ಟೆಸ್ಟ್‌ ಕ್ರಿಕೆಟ್‌ ಲೀಗ್ ಚಾಂಪಿಯನ್ ಶಿಪ್ : ಐಸಿಸಿ ಸಭೆ ಮುಖ್ಯಾಂಶಗಳು

Posted By:

ಬೆಂಗಳೂರು, ಅಕ್ಟೋಬರ್ 13:ಏಕದಿನ ಹಾಗೂ ಟಿ20 ಮಾದರಿಯಲ್ಲಿ ಟೆಸ್ಟ್‌ ಕ್ರಿಕೆಟ್‌ ನಲ್ಲೂ ಚಾಂಪಿಯನ್‌ಷಿಪ್‌ ಆಯೋಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಮುಂದಾಗಿದೆ.

9 ತಂಡಗಳ ಟೆಸ್ಟ್ ಲೀಗ್ ಟೂರ್ನಮೆಂಟ್ ಹಾಗೂ 13 ತಂಡಗಳ ಏಕದಿನ ಟೂರ್ನಮೆಂಟ್ ಗೆ ಚಾಲನೆ ನೀಡಲು ಐಸಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ.

'2019ರ ಏಕದಿನ ವಿಶ್ವಕಪ್‌ ಬಳಿಕ ಟೆಸ್ಟ್‌ ಚಾಂಪಿಯನ್‌ಷಿಪ್‌ ಆರಂಭಿಸಿ, ಫೈನಲ್‌ ಪಂದ್ಯವನ್ನು 2021ರ ಮಧ್ಯದಲ್ಲಿ ಆಯೋಜಿಸಲಾಗುವುದು' ಎಂದು ಐಸಿಸಿ ಮುಖ್ಯ ಕಾರ್ಯದರ್ಶಿ ಡೇವ್‌ ರಿಚರ್ಡ್‌ಸನ್‌ ಹೇಳಿದ್ದಾರೆ.

ICC to start nine-team Test and 13-team ODI league

ಟೆಸ್ಟ್ ಲೀಗ್ : ಟೆಸ್ಟ್‌ ಮಾನ್ಯತೆ ಪಡೆದಿರುವ 12 ರಲ್ಲಿ 9 ತಂಡಗಳು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಉಳಿದ ಮೂರು ತಂಡಗಳಾದ ಜಿಂಬಾಬ್ವೆ, ಐರ್ಲೆಂಡ್‌ ಹಾಗೂ ಆಫ್ಘಾನಿಸ್ತಾನಕ್ಕೆ ಈ ಅವಕಾಶ ನೀಡಿಲ್ಲ.

2019-2021ರವರೆಗೆ ನಡೆಯಲಿರುವ ಚಾಂಪಿಯನ್‌ಷಿಪ್‌ನ ಪ್ರತಿ ಸರಣಿಯಲ್ಲಿ ಕನಿಷ್ಠ ಎರಡರಿಂದ ಗರಿಷ್ಠ ಐದು ಪಂದ್ಯಗಳು ಇರಲಿವೆ. ಪ್ರತಿ ತಂಡಗಳು ತಲಾ ಮೂರು ಸರಣಿಗಳನ್ನು ತವರಿನಲ್ಲಿ ಮತ್ತು ಬೇರೆ ದೇಶಗಳಲ್ಲಿ ಆಡಬೇಕಿದೆ. ಅಂತಿಮವಾಗಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು 'World Test League Championship Final' ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ಫೈನಲ್ ನಲ್ಲಿ ಸೆಣೆಸಲಿವೆ.

2020ರಲ್ಲಿ ಏಕದಿನ ಕ್ರಿಕೆಟ್ ಲೀಗ್ ನಡೆಯಲಿದ್ದು, ಈ ಲೀಗ್ ನ ಪ್ರದರ್ಶನದ ಆಧಾರದ ಮೇಲೆ ತಂಡಗಳು 2023ರ ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆಯಲಿವೆ ಎಂದು ರಿಚರ್ಡ್ಸನ್ ಹೇಳಿದರು.

ಒಟ್ಟಾರೆ ಮುಖ್ಯಾಂಶಗಳು:

* ಟೆಸ್ಟ್‌ ಮಾನ್ಯತೆ ಪಡೆದಿರುವ 12 ರಲ್ಲಿ 9 ತಂಡಗಳು ಪಾಲ್ಗೊಳ್ಳುವ ಟೆಸ್ಟ್ ಲೀಗ್ ಚಾಂಪಿಯನ್‌ಷಿಪ್‌.
* 2020ರಲ್ಲಿ ಏಕದಿನ ಕ್ರಿಕೆಟ್ ಲೀಗ್ 13 ತಂಡಗಳು ಪಾಲ್ಗೊಳ್ಳುವಿಕೆ. 2023ರ ವಿಶ್ವಕಪ್ ಗೆ ನೇರ ಅರ್ಹತೆ.
* ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳ ಆಯೋಜನೆ.
* ವಿಶ್ವಕಪ್ ಕ್ರಿಕೆಟ್ ಲೀಗ್ ಡಿವಿಷನ್ 2 ಪಂದ್ಯಗಳು ಫೆಬ್ರವರಿ 18ರಿಂದ ಆರಂಭ. ನಮೀಬಿಯಾಕ್ಕೆ ಅತಿಥ್ಯ ವಹಿಸಲು ಅವಕಾಶ.
* ಐಸಿಸಿ ಮಹಿಳೆಯ ವಿಶ್ವ ಟಿ20 2018ರ ಅರ್ಹತಾ ಸುತ್ತಿನ ಪಂದ್ಯಗಳ ಆಯೋಜನೆಗೆ ನೆದರ್ಲೆಂಡ್ಸ್ ಗೆ ಅವಕಾಶ.
* ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳ ಆಯೋಜನೆ ಮಾರ್ಚ್ 2018ರಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿದೆ.

Story first published: Friday, October 13, 2017, 13:49 [IST]
Other articles published on Oct 13, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ