ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೊಸ ಜವಾಬ್ದಾರಿ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ರಾಹುಲ್

KL Rahul enjoying responsibility of Wicket Keeper role for India | Oneindia Kannada
India vs New Zealand: KL Rahul Speaks Out On Wicket-Keeping Role

ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್‌ಗೆ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ. ಧೋನಿ ಕ್ರಿಕೆಟ್‌ ನಿಂದ ದೂರವಾದ ಬಳಿಕ ಟೀಮ್ ಇಂಡಿಯಾ ವಿಕೆಟ್‌ ಕೀಪಿಂಗ್ ವಿಚಾರದಲ್ಲಿ ಸಾಕಷ್ಟು ತಲೆ ಕೆಡಿಸಿಕೊಳ್ಳುವಂತಾಗಿದೆ. ರಿಷಬ್ ಪಂತ್‌ಗೆ ಎಷ್ಟು ಅವಕಾಶ ನೀಡಿದರೂ ಪದೇ ಪದೇ ವಿಫಲರಾಗಿದ್ದಾರೆ.

ಸಾಕಷ್ಟು ಅವಕಾಶಗಳು ದೊರೆತ ನಂತರವೂ ರಿಷಬ್ ಪಂತ್‌ ಟೀಮ್ ಇಂಡಿಯಾದಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಸಂದರ್ಬದಲ್ಲಿ ರಿಷಬ್ ಪಂತ್ ಗಾಯಗೊಂಡು ಹೊರಬಿದ್ದ ಕಾರಣ ಅನಿವಾರ್ಯವಾಗಿ ಕೆಎಲ್ ರಾಹುಲ್ ಗ್ಲೌಸ್ ತೊಡಬೇಕಾದ ಪರಿಸ್ಥಿತ ಬಂದಿತ್ತು.

ಸಿಕ್ಕ ಅವಕಾಶವನ್ನು ಕೆಎಲ್ ರಾಹುಲ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಭರವಸೆಯನ್ನು ರಾಹುಲ್ ಉಳಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ನೀಡುತ್ತಿರುವ ಪ್ರದರ್ಶನ ತಂಡದ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತಿದೆ. ಈ ವಿಚಾರವಾಗಿ ಮೊದಲ ಬಾರಿಗೆ ಕೆ.ಎಲ್ ರಾಹುಲ್ ಹೇಳಿಕೆ ನೀಡಿದ್ದಾರೆ.

ಮೊದಲ ಬಾರಿಗೆ ತುಟಿ ಬಿಚ್ಚಿದ ರಾಹುಲ್:

ಮೊದಲ ಬಾರಿಗೆ ತುಟಿ ಬಿಚ್ಚಿದ ರಾಹುಲ್:

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಕ ಹೊಸ ಜವಾಬ್ಧಾರಿಯ ಬಗ್ಗೆ ರಾಹುಲ್ ಮಾತನಾಡಿದ್ದಾರೆ. ತನಗೆ ಸಿಕ್ಕ ಹೊಸಾ ಜವಾಬ್ಧಾರಿಯನ್ನು ನಾನು ಆನಂದಿಸುತ್ತಿದ್ದೇನೆ. ವಿಕೆಟ್‌ನ ಹಿಂದೆ ನಿಂತು ಆಟವನ್ನು ಸೂಕ್ಷ್ಮವಾಗಿ ಗಮನಿಸಬಹುದು. ಪಿಚ್‌ನ ವರ್ತನೆಯನ್ನೂ ಹತ್ತರದಿಂದ ಗಮನಿಸಿ ನಾಯಕನಿಗೆ ಹಾಗೂ ಬೌಲರ್‌ಗೆ ಮಾಹಿತಿ ನೀಡಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

ದ್ರಾವಿಡ್ ನೆನಪಿಸಿದ ಕೆಎಲ್

ದ್ರಾವಿಡ್ ನೆನಪಿಸಿದ ಕೆಎಲ್

ಕೆಎಲ್ ರಾಹುಲ್ ಟೀಮ್ ಇಂಡಿಯಾ ಮಾಜಿ ಲೆಜೆಂಡರಿ ಆಟಗಾರ ರಾಹುಲ್ ದ್ರಾವಿಡ್ ಅವರನ್ನು ನೆನಪಿಸಿದ್ದಾರೆ. ಅದಕ್ಕೆ ಕಾರಣ ರಾಹುಲ್‌ಗೆ ನೀಡುತ್ತಿರುವ ಜವಾಬ್ದಾರಿ ಮತ್ತು ಅದನ್ನು ಕೆಎಲ್ ನಿರ್ವಹಿಸುತ್ತಿರುವ ರೀತಿ. ರಾಹುಲ್ ದ್ರಾವಿಡ್ ಆವರ ರೀತಿಯಲ್ಲೇ ಕೆಎಲ್ ತಂಡದ ಯಾವ ಕ್ರಮಾಂಕದಲ್ಲಿ ಆಡಲು ಸೂಚಿಸಿದರೂ ಆ ಕ್ರಮಾಂಕದಲ್ಲಿ ಆಡಿ ಮಿಂಚಿದ್ದಾರೆ. ಜೊತೆಗೆ ವಿಕೆಟ್ ಕೀಪಿಂಗ್‌ಗೂ ಸೈ ಎನಿಸಿದ್ದಾರೆ.

ರಾಹುಲ್‌ಗೆ ವಿಕೆಟ್‌ ಕೀಪಿಂಗ್ ಹೊಸದಲ್ಲ:

ರಾಹುಲ್‌ಗೆ ವಿಕೆಟ್‌ ಕೀಪಿಂಗ್ ಹೊಸದಲ್ಲ:

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ವಿಕೆಟ್‌ ಕೀಪಿಂಗ್ ಹೊಸ ಜವಾಬ್ದಾರಿಯಾಗಿರಬಹುದು. ಆದರೆ ದೇಸಿ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ರಾಹುಲ್ ಹಲವು ವರ್ಷಗಳಿಂದ ವಿಕೆಟ್‌ ಕೀಪಿಂಗ್ ಮಾಡಿಕೊಂಡು ಬಂದಿದ್ದಾರೆ. ಕರ್ನಾಟಕ ರಣಜಿ ತಂಡದ ಕೀಪರ್ ಆಗಿಯೂ ರಾಹುಲ್ ಮಿಂಚಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲವೆನ್ ಪಂಜಾಬ್ ತಂಡದಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಸತತವಾಗಿ ಮಿಂಚುತ್ತಿದ್ದಾರೆ ರಾಹುಲ್:

ಸತತವಾಗಿ ಮಿಂಚುತ್ತಿದ್ದಾರೆ ರಾಹುಲ್:

ಸತತವಾಗಿ ಎಲ್ಲಾ ಪಂದ್ಯಗಳಲ್ಲೂ ರಾಹುಲ್ ಸತತವಾಗಿ ಮಿಂಚುತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ಆಸ್ಟ್ರೇಲಿಯಾ, ಶ್ರೀಲಂಕಾ ಜೊತೆಗೆ ಸದ್ಯಕ್ಕೆ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದ ಗೆಲುವಿನಲ್ಲೂ ಕೆ.ಎಲ್ ಪಾತ್ರ ಬಹುಮುಖ್ಯವಾಗಿದೆ.

Story first published: Saturday, January 25, 2020, 12:43 [IST]
Other articles published on Jan 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X