ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

1000ನೇ ಟೆಸ್ಟ್ ಆಡಿದ ವಿಶ್ವದ ಮೊದಲ ಕ್ರಿಕೆಟ್ ತಂಡವಾಗಲಿದೆ ಇಂಗ್ಲೆಂಡ್!

ಇಂಗ್ಲೆಂಡ್ ಕ್ರಿಕೆಟ್ ತಂಡ ಮಾಡಿದ ಸಾಧನೆ ಕೇಳಿ | Oneindia Kannada
England set to become the first team to play 1000 Tests

ಲಂಡನ್, ಜಲೈ 30: ಮುಂಬರಲಿರುವ ಟೆಸ್ಟ್ ಸರಣಿಗಾಗಿ ಭಾರತದೆದುರು ಕಣಕ್ಕಿಳಿಯಲಿರುವ ಇಂಗ್ಲೆಂಡ್, ಕ್ರಿಕೆಟ್ ಊರಿನ ದಾರಿಗೆ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲಿದೆ. ಎಜ್ ಬಾಸ್ಟನ್ ನಲ್ಲಿ ನಡೆಯಲಿರುವ ಸರಣಿಯ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ 1000 ಟೆಸ್ಟ್ ಪಂದ್ಯಗಳನ್ನು ಪೂರೈಸಿದ ಮೊದಲ ತಂಡವೆಂಬ ಕೀರ್ತಿಗೆ ಪಾತ್ರವಾಗಲಿದೆ.

ಮಂಡ್ಯದ ಕಾಮೇಗೌಡರನ್ನು ಹೊಗಳಿದ ವಿವಿಎಸ್ ಲಕ್ಷ್ಮಣ್ಮಂಡ್ಯದ ಕಾಮೇಗೌಡರನ್ನು ಹೊಗಳಿದ ವಿವಿಎಸ್ ಲಕ್ಷ್ಮಣ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಹೆಸರಿನಲ್ಲೀಗ 999 ಪಂದ್ಯಗಳು ಆಡಿದ ದಾಖಲೆಯಿದೆ. ಆಗಸ್ಟ್ 1ರಂದು 141 ವರ್ಷಗಳ ಬಳಿಕ ಇಂಗ್ಲೆಂಡ್ ಈ ನಾಲ್ಕಂಕಿ ಸಾಧನೆ ಮೆರೆಯಲಿದೆ. ಬರ್ಮಿಂಗ್ ಹ್ಯಾಂಮ್ ನ ಎಜ್ ಬಾಸ್ಟನ್ ಸ್ಟೇಡಿಯಂನಲ್ಲಿ ಯಾರ್ಕ್ಷೈರ್ಮ್ಯಾನ್ ಜೋ ರೂಟ್ ಮುಂದಾಳತ್ವದ ಇಂಗ್ಲೆಂಡ್ ಈ ಅಪೂರ್ವ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ 1877ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡಿತ್ತು. ಟೆಸ್ಟ್ ಕ್ರಿಕೆಟ್ ನತ್ತ ಇಂಗ್ಲೆಂಡ್ ನ ಸೆಳೆತಕ್ಕೆ ಕಾರಣವೇನೋ ಗೊತ್ತಿಲ್ಲ. ಆದರೆ ಟೆಸ್ಟ್ ಎಡೆಗಿನ ಇಂಗ್ಲೆಂಡ್ ನ ಈ ಆಕರ್ಷಣೆ ಅದನ್ನಿವತ್ತು 1000 ಪಂದ್ಯಗಳ ದಾಖಲೆಗೆ ಕಾರಣವಾಗುವಂತೆ ಮಾಡಿದೆ.

ಟೆಸ್ಟ್ ಕ್ರಿಕೆಟ್ ದಾರಿಯಲ್ಲಿ 1000 ಪಂದ್ಯಗಳನ್ನು ಪೂರೈಸಲಿರುವ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, 812 ಪಂದ್ಯಗಳ ಸಾಧನೆಯೊಂದಿಗೆ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ (535 ಪಂದ್ಯಗಳು) ತೃತೀಯ ಮತ್ತು ಭಾರತ (522 ಪಂದ್ಯಗಳು) ನಾಲ್ಕನೇ ಸ್ಥಾನದಲ್ಲಿದೆ.

Story first published: Monday, July 30, 2018, 15:18 [IST]
Other articles published on Jul 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X