ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ವೈಟ್ ಬಾಲ್ ಕ್ರಿಕೆಟ್‌ಗೆ ನಾಯಕರಾಗಲಿದ್ದಾರೆ ರೋಹಿತ್ ಶರ್ಮಾ!

Hitman Rohit Sharma could be white-ball skipper after T20 World Cup

ನವದೆಹಲಿ: ಭಾರತೀಯ ವೈಟ್‌ ಬಾಲ್ ಕ್ರಿಕೆಟ್‌ನಲ್ಲಿ ಹೊಸ ಯುಗ ಶುರುವಾಗಲಿದೆ. ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ವೈಟ್‌ಬಾಲ್ ತಂಡಕ್ಕೆ ನಾಯಕರಾಗಬೇಕು ಎನ್ನುವ ಚರ್ಚೆ ಕ್ರಿಕೆಟ್‌ ವಲಯದಲ್ಲಿ ಬಹಳಷ್ಟು ದಿನಗಳಿಂದ ನಡೆಯುತ್ತಿತ್ತು. ಶರ್ಮಾ ನಾಯಕರಾಗಬೇಕು ಎನ್ನುವ ಕ್ರಿಕೆಟ್ ಪ್ರೇಮಿಗಳ ಆಸೆ ಈಡೇರುವುದರಲ್ಲಿದೆ. ಹಿಟ್‌ಮ್ಯಾನ್ ರೋಹಿತ್ ಶೀಘ್ರ ಭಾರತದ ವೈಟ್ ಬಾಲ್ (ಟಿ20ಐ, ಏಕದಿನ) ತಂಡಕ್ಕೆ ನಾಯಕರಾಗಿ ಹೆಸರಿಸಲ್ಪಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಐಪಿಎಲ್ 2021: ಗೇಲ್ to ಎಬಿಡಿ, ಐಪಿಎಲ್ ಇತಿಹಾಸದ ಟಾಪ್ 5 ಸ್ಪೋಟಕ ಶತಕಗಳುಐಪಿಎಲ್ 2021: ಗೇಲ್ to ಎಬಿಡಿ, ಐಪಿಎಲ್ ಇತಿಹಾಸದ ಟಾಪ್ 5 ಸ್ಪೋಟಕ ಶತಕಗಳು

ಅಕ್ಟೋಬರ್‌-ನವೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಪ್ರತಿಷ್ಠಿತ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಟೂರ್ನಿ ಬಳಿಕ ರೋಹಿತ್ ಶರ್ಮಾ ಟೀಮ್ ಇಂಡಿಯಾದ ವೈಟ್‌ಬಾಲ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ವೈಟ್‌ಬಾಲ್ ಮತ್ತು ರೆಡ್‌ಬಾಲ್ ಎರಡಕ್ಕೂ ಸದ್ಯ ವಿರಾಟ್ ಕೊಹ್ಲಿ ನಾಯಕರಾಗಿದ್ದಾರೆ. ಆದರೆ ಮುಂದೆ ವೈಟ್‌ಬಾಲ್ ನಾಯಕತ್ವ ಶರ್ಮಾ ಅವರದ್ದಾಗಲಿದೆ.

ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ

ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ

32ರ ಹರೆಯದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್, ಟಿ20ಐ ಮತ್ತು ಟೆಸ್ಟ್‌ ಕ್ರಿಕೆಟ್‌ನ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ ಟಿ20 ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್ ಮತ್ತು ಟಿ20ಐ ಕ್ರಿಕೆಟ್‌ನ ನಾಯಕತ್ವವನ್ನು 34ರ ಹರೆಯದ ರೋಹಿತ್ ಶರ್ಮಾ ವಹಿಸಿಕೊಳ್ಳಲಿದ್ದಾರೆ. ವೈಟ್‌ಬಾಲ್‌ನಲ್ಲಿ ವಿಶೇಷ ದಾಖಲೆಗಳನ್ನು ಹೊಂದಿರುವ ಶರ್ಮಾಗೆ ನಾಯಕತ್ವ ನೀಡಲಿರುವ ವಿಚಾರ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ತಂದಿದೆ. ಮೂರೂ ಕ್ರಿಕೆಟ್ ಮಾದರಿಗಳಲ್ಲಿ ಈಗ ಭಾರತಕ್ಕೆ ನಾಯಕರಾಗಿರುವ ವಿರಾಟ್, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಯಶಸ್ವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪ್ರಮುಖ ಟೂರ್ನಿಗಳಲ್ಲಿ ಗೆದ್ದಿದೆಯಲ್ಲದೆ, ವಿಶ್ವದಲ್ಲೇ ಬಲಿಷ್ಠ ಕ್ರಿಕೆಟ್ ತಂಡವಾಗಿ ಹೊರ ಹೊಮ್ಮಿದೆ. ಅಂದ್ಹಾಗೆ, ಶರ್ಮಾ ನಾಯಕರಾಗಲಿರುವ ಸಂಗತಿಯನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂಲ ತಿಳಿಸಿದೆ.

ಕೊಹ್ಲಿ ಬ್ಯಾಟಿಂಗ್‌ ಮೇಲೆ ನಾಯಕತ್ವ ಪರಿಣಾಮ ಬೀರುತ್ತಿದೆ

ಕೊಹ್ಲಿ ಬ್ಯಾಟಿಂಗ್‌ ಮೇಲೆ ನಾಯಕತ್ವ ಪರಿಣಾಮ ಬೀರುತ್ತಿದೆ

"ಮುಂದೆ ಭಾರತೀಯ ವೈಟ್‌ಬಾಲ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಾಯಕರಾಗಲಿರುವ ಸಂಗತಿಯನ್ನು ವಿರಾಟ್ ಕೊಹ್ಲಿ ಘೋಷಿಸಲಿದ್ದಾರೆ. ಕೊಹ್ಲಿ ಅವರು ಬ್ಯಾಟಿಂಗ್‌ ಬಗ್ಗೆ ಗಮನ ಹರಿಸಲಿದ್ದಾರೆ. ಅವರ ದೃಷ್ಟಿಕೋನದಲ್ಲಿ ನಾಯಕರಾಗುವುದಕ್ಕಿಂತ ಮೊದಲು ಹೇಗಿದ್ದರೋ ಹಾಗೇಯೇ ಇರಲು ಕೊಹ್ಲಿ ಬಯಸಿದ್ದಾರೆ. ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಕೊಹ್ಲಿ ಹಾಗೇಯೇ ಇನ್ನೊಂದಿಷ್ಟು ಕಾಲ ಮುಂದುವರೆಯಲು ಯೋಚಿಸಿದ್ದಾರೆ," ಎಂದು ಬಿಸಿಸಿಐ ಮೂಲ ತಿಳಿಸಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದ ಪ್ರಮುಖರು ನಿಖರ ಮಾಹಿತಿ ನೀಡಲಿದ್ದಾರೆ. ಆದರೆ ವಿರಾಟ್‌ಗೆ ಮೂರೂ ಮಾದರಿಗಳಲ್ಲಿ ನಾಯಕತ್ವದ ವಹಿಸಿರುವುದು ಅವರ ಬ್ಯಾಟಿಂಗ್‌ ಮೇಲೆ ಪರಿಣಾಮ ಬೀರುತ್ತಿದೆ. ಅದಕ್ಕಾಗಿ ವಿರಾಟ್ ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ವಿರಾಟ್ ನಾಯಕತ್ವದ ಅಂಕಿ-ಅಂಶಗಳು, ರೋಹಿತ್ ದಾಖಲೆ

ವಿರಾಟ್ ನಾಯಕತ್ವದ ಅಂಕಿ-ಅಂಶಗಳು, ರೋಹಿತ್ ದಾಖಲೆ

ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿ 65 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದರು. ಇದರಲ್ಲಿ 38 ಪಂದ್ಯಗಳಲ್ಲಿ ಭಾರತ ಗೆದ್ದಿತ್ತು. ಇನ್ನು ಕೊಹ್ಲಿ 95 ಏಕದಿನದಲ್ಲಿ ನಾಯಕರಾಗಿದ್ದರು. ಇದರಲ್ಲಿ ಭಾರತ 65 ಪಂದ್ಯ ಗೆದ್ದು, 27 ಪಂದ್ಯ ಸೋತಿತ್ತು. 1 ಪಂದ್ಯ ಟೈ, 2 ಪಂದ್ಯ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿತ್ತು. ಕೊಹ್ಲಿ ನಾಯಕತ್ವದ ವಹಿಸಿದ್ದ 45 ಟಿ20ಐ ಪಂದ್ಯಗಳಲ್ಲಿ ಭಾರತ 29ರಲ್ಲಿ ಗೆದ್ದು, 14ರಲ್ಲಿ ಸೋತಿತ್ತು. 2 ಪಂದ್ಯಗಳು ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿದ್ದವು. ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್ ತಂಡ 132 ಪಂದ್ಯಗಳನ್ನಾಡಿದೆ, ಇದರಲ್ಲಿ 62 ಪಂದ್ಯಗಳನ್ನು ಗೆದ್ದಿದೆ, 66 ಪಂದ್ಯಗಳನ್ನು ಸೋತಿದೆ. 4 ಪಂದ್ಯ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿದೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಅಪರೂಪದ ದಾಖಲೆಗಳನ್ನು ಹೊಂದಿದ್ದಾರೆ. ಶರ್ಮಾ 43 ಟೆಸ್ಟ್ ಪಂದ್ಯಗಳಲ್ಲಿ 3047 ರನ್, 8 ಶತಕ, 1 ದ್ವಿಶತಕ, 227 ಏಕದಿನ ಪಂದ್ಯಗಳಲ್ಲಿ 9205 ರನ್, 29 ಶತಕ, 3 ದ್ವಿಶತಕ, 111 ಟಿ20ಐ ಪಂದ್ಯಗಳಲ್ಲಿ 2864 ರನ್, 4 ಶತಕಗಳನ್ನು ಬಾರಿಸಿದ್ದಾರೆ. 207 ಐಪಿಎಲ್ ಪಂದ್ಯಗಳಲ್ಲಿ 5480 ರನ್, 1 ಶತಕದ ದಾಖಲೆ ಹೊಂದಿದ್ದಾರೆ.

Story first published: Monday, September 13, 2021, 12:29 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X