ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೀಘ್ರ ವಿಕೆಟ್ ಕಳೆದುಕೊಂಡ ಡೇವಿಡ್ ವಾರ್ನರ್‌ಗೆ ಮಾರ್ಕ್‌ ವಾ ತರಾಟೆ

Former Australian cricketer mark waugh slams david warner

ಆಸ್ಟ್ರೇಲಿಯಾದ ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಸಿಡ್ನಿ ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಹಿನ್ನೆಲೆಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದರು. ಆದರೆ ವಾರ್ನರ್ ಎದುರಿಸಿದ 8ನೇ ಎಸೆತಕ್ಕೆ 5 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಮೊದಲನೇ ಇನ್ನಿಂಗ್ಸ್‌ನ ಆಟವನ್ನು ಮುಗಿಸಿದರು. ಹೀಗಾಗಿ ಆಸ್ಟ್ರೇಲಿಯಾ ಆರಂಭಿಕ ಆಘಾತವನ್ನು ಎದುರಿಸಿತು.

ಡೇವಿಡ್ ವಾರ್ನರ್ ಹೀಗೆ ಶೀಘ್ರವಾಗಿ ವಿಕೆಟ್ ಕಳೆದುಕೊಂಡ ರೀತಿಗೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮಾರ್ಕ್ ವಾ ಚಾಟಿ ಬೀಸಿದ್ದಾರೆ. ಡೇವಿಡ್ ವಾರ್ನರ್ ಟೆಸ್ಟ್‌ ಕ್ರಿಕೆಟ್‌ನ ಆರಂಭದಲ್ಲಿ ಹೇಗೆ ಆಡಬೇಕಿತ್ತೋ ಆ ರೀತಿ ಆಡಿಲ್ಲ ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗಾಬಾ ಟೆಸ್ಟ್‌ಗೆ ಭಾರತ ಹಿಂದೇಟು: ಸ್ಪಷ್ಟನೆಯ ನಿರೀಕ್ಷೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾಗಾಬಾ ಟೆಸ್ಟ್‌ಗೆ ಭಾರತ ಹಿಂದೇಟು: ಸ್ಪಷ್ಟನೆಯ ನಿರೀಕ್ಷೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ

ಫಾಕ್ಸ್ ಕ್ರಿಕೆಟ್ ಜೊತೆಗೆ ಮಾರ್ಕ್ ವಾ ಮಾತನಾಡುತ್ತಾ ಡೇವಿಡ್ ವಾರ್ನರ್ ಆಟದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಡೇವಡ್ ವಾರ್ನರ್ ಔಟಾದ ಹೊಡೆತಕ್ಕೆ ಮಾರ್ಕ್ ವಾ ಪ್ರಭಾವಿತರಾಗಿಲ್ಲ. "ಅದೊಂದು ಕಳಪೆ ಹೊಡೆತ" ಎಂದು ಮಾರ್ಕ್ ವಾ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

"ಅದು ಟೆಸ್ಟ್‌ನ ಕ್ರಿಕೆಟ್‌ನ ಮೊದಲ 20 ಎಸೆತಗಳಲ್ಲಿ ಬಾರಿಸಬೇಕಾದ ಹೊಡೆತವಲ್ಲ. ದರದಿಂದ ಬಂದ ಎಸೆತವನ್ನು ನೀವು ಬಾರಿಸುತ್ತೀರಿ. ಅದು ಬಾರಿಸುವ ಹೊಡೆತವಾಗಿರಲಿಲ್ಲ. ಆದರೆ ನೀಡು ನಿಮ್ಮ ಕೈಗಳನ್ನು ಅದರತ್ತ ಬಾರಿಸುತ್ತೀರಿ" ಎಂದು ಮಾರ್ಕ್ ವಾ ಡೇವುಡ್ ವಾರ್ನರ್ ವಿಕೆಟ್ ಒಪ್ಪಿಸಿದ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದರು.

3ನೇ ಟೆಸ್ಟ್‌ ವೇಳೆ ಅಭಿಮಾನಿಗಳು ಇಡೀ ಹೊತ್ತು ಮಾಸ್ಕ್ ಹಾಕೋದು ಕಡ್ಡಾಯ3ನೇ ಟೆಸ್ಟ್‌ ವೇಳೆ ಅಭಿಮಾನಿಗಳು ಇಡೀ ಹೊತ್ತು ಮಾಸ್ಕ್ ಹಾಕೋದು ಕಡ್ಡಾಯ

"ಆತ ಗಾಯದಿಂದ ಹೊರಬಂದಿದ್ದರೆ ಉತ್ತಮವಾಗಿ ಹೆಜ್ಜೆಯಿದಬೇಕಾಗುತ್ತು. ನಿಜವಾಗಿಗೂ ಅದು ತಾಳ್ಮೆಯಿಲ್ಲದ ಹೊಡೆತ. ಆತ ಬೇಗನೆ ರನ್ ಗಳಿಸಲು ಯತ್ನಿಸಿರಬಹುದು" ಎಂದು ಮಾರ್ಕ್ ವಾ ಡೇವಿಡ್ ವಾರ್ನರ್ ಬಗ್ಗೆ ಪ್ರತಿಕ್ರಿಯಿಸಿದರು.

Story first published: Thursday, January 7, 2021, 13:04 [IST]
Other articles published on Jan 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X