ಟೆಸ್ಟ್ ಶ್ರೇಯಾಂಕ: ಸಿರಾಜ್, ರಾಹುಲ್ ರ‍್ಯಾಂಕಿಂಗ್‌ನಲ್ಲಿ ಭಾರೀ ಏರಿಕೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಮುಕ್ತಾಯ ಕಂಡಿದೆ. ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಪಡೆ ಲಾರ್ಡ್ಸ್ ಪಂದ್ಯವನ್ನು ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ನೀಡಿದ ಪ್ರದರ್ಶನ ಈಗ ಐಸಿಸಿ ಶ್ರೇಯಾಂಕಪಟ್ಟಿಯ ಮೇಲೆ ಪರಿಣಾಮ ಬೀರಿದೆ. ಕೆಲ ಆಟಗಾರರು ನೀಡಿದ ಪ್ರದರ್ಶನದಿಂದಾಗಿ ಶ್ರೇಯಾಂಕಪಟ್ಟಿಯಲ್ಲಿ ಸಾಕಷ್ಟು ಏರಿಕೆಯನ್ನು ಕಂಡಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾದ ಯುವ ವೇಗಿ ಮೊಹಮ್ಮದ್ ಸಿರಾಜ್ ಪ್ರಮುಖರಾಗಿದ್ದಾರೆ.

ಲಾರ್ಡ್ಸ್ ಅಂಗಳದಲ್ಲ ಮಾರಕ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದ ಮೊಹಮ್ಮದ್ ಸಿರಾಜ್ ಟೆಸ್ಟ್ ಶ್ರೇಯಾಂಕಪಟ್ಟಿಯಲ್ಲಿ ಭಾರೀ ಏರಿಕೆ ಕಂಡಿದ್ದಾರೆ. 18 ಸ್ಥಾನಗಳ ಏರಿಕೆ ಪಡೆಯುವಲ್ಲಿ ಸಫಲವಾಗಿರುವ ಮೊಹಮಮ್ದ್ ಸಿರಾಜ್ ಈಗ ಬೌಲರ್‌ಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿರಾಜ್ ಮೊದಲ ಬಾರಿಗೆ ಟೀಮ್ ಇಡಿಯಾವನ್ನು ಟೆಸ್ಟ್ ತಂಡದಲ್ಲಿ ಪ್ರತಿನಿಧಿಸಿದ್ದರು. ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಸಿರಾಜ್ ಈಗ ಭಾರತದ 8ನೇ ಅತ್ಯುತ್ತಮ ಬೌಲರ್ ಎನಿಸಿದ್ದಾರೆ.

ಭಾಎರ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಸಿರಾಜ್ ಭಯಾನಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಭಾರತ ಅಂತಿಮ ದಿನದಲ್ಲಿ ಇಂಗ್ಲೆಂಡ್ ತಂಡವನ್ನು 60 ಓವರ್‌ಗಳಿಗೂ ಮುನ್ನವೇ ಆಲೌಟ್ ಮಾಡಲು ಸಾಧ್ಯವಾಗಿತ್ತು. ಈ ನಿರ್ಣಾಯಕ ಇನ್ನಿಂಗ್ಸ್‌ನಲ್ಲಿ ಸಿರಾಜ್ 32 ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದಾರೆ. ಅಂತಿನ ಇನ್ನಿಂಗ್ಸ್‌ನಲ್ಲಿ ಭಾರತದ ನೀಡಿದ್ದ 272 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ ಕೇವಲ 120 ರನ್‌ಗಳಿಗೆ ಆಲೌಟ್ ಆಗಿತ್ತು. ಇನ್ನು ಲಾರ್ಡ್ಸ್ ಪಂದ್ಯದಲ್ಲಿ ಸಿರಾಜ್ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 126 ರನ್‌ಗಳನ್ನು ನೀಡಿದ್ದು 8 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೂಡ ಸಿರಾಜ್ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದಿದ್ದರು.

ಭಾರತ vs ಇಂಗ್ಲೆಂಡ್: ಲಾರ್ಡ್ಸ್ ಅಂಗಳದಲ್ಲಿ ಸೋತರೂ ಟೀಮ್ ಇಂಡಿಯಾ ಎಂದರೆ ಭಯವಿಲ್ಲ ಎಂದ ಸಿಲ್ವರ್‌ವುಡ್!ಭಾರತ vs ಇಂಗ್ಲೆಂಡ್: ಲಾರ್ಡ್ಸ್ ಅಂಗಳದಲ್ಲಿ ಸೋತರೂ ಟೀಮ್ ಇಂಡಿಯಾ ಎಂದರೆ ಭಯವಿಲ್ಲ ಎಂದ ಸಿಲ್ವರ್‌ವುಡ್!

ಇನ್ನು ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 19ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಏರಿಕೆಯಾಗಿದ್ದ ಜಸ್ಪ್ರೀತ್ ಬೂಮ್ರಾ ಲಾರ್ಡ್ಸ್ ಪಂದ್ಯದ ಬಳಿಕ ಒಂದು ಸ್ಥಾನಗಳ ಕುಸಿತ ಕಂಡಿದ್ದು 10ನೇ ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬೂಮ್ರಾ ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಮೊಹಮ್ಮದ್ ಶಮಿ ಹಾಗೂ ಬೂಮ್ರಾ ಜೋಡಿ ಮುರಿಯದ 9ನೇ ವಿಕೆಟ್‌ಗೆ ಬರೊಬ್ಬರಿ 89 ರನ್‌ಗಳ ಜೊತೆಯಾಟ ನೀಡುವ ಮೂಲಕ ಭಾರತ ತಂಡ ಇಂಗ್ಲೆಂಡ್‌ಗೆ ಸವಾಲಿನ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು. ಈ ಪ್ರದರ್ಶನದಿಂದಾಗಿ ಭಾರತ ಸೋಲಿನ ಸುಳಿಯಿಂದ ಹೊರಬಂದು ಗೆಲುವಿನ ಸಂಭ್ರಮವನ್ನಾಚರಿಸಿದೆ.

ಭಾರತೀಯ ಬೌಲರ್‌ಗಳ ಶ್ರೇಯಾಂಕಪಟ್ಟಿ
ಆರ್ ಅಶ್ವಿನ್ - ರ‍್ಯಾಂಕಿಂಗ್‌ 2
ಜಸ್ಪ್ರೀತ್ ಬುಮ್ರಾ - ರ‍್ಯಾಂಕಿಂಗ್‌ 10
ಇಶಾಂತ್ ಶರ್ಮಾ - ರ‍್ಯಾಂಕಿಂಗ್‌ 16
ಮೊಹಮ್ಮದ್ ಶಮಿ - ರ‍್ಯಾಂಕಿಂಗ್‌ 19
ರವೀಂದ್ರ ಜಡೇಜಾ - ರ‍್ಯಾಂಕಿಂಗ್‌ 21
ಉಮೇಶ್ ಯಾದವ್ - ರ‍್ಯಾಂಕಿಂಗ್‌ 29
ಅಕ್ಷರ್ ಪಟೇಲ್ - ರ‍್ಯಾಂಕಿಂಗ್‌ 34
ಮೊಹಮ್ಮದ್ ಸಿರಾಜ್ -ರ‍್ಯಾಂಕಿಂಗ್‌ 38

ಬ್ಯಾಟಿಂಗ್‌ನಲ್ಲಿ ಕೆಎಲ್ ರಾಹುಲ್ ಏರಿಕೆ: ಇನ್ನು ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ರೀತಿಯಲ್ಲಿಯೇ ಬ್ಯಾಟಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅದ್ಭುತವಾದ ಏರಿಕೆಯನ್ನು ಸಾಧಿಸಿದ್ದಾರೆ. ಕಳೆದ ಸುಮಾರು ಎಎರಡು ವರ್ಷಗಳಿಂದ ಟೆಸ್ಟ್ ತಂಡದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದ್ದರು. ಟೀಮ್ ಇಂಡಿಯಾದ ಇಬ್ಬರು ಆರಂಭಿಕರು ಗಾಯಗೊಂಡಿದ್ದ ಕಾರಣದಿಂದಾಗಿ ಕೆಎಲ್ ರಾಹುಲ್‌ಗೆ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಬಂದಿತ್ತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ರಾಹುಲ್ ಸರಣಿಯ ಮೊದಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಔಟಾಗಿದ್ದರೆ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕಗಳಿಸಿ ಮಿಂಚಿದ್ದರು. ಈ ಪ್ರದರ್ಶನದ ಬಳಿಕ ಕೆಎಲ್ ರಾಹುಲ್ 19 ಶ್ರೇಯಾಂಕಗಳ ಏರಿಕೆ ಸಾಧಿಸಿದ್ದಾರೆ. ಈ ಮೂಲಕ ಅವರು 37ನೇ ಕ್ರಮಾಂಕದಲ್ಲಿದ್ದಾರೆ.

ಐದನೇ ಸ್ಥಾನ ಉಳಿಸಿಕೊಂಡ ಕೊಹ್ಲಿ: ಇನ್ನು ಇಂಗ್ಲೆಂಡ್ ವಿರುದ್ಧದ ಈ ಸರಣಿಯ ಆರಂಭದಲ್ಲಿ ನಾಯಕ ವಿರಾಟ್ ಕೊಹ್ಲಿಯಿಂದ ನಿರೀಕ್ಷಿತ ಪ್ರದರ್ಶನ ಬಾರದಿದ್ದರೂ ಕೊಹ್ಲಿ ತಮ್ಮ ಈ ಐದನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ. ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಮೂರು ಪಂದ್ಯಗಳಲ್ಲಿ ಆಡಿದ್ದು ಒಂದೇ ಒಂದು ಅರ್ಧ ಶತಕವನ್ನು ಗಳಿಸಲು ವಿಫಲವಾಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಮತ್ತೆ ಗಳಿಸಲಿದ್ದಾರೆ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ. ಸುದೀರ್ಘ ಕಾಲದಿಂದ ಶತಕಗಳಿಸಲು ವಿಫಲವಾಗಿರುವ ವಿರಾಟ್ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆಯೂ ಇದೆ. ಈ ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳಿದ್ದು ಇದರಲ್ಲಿ ವಿರಾಟ್ ಬ್ಯಾಟ್‌ನಿಂದ ಮತ್ತೆ ಸರಾಗವಾಗಿ ರನ್ ಹರಿಯಬೇಕಿದೆ.

Anderson ಅವರ ವಯಸ್ಸಿನ ಬಗ್ಗೆ ಬೆರಳು ಮಾಡಿದ Kohli | Oneindia Kannada

6ನೇ ಸ್ಥಾನದಲ್ಲಿ ಮುಂದುವರಿದ ರೋಹಿತ್ ಶರ್ಮಾ: ಇನ್ನು ಅನುಭವಿ ಆಟಗಾರ ರೋಹಿತ್ ಶರ್ಮ ಬ್ಯಾಟಿಂಗ್ ಶ್ರೇಯಾಂಕದಲ್ಲಿ 6ನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರೋಹಿತ್ ಶರ್ಮಾ ಲಾರ್ಡ್ಸ್ ಟೆಸ್ಟ್‌ನ ಮೊದಲ ಪಂದ್ಯದಲ್ಲಿ 83 ರನ್‌ಗಳಿಸಿದ್ದು ಶತಕಗಳಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಕೆಎಲ್ ರಾಹುಲ್ ಜೊತೆಗೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನು ಆಡಿದ್ದರು. ಈ ಮೂಲಕ ಆರಂಭದಲ್ಲಿ ಭಾರತದ ಮೇಲುಗೈಗೆ ಕಾರಣವಾಗಿದ್ದರು. ಇನ್ನು ಉಳಿದಂತೆ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ 7ನೇ ಕ್ರಮಾಂಕದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಬೆಂಚ್ ಕಾದಿದ್ದ ಆರ್ ಅಶ್ವಿನ್ ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಸರಣಿಯ ಉಳೀದ ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಆರ್ ಅಶ್ವಿನ್.

For Quick Alerts
ALLOW NOTIFICATIONS
For Daily Alerts
Story first published: Wednesday, August 18, 2021, 16:56 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X