ಲಾರ್ಡ್ಸ್ ಪಂದ್ಯಕ್ಕೆ ಸಜ್ಜಾಗಿದ್ದ ತನ್ನನ್ನು ತಂಡದಿಂದ ಹೊರಹಾಕಿದ್ದರ ಹಿಂದಿನ ಸತ್ಯ ಬಿಚ್ಚಿಟ್ಟ ಅಶ್ವಿನ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಮುಗಿದಿದ್ದು ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಪಂದ್ಯ ಮಳೆಯ ಕಾರಣದಿಂದ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು. ಇನ್ನು ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 151 ರನ್‌ಗಳ ರೋಚಕ ಜಯವನ್ನು ಸಾಧಿಸಿತು.

ಕೊಹ್ಲಿಯದ್ದು ಹೊಲಸುಬಾಯಿ; ಆತ ರೂಟ್, ವಿಲಿಯಮ್ಸನ್ ಮತ್ತು ಸಚಿನ್ ರೀತಿ ಉತ್ತಮನಲ್ಲ ಎಂದ ಮಾಜಿ ಕ್ರಿಕೆಟಿಗ!ಕೊಹ್ಲಿಯದ್ದು ಹೊಲಸುಬಾಯಿ; ಆತ ರೂಟ್, ವಿಲಿಯಮ್ಸನ್ ಮತ್ತು ಸಚಿನ್ ರೀತಿ ಉತ್ತಮನಲ್ಲ ಎಂದ ಮಾಜಿ ಕ್ರಿಕೆಟಿಗ!

ಟೀಮ್ ಇಂಡಿಯಾವೇನೋ 2 ಟೆಸ್ಟ್ ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿ ಯಶಸ್ಸಿನ ಹಾದಿಯಲ್ಲಿದೆ. ಆದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ವಿಶ್ವ ಟೆಸ್ಟ್ ಕ್ರಿಕೆಟ್‌ನ ಅತ್ಯುತ್ತಮ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್‌ಗೆ ಮಾತ್ರ ಅವಕಾಶವನ್ನು ನೀಡಲೇ ಇಲ್ಲ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್‌ಗೆ ತಂಡದಲ್ಲಿ ಸ್ಥಾನ ನೀಡದೇ ಇರುವ ವಿಷಯ ತಿಳಿದ ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ನಂತರ ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಸಹ ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಅವಕಾಶವನ್ನು ನೀಡಲೇ ಇಲ್ಲ. ಸತತವಾಗಿ ಎರಡೂ ಪಂದ್ಯಗಳಲ್ಲಿಯೂ ರವಿಚಂದ್ರನ್ ಅಶ್ವಿನ್‌ಗೆ ತಂಡದಲ್ಲಿ ಸ್ಥಾನ ನೀಡದೇ ಇದ್ದ ಕಾರಣಕ್ಕೆ ಸಾಮಾಜಿಕ ಜಾಲತಾಣದ ತುಂಬಾ ಭಾರಿ ಚರ್ಚೆಗಳು ನಡೆದಿದ್ದವು ಮತ್ತು ಟೀಮ್ ಇಂಡಿಯಾ ವಿರುದ್ಧ ಟೀಕೆಗಳು ಎದುರಾಗಿದ್ದವು.

ಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರ

ಹೀಗೆ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಕೊಡದೇ ಇರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡತೊಡಗಿದವು. ಇನ್ನು ಇದೀಗ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದಲ್ಲಿ ತಮಗೆ ಸ್ಥಾನ ದೊರಕದೇ ಇರುವುದಕ್ಕೆ ಅಸಲಿ ಕಾರಣವೇನೆಂಬುದನ್ನು ಬಿಚ್ಚಿಡುವುದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಹಲವಾರು ಊಹಾಪೋಹಗಳಿಗೆ ಪೂರ್ವ ವಿರಾಮ ಇಟ್ಟಿದ್ದಾರೆ.

ಕೊಹ್ಲಿಯದ್ದು ಹೊಲಸು ಬಾಯಿ ಎಂದ ಇಂಗ್ಲೆಂಡ್ ಕ್ರಿಕೆಟಿಗನಿಗೆ ಸರಿಯಾದ ಪಾಠ ಕಲಿಸಿದ ಪಾಕಿಸ್ತಾನದ ಕನೇರಿಯಾಕೊಹ್ಲಿಯದ್ದು ಹೊಲಸು ಬಾಯಿ ಎಂದ ಇಂಗ್ಲೆಂಡ್ ಕ್ರಿಕೆಟಿಗನಿಗೆ ಸರಿಯಾದ ಪಾಠ ಕಲಿಸಿದ ಪಾಕಿಸ್ತಾನದ ಕನೇರಿಯಾ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ತಮಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡದೆ ಇರಲು ಅಸಲಿ ಕಾರಣವೇನು ಎಂಬುದನ್ನು ರವಿಚಂದ್ರನ್ ಅಶ್ವಿನ್ ಈ ಕೆಳಕಂಡಂತೆ ತಿಳಿಸಿದ್ದಾರೆ..

ಲಾರ್ಡ್ಸ್ ಪಂದ್ಯವಾಡಲು ಸಿದ್ಧರಾಗಿದ್ದ ಅಶ್ವಿನ್!

ಲಾರ್ಡ್ಸ್ ಪಂದ್ಯವಾಡಲು ಸಿದ್ಧರಾಗಿದ್ದ ಅಶ್ವಿನ್!

ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 151 ರನ್‌ಗಳ ಜಯವನ್ನು ಸಾಧಿಸಿತು. ಆದರೆ ಈ ಪಂದ್ಯದಲ್ಲಿಯೂ ಮೊದಲನೇ ಪಂದ್ಯದ ರೀತಿಯಲ್ಲಿಯೇ ರವಿಚಂದ್ರನ್ ಅಶ್ವಿನ್‌ಗೆ ತಂಡದ ಆಡುವ ಬಳಗದಲ್ಲಿ ಅವಕಾಶವನ್ನು ನೀಡಿರಲಿಲ್ಲ. ಈ ಕುರಿತು ಮಾತನಾಡಿರುವ ರವಿಚಂದ್ರನ್ ಅಶ್ವಿನ್ 'ಪಂದ್ಯ ಆರಂಭಕ್ಕೂ ಮುನ್ನವೇ ಯಾವುದೇ ಮಳೆಯ ಮುನ್ಸೂಚನೆ ಇರಲಿಲ್ಲ, ಸ್ಪಷ್ಟವಾದ ಆಕಾಶ ಮತ್ತು ಒಣ ಪಿಚ್ ಇದ್ದದ್ದು ನೋಡಿ ಲಾರ್ಡ್ಸ್ ಪಂದ್ಯದಲ್ಲಿ ನನ್ನನ್ನು ಕಣಕ್ಕಿಳಿಯಲು ಸಿದ್ಧನಾಗು ಎಂದು ಹೇಳಿದ್ದರು. ಆದರೆ ಪಂದ್ಯ ಆರಂಭಕ್ಕೆ ಇನ್ನೇನು ಕೆಲ ಕ್ಷಣಗಳಿರುವಾಗ ಮೋಡ ಆವರಿಸಿತು, ಹೀಗಾಗಿ ಈ ಹಿಂದೆ ಇದ್ದ ತಂಡವನ್ನೇ ಎರಡನೇ ಪಂದ್ಯದಲ್ಲಿಯೂ ಮುಂದುವರೆಸಲಾಯಿತು ಮತ್ತು ತಂಡದಿಂದ ನಾನು ಹೊರಗೆ ಉಳಿಯುವುದು ಅನಿವಾರ್ಯವಾಯಿತು' ಎಂದು ರವಿಚಂದ್ರನ್ ಅಶ್ವಿನ್ ತಮಗೆ ತಂಡದಲ್ಲಿ ಸ್ಥಾನ ಸಿಗದಿರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಈತನ ಎಂಟ್ರಿಯಿಂದ ಪವರ್ಫುಲ್ ಆಗಲಿದೆ ಟೀಮ್ ಇಂಡಿಯಾ ಬ್ಯಾಟಿಂಗ್ | Oneindia Kannada
ಅಶ್ವಿನ್‌ಗೆ ಆಡುವ ಅವಕಾಶವನ್ನು ತಪ್ಪಿಸಿದ್ದು ವರುಣ!

ಅಶ್ವಿನ್‌ಗೆ ಆಡುವ ಅವಕಾಶವನ್ನು ತಪ್ಪಿಸಿದ್ದು ವರುಣ!

ಅಶ್ವಿನ್ ಹೇಳಿದಂತೆ ಲಾರ್ಡ್ಸ್ ಟೆಸ್ಟ್ ಆರಂಭಕ್ಕೂ ಮುನ್ನ ವಾತಾವರಣದಲ್ಲಿ ಯಾವುದೇ ರೀತಿಯ ಮಳೆ ಬರುವಂತಹ ಮುನ್ಸೂಚನೆ ಇರಲಿಲ್ಲ. ಹೀಗಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರೂ ಸ್ಪಿನ್ ಬೌಲರ್‌ಗಳಿಗೆ ಅವಕಾಶವನ್ನು ನೀಡುವ ಯೋಚನೆಯಲ್ಲಿತ್ತು ಟೀಮ್ ಇಂಡಿಯಾ. ಹೀಗಾಗಿಯೇ ಪಂದ್ಯ ಆರಂಭಕ್ಕೂ ಮುಂಚಿತವಾಗಿ ರವಿಚಂದ್ರನ್ ಅಶ್ವಿನ್‌ಗೆ ಪಂದ್ಯವನ್ನಾಡಲು ಸಿದ್ಧನಿರು ಎಂದು ಸೂಚನೆಯನ್ನೂ ಕೂಡ ನೀಡಲಾಗಿತ್ತು. ಇನ್ನೇನು ರವಿಚಂದ್ರನ್ ಅಶ್ವಿನ್ ಲಾರ್ಡ್ಸ್ ಪಂದ್ಯವನ್ನು ಆಡಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಬೇಕು ಎನ್ನುವಷ್ಟರಲ್ಲಿ ವರುಣರಾಯನ ಆಗಮನದ ಸುಳಿವು ಮೋಡ ಕವಿದ ವಾತಾವರಣದ ಮೂಲಕ ಸಿಕ್ಕಿತ್ತು. ಹೀಗಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿಯೂ ಸಹ ಕೇವಲ ಓರ್ವ ಸ್ಪಿನ್ ಬೌಲರ್‌ನ್ನು ಕಣಕ್ಕಿಳಿಸಬೇಕಾಗಿ ಬಂತು. ಹೀಗೆ ವರುಣ ಲಾರ್ಡ್ಸ್ ಅಂಗಳದಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದುಕೊಳ್ಳುವುದನ್ನು ತಪ್ಪಿಸಿದ್ದ.

ಮುಂದಿನ ಪಂದ್ಯದಲ್ಲಿ ಅಶ್ವಿನ್‌ಗೆ ಅವಕಾಶ ಕೊಡಿ ಎಂಬ ಕೂಗು

ಮುಂದಿನ ಪಂದ್ಯದಲ್ಲಿ ಅಶ್ವಿನ್‌ಗೆ ಅವಕಾಶ ಕೊಡಿ ಎಂಬ ಕೂಗು

ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಹವಾಮಾನದ ಕಾರಣವನ್ನು ಮುಂದಿಟ್ಟುಕೊಂಡು ಅವಕಾಶವನ್ನು ನೀಡದೇ ಇದ್ದದ್ದು ಅಷ್ಟೇನೂ ಸರಿಯಲ್ಲ ಎಂದು ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸ್ಪಿನ್ ಬೌಲರ್‌ಗಳ ಅಗತ್ಯತೆ ಇಲ್ಲ ಎಂಬ ಕಾರಣಕ್ಕೆ ರವಿಚಂದ್ರನ್ ಅಶ್ವಿನ್‌ರನ್ನು ತಂಡದಿಂದ ಹೊರಗಿಡಲಾಯಿತು ಆದರೆ ಮೊಯಿನ್ ಅಲಿ ಕೂಡ ಓರ್ವ ಸ್ಪಿನ್ ಬೌಲರ್, ಅವರು ಸಹ ಅದೇ ವಾತಾವರಣದಲ್ಲಿ ಮತ್ತು ಅದೇ ಪಿಚ್‌ನಲ್ಲಿ ಸ್ಪಿನ್ ಬೌಲಿಂಗ್ ಮಾಡಿ ಪ್ರಮುಖ ವಿಕೆಟ್‍ಗಳನ್ನು ಪಡೆದು ಮಿಂಚಿದರು. ಹೀಗಿದ್ದ ಮೇಲೆ ರವಿಚಂದ್ರನ್ ಅಶ್ವಿನ್‌ಗೆ ಮಾತ್ರ ಏಕೆ ಸ್ಪಿನ್ ಬೌಲರ್ ಎಂಬ ಕಾರಣಕ್ಕೆ ಹವಾಮಾನ ಕಾರಣವನ್ನು ನೀಡಿ ತಂಡದಿಂದ ಹೊರಗಿಡುತ್ತಿದ್ದೀರಿ, ಮುಂದಿನ ಪಂದ್ಯದಲ್ಲಾದರೂ ರವಿಚಂದ್ರನ್ ಅಶ್ವಿನ್‌ಗೆ ತಂಡದಲ್ಲಿ ಸ್ಥಾನ ನೀಡಲೇಬೇಕು ಎಂಬ ಕೂಗು ಕೇಳಿಬರುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Friday, August 20, 2021, 17:49 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X