ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗ್ಲೌಸ್ ಧರಿಸಿದ್ದ ಅಂಪೈರ್‌ಗಳು ಇನ್ನು ಸ್ವೆಟರ್, ಸನ್‌ಗ್ಲಾಸ್ ಹಿಡಿದು ನಿಲ್ಲುವಂತಿಲ್ಲ

Gloved umpires to not hold sweaters, sunglasses: ICC

ನವದೆಹಲಿ, ಮೇ 23: ಕೊರೊನಾವೈರಸ್‌ನಿಂದ ನಿಲುಗಡೆಯಾಗಿದ್ದ ಕ್ರಿಕೆಟ್‌ ಪಂದ್ಯಗಳನ್ನು ಪುನರಾರಂಭಿಸುವ ಮುನ್ನ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮಹತ್ವದ ಮಾರ್ಗಸೂಚಿಗಳನ್ನು ಹೊರ ತಂದಿದೆ. ಚೆಂಡಿಗೆ ಎಂಜಲು ಸವರುವುದನ್ನು ನಿಷೇಧಿಸಿದ ಬಳಿಕ ಮತ್ತೊಂದಿಷ್ಟು ಬದಲಾವಣೆಗಳೊಂದಿಗೆ ಕ್ರಿಕೆಟ್ ಆರಂಭಿಸಲು ಐಸಿಸಿ ಯೋಚಿಸಿದೆ.

ಭಾವುಕರಾಗಿದ್ದ ಸಚಿನ್, ದ್ರಾವಿಡ್ ವಿಶ್ವಕಪ್‌ನಲ್ಲಿ ಭಾರತ ಗೆಲ್ಲಿಸಿದ್ದು ಇದೇ ದಿನ!ಭಾವುಕರಾಗಿದ್ದ ಸಚಿನ್, ದ್ರಾವಿಡ್ ವಿಶ್ವಕಪ್‌ನಲ್ಲಿ ಭಾರತ ಗೆಲ್ಲಿಸಿದ್ದು ಇದೇ ದಿನ!

ಮಾರಕ ಸೋಂಕು ಒಬ್ಬರಿಂದೊಬ್ಬರಿಗೆ ಹರಡುವುದನ್ನು ತಪ್ಪಿಸಲು ಆರೋಗ್ಯ ಕಾಳಜಿ ವಹಿಸುವುದರಲ್ಲಿ ರಾಜಿ ಮಾಡಿಕೊಳ್ಳದಿರಲು ನಿರ್ಧರಿಸಿರುವ ಐಸಿಸಿ, ಕ್ರಿಕೆಟ್ ನಿಯಮಾವಳಿಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನು ತಂದಿದೆ. ಅದರಂತೆ ಇನ್ಮುಂದೆ ಅಂಪೈರ್‌ ಮೈದಾನಕ್ಕಿಳಿಯುವಾಗ ಗ್ಲೌಸ್ ಧರಿಸಬೇಕಿದೆ.

ಕ್ರಿಕೆಟ್‌, ಸೆಕ್ಸ್‌ ಎರಡರ ವೇಳೆಯೂ ಹೇಳಬಹುದಾದ ಪೋಲಿ ಪದಗಳಿವು!ಕ್ರಿಕೆಟ್‌, ಸೆಕ್ಸ್‌ ಎರಡರ ವೇಳೆಯೂ ಹೇಳಬಹುದಾದ ಪೋಲಿ ಪದಗಳಿವು!

ಅಷ್ಟೇ ಅಲ್ಲ, ಬೌಲರ್‌ಗಳು ಓವರ್‌ ಎಸೆಯುವ ವೇಳೆ ತಮ್ಮ ಸನ್ ಗ್ಲಾಸ್, ಸ್ವೆಟರ್‌ ಅನ್ನು ಅಂಪೈರ್ ಕೈಯಲ್ಲಿ ಕೊಟ್ಟು ಬೌಲಿಂಗ್ ಮಾಡುವ ಕ್ರಮವಿತ್ತು. ಇದಿನ್ನು ಬದಲಾಗಲಿದೆ. ಗ್ಲೌಸ್ ಧರಿಸುವ ಅಂಪೈರ್‌ ಇನ್ನು ಆಟಗಾರರ ಸ್ವೆಟರ್, ಸನ್ ಗ್ಲಾಸ್ ಹಿಡಿದುಕೊಳ್ಳುವಂತಿಲ್ಲ.

ರೋಹಿತ್ ಶರ್ಮಾಗೆ ಟಿ20 ನಾಯಕನ ಪಟ್ಟ: ಮಾಜಿ ಕ್ರಿಕೆಟಿಗನ ಅಭಿಮತರೋಹಿತ್ ಶರ್ಮಾಗೆ ಟಿ20 ನಾಯಕನ ಪಟ್ಟ: ಮಾಜಿ ಕ್ರಿಕೆಟಿಗನ ಅಭಿಮತ

ಚೆಂಡಿನಿಂದ ಎದುರಾಗಬಹುದಾದ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಐಸಿಸಿ ಪ್ರಮುಖ ಮಾರ್ಗಸೂಚಿನಗಳನ್ನು ನೀಡಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದೆ. ಹೀಗಾಗಿ ಬೌಲರ್‌ಗಳು, ಆಟಗಾರರು ಕಣ್ಣು, ಮೂಗು, ಬಾಯಿ ಮುಟ್ಟಿ ಚೆಂಡನ್ನು ಮುಟ್ಟುವುದಕ್ಕೆ ನಿರ್ಬಂಧ ಹೇರಲಾಗಿದೆ.

ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!

ಆಟಗಾರರು ಚೆಂಡಿಗೆ ಎಂಜಲು ಸವರುವಂತಿಲ್ಲ, ಆದರೆ ಬೆವರು ಬಳಸಲು ಸದ್ಯಕ್ಕೆ ಅನುಮತಿ ನೀಡಲಾಗಿದೆ. ಆದರೆ ಬೌಲರ್‌ಗಳು ತಮ್ಮ ಗ್ಲಾಸ್, ಸ್ವೆಟರ್ ಅನ್ನು ಅಂಪೈರ್ ಕೈಯಲ್ಲಿ ಕೊಡದೆ ತಾವೇ ಇಟ್ಟುಕೊಳ್ಳಬೇಕಿದೆ. ಪಂದ್ಯಗಳಲ್ಲಿ ಪಾಲ್ಗೊಳ್ಳುವ ಆಟಗಾರರು 14 ದಿನಗಳ ಕ್ವಾರಂಟೈನ್‌ ಪಾಲಿಸಬೇಕಿದೆ. ಇಂಥ ಒಂದಿಷ್ಟು ಬದಲಾವಣೆಗಳನ್ನು ಐಸಿಸಿ ಮಾರ್ಗಸೂಚಿಯಲ್ಲಿ ಹೇಳಿದೆ.

Story first published: Saturday, May 23, 2020, 19:20 [IST]
Other articles published on May 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X