ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಈ ತಂಡದ ಪರ ಶಾಶ್ವತವಾಗಿ ಆಡಬೇಕೆಂಬ ಆಸೆ ನನಗಿದೆ ಎಂದ ಶುಬ್ಮನ್ ಗಿಲ್

If I get chance again I would like to play for KKR forever says Shubman Gill

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ. ಹೌದು, ಮುಂಬರಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಮತ್ತು ಅಹಮದಾಬಾದ್ ನೂತನ ಫ್ರಾಂಚೈಸಿಗಳು ಸೇರ್ಪಡೆಯಾಗುತ್ತಿರುವುದರಿಂದ ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

ಹೀಗೆ ಈ ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗುತ್ತಿರುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ಕಡ್ಡಾಯವಾಗಿ ನಡೆಯಲಿದ್ದು, ಇದಕ್ಕೂ ಮುನ್ನ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಮಗೆ ಬೇಕಾದ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಹೀಗೆ ಇತ್ತೀಚೆಗಷ್ಟೇ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರ ಶುಭ್ ಮನ್ ಗಿಲ್ ರಿಟೈನ್ ಆಗದೆ ಮೆಗಾ ಹರಾಜಿಗೆ ಕಳುಹಿಸಲ್ಪಟ್ಟಿದ್ದಾರೆ.

ಪ್ರೊ ಕಬಡ್ಡಿ: ತಮಿಳು ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಭರ್ಜರಿ ಗೆಲುವುಪ್ರೊ ಕಬಡ್ಡಿ: ತಮಿಳು ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಭರ್ಜರಿ ಗೆಲುವು

ಹೌದು, ಕೋಲ್ಕತ್ತಾ ನೈಟ್ ರೈಡರ್ಸ್ ಆಂಡ್ರೆ ರಸೆಲ್, ಸುನಿಲ್ ನರೇನ್, ವೆಂಕಟೇಶ್ ಅಯ್ಯರ್ ಮತ್ತು ವರುಣ್ ಚಕ್ರವರ್ತಿ ಈ 4 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ತಂಡದ ಪ್ರಮುಖ ಆಟಗಾರ ಶುಬ್ ಮನ್ ಗಿಲ್ ಅವರನ್ನು ಕೈಬಿಟ್ಟಿದೆ. 2018ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಶುಬ್ ಮನ್ ಗಿಲ್ ಆಗಿನಿಂದಲೂ ಕೂಡ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ಪರ ಮಾತ್ರ ಆಡಿದ್ದಾರೆ. ಹೀಗೆ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಿಟೈನ್ ಆಗದ ಶುಬ್ ಮನ್ ಗಿಲ್ ಇದೀಗ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಕುರಿತು ಮಾತನಾಡಿದ್ದು, ತಾನು ಯಾವ ತಂಡದ ಪರ ಆಡಲು ಬಯಸುತ್ತೇನೆ ಎಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ..

ಈ ತಂಡದ ಪರ ಶಾಶ್ವತವಾಗಿ ಐಪಿಎಲ್ ಆಡುವ ಆಸೆ ಎಂದ ಶುಬ್ಮನ್ ಗಿಲ್

ಈ ತಂಡದ ಪರ ಶಾಶ್ವತವಾಗಿ ಐಪಿಎಲ್ ಆಡುವ ಆಸೆ ಎಂದ ಶುಬ್ಮನ್ ಗಿಲ್

ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರವೇ ಕಣಕ್ಕಿಳಿಯಲು ಶುಬ್ ಮನ್ ಗಿಲ್ ಅಸೆ ವ್ಯಕ್ತಪಡಿಸಿದ್ದಾರೆ. "ಕೋಲ್ಕತಾ ನೈಟ್ ರೈಡರ್ಸ್ ತಂಡದ ಜೊತೆ ನಾನು ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಇಂತಹ ಫ್ರಾಂಚೈಸಿ ಜೊತೆ ಒಮ್ಮೆ ಕೆಲಸ ನಿರ್ವಹಿಸಿದರೆ ಶಾಶ್ವತವಾಗಿ ಅದೇ ತಂಡದ ಪರ ಕಣಕ್ಕಿಳಿಯಲು ಯಾರಾದರೂ ಇಚ್ಛೆ ಪಡುವುದು ಸಹಜ. ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ನನಗೆ ಮತ್ತೆ ಆಡಲು ಅವಕಾಶ ಸಿಕ್ಕರೆ ನನ್ನ ಕ್ರಿಕೆಟ್ ಜೀವನದ ಪೂರ್ತಿ ಅದೇ ತಂಡದ ಪರ ಐಪಿಎಲ್ ಆಡುತ್ತೇನೆ" ಎಂದು ಶುಬ್ ಮನ್ ಗಿಲ್ ಹೇಳಿದ್ದಾರೆ.

ಐಪಿಎಲ್ ಮೆಗಾ ಹರಾಜು ಯಾವಾಗ?

ಐಪಿಎಲ್ ಮೆಗಾ ಹರಾಜು ಯಾವಾಗ?

ಬಿಸಿಸಿಐ ಕಳೆದ ಗುರುವಾರ ಎಲ್ಲಾ ಫ್ರಾಂಚೈಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದ್ದು ಮೆಗಾ ಹರಾಜಿಗೆ ಸ್ಥಳ ಹಾಗೂ ದಿನಾಂಕವನ್ನು ನಿಗದಿಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಮುಂದಿನ ವರ್ಷದ ಫೆಬ್ರವರಿ 12 ಮತ್ತು 13ರಂದು ಬೆಂಗಳೂರು ನಗರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗುತ್ತಿದೆ. ಹೀಗಾಗಿ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಮಾಲೀಕರಿಗೂ ಫೆಬ್ರವರಿ 11ರಂದೇ ಬೆಂಗಳೂರಿಗೆ ಬರಬೇಕೆಂದು ಸೂಚನೆ ನೀಡಿದೆ.

ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ 1000 ಆಟಗಾರರು

ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ 1000 ಆಟಗಾರರು

ಇನ್ನು ಮೆಗಾ ಹರಾಜು ಪ್ರಕ್ರಿಯೆ ದಿನಾಂಕ ಮತ್ತು ಸ್ಥಳವನ್ನು ನಿಗದಿ ಪಡಿಸಿರುವ ಬಿಸಿಸಿಐ ಇತರೆ ಕ್ರಿಕೆಟ್ ಮಂಡಳಿಗಳ ಜೊತೆ ಸಂಪರ್ಕವನ್ನು ಮಾಡಿದ್ದು ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಇಚ್ಛಿಸುವ ಆಟಗಾರರ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಿದೆ. ಹೀಗಾಗಿ ಬಿಸಿಸಿಐ ಪ್ರಕಾರ ಸುಮಾರು 1000ಕ್ಕೂ ಹೆಚ್ಚು ಆಟಗಾರರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸುವ ನಿರೀಕ್ಷೆಯಿದ್ದು, ಇದರಲ್ಲಿ ಕೇವಲ 250 ಆಟಗಾರರು ಮಾತ್ರ ಹರಾಜಾಗಲಿದ್ದಾರೆ.

Story first published: Saturday, December 25, 2021, 11:41 [IST]
Other articles published on Dec 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X