗೆ ಸಂಬಂಧಿಸಿ ತಯಾರಿಗಳನ್ನು ನಡೆಸಬೇಕು ಎಂದೂ ಹೇಳಿತ್ತು. ಆದರೆ ಈ ಹಿಂದೆ ಒಪ್ಪಿಕೊಂಡಿದ್ದ ಶಾಸ್ತ್ರಿ ಈಗ ಹಿಂದೆ ಸರಿಯುತ್ತಿರುವುದು ಬಿಸಿಸಿಐ ಅಧಿಕಾರಿಗಳಿಗೆ ಅಚ್ಚರಿಯೊಂದಿಗೆ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

Story first published: Saturday, May 5, 2018, 18:12 [IST]
Other articles published on May 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X