ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನ ಐಪಿಎಲ್ ಆಟಗಾರರಿಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ಗೆ ಸ್ಥಾನವಿಲ್ಲ?!

England IPL players unlikely to find place in Test squad against New Zealand

ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ಆಟಗಾರರಿಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಗೆ ತಂಡದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಕಡಿಮೆಯಿದ ಎನ್ನಲಾಗುತ್ತಿದೆ. ಐಪಿಎಲ್‌ನಲ್ಲಿ ಆಡುವ ಆಟಗಾರರಿಗೆ ರೆಡ್‌ಬಾಲ್‌ನಲ್ಲಿ ಅಭ್ಯಾಸವೂ ಕಡಿಮೆ ಇರುವುದರಿಂದ ಇಂಗ್ಲೆಂಡ್ ಹೀಗೆ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಈ ಬೇಸಗೆಯಲ್ಲಿ ಕೊಹ್ಲಿಗಿಂತ ವಿಲಿಯಮ್ಸನ್ ಹೆಚ್ಚು ರನ್ ಗಳಿಸುತ್ತಾರೆ: ವಾನ್ಈ ಬೇಸಗೆಯಲ್ಲಿ ಕೊಹ್ಲಿಗಿಂತ ವಿಲಿಯಮ್ಸನ್ ಹೆಚ್ಚು ರನ್ ಗಳಿಸುತ್ತಾರೆ: ವಾನ್

ಸದ್ಯ ಅಮಾನತಾಗಿರುವ ಐಪಿಎಲ್‌ನಿಂದ ಬಂದಿರುವ ಇಂಗ್ಲೆಂಡ್‌ ಆಟಗಾರರು ಈಗ 10 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸುತ್ತಿದ್ದಾರೆ. ಹೀಗಾಗಿ ಜೂನ್ 2ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಂಗ್ಲ ಕೆಲ ಆಟಗಾರರು ಮಿಸ್ ಆಗುವ ನಿರೀಕ್ಷೆಯಿದೆ.

ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್), ಜಾನಿ ಬೇರ್ಸ್ಟೋವ್ (ಸನ್ ರೈಸರ್ಸ್ ಹೈದರಾಬಾದ್), ಸ್ಯಾಮ್ ಕರನ್ (ಚೆನ್ನೈ ಸೂಪರ್ ಕಿಂಗ್ಸ್), ಮೊಯೀನ್ ಅಲಿ (ಸಿಎಸ್‌ಕೆ) ಟಾಮ್ ಕರನ್ (ಡೆಲ್ಲಿ ಕ್ಯಾಪಿಟಲ್ಸ್). ಕ್ರಿಸ್ ವೋಕ್ಸ್ (ಡಿಸಿ) ಮೊದಲಾದವರು ಸದ್ಯ ಕ್ವಾರಂಟೈನ್ ಪಾಲಿಸುತ್ತಿದ್ದಾರೆ. ಇವರೆಲ್ಲ ಟೆಸ್ಟ್‌ ತಂಡದಲ್ಲಿ ಸ್ಥಾನ ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ವನಿತಾ ತಂಡಗಳು ಪ್ರಕಟಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ವನಿತಾ ತಂಡಗಳು ಪ್ರಕಟ

"ಐಪಿಎಲ್‌ನಿಂದ ವಾಪಸ್ಸಾದ ಆಟಗಾರರಿಗೆ ಈ ಬಾರಿ ಅವಕಾಶ ಕಷ್ಟ ಎನಿಸಲಿದೆ. ಹೀಗಾಗಿ ಆಲ್ಲಿ ರಾಬಿನ್ಸನ್, ಕ್ರೇಗ್ ಒವರ್ಟನ್ ಮತ್ತು ಜೇಮ್ಸ್ ಬ್ರೇಸಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಫಿಟ್ನೆಸ್‌ ಅನ್ನು ಬೇಕಾದರೆ ಮ್ಯಾನೇಜ್ ಮಾಡಬಹುದು. ಆದರೆ ರೆಡ್‌ಬಾಲ್ ಪ್ರ್ಯಾಕ್ಟೀಸ್ ಕೊರತೆ ನಮ್ಮ ಚಿಂತೆಯಾಗಿದೆ,' ಎಂದು ಮೂಲವೊಂದು ಬಿಬಿಸಿ ಸ್ಪೋರ್ಟ್ಸ್‌ಗೆ ಹೇಳಿದೆ.

Story first published: Saturday, May 15, 2021, 14:23 [IST]
Other articles published on May 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X