ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟಿ20: ರೋಹಿತ್ ಶತಕ, 71 ರನ್ ಜಯದೊಂದಿಗೆ ಸರಣಿ ಭಾರತದ ಮಡಿಲಿಗೆ

India vs Windies, 2nd T20I - Live Cricket Score

ಲಕ್ನೋ, ನವೆಂಬರ್ 6: ಲಕ್ನೋವಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಮಂಗಳವಾರ (ನವೆಂಬರ್ 6) ನಡೆದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 71 ರನ್ ಭರ್ಜರಿ ಜಯಗಳಿಸಿದೆ. ರೋಹಿತ್ ಶರ್ಮಾ ಅವರ ಅಮೋಘ ಶತಕದ ನೆರವಿನಿಂದ ಭಾರತ 2-0ಯಿಂದ ಸರಣಿ ವಶವಾಗಿಸಿಕೊಂಡಿದೆ. ಇಲ್ಲಿಗೆ ಟೀಮ್ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ20 ಮೂರೂ ಸರಣಿ ಜಯಿಸಿದಂತಾಗಿದೆ.

ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44272

ನಾಯಕ ರೋಹಿತ್ ಶರ್ಮಾ 111 ರನ್ ಪೇರಿಸುವುದರೊಂದಿಗೆ ಟಿ20 ಕ್ರಿಕೆಟ್ ನಲ್ಲಿ ನಾಲ್ಕನೇ ಶತಕ ಪೂರೈಸಿದರು. ರೋಹಿತ್, ಧವನ್ ಬ್ಯಾಟಿಂಗ್ ಬೆಂಬಲದೊಂದಿಗೆ ಭಾರತ 20 ಓವರ್ ಗೆ 2 ವಿಕೆಟ್ 195 ರನ್ ಪೇರಿಸಿ ಎದುರಾಳಿಗೆ 196 ರನ್ ಗುರಿ ನೀಡಿತ್ತು. ಆದರೆ ವಿಂಡೀಸ್ 124 ರನ್ ಗಳಿಸಿ ಶರಣಾಯಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತಕ್ಕೆ ರೋಹಿತ್-ಶಿಖರ್ ಧವನ್ ಜೊತೆಯಾಟದ ಉತ್ತಮ ಬೆಂಬಲ ದೊರೆಯಿತು. ಧವನ್ 43 ರನ್ ಬಾರಿಸಿ ಫ್ಯಾಬಿಯನ್ ಅಲೆನ್ ಗೆ ವಿಕೆಟ್ ಒಪ್ಪಿಸಿದರು. ಅನಂತರ ಬಂದ ರಿಷಬ್ ಪಂತ್ (5) ಕೂಡ ರನ್ ಕದಿಯಲು ಯತ್ನಿಸಿ ಔಟಾದರು.

ಕ್ರೀಸಿಗಂಟಿ ನಿಂತಿದ್ದ ರೋಹಿತ್‌ಗೆ ಕೆಎಲ್ ರಾಹುಲ್ ಸಾಥ್ ನೀಡಿದ್ದು ತಂಡದ ಮೊತ್ತ ಹೆಚ್ಚುವಲ್ಲಿ ಗಣನೀಯ ಪರಿಣಾಮ ಬೀರಿತು. ಅನಂತರ ರನ್ ಸುರಿಮಳೆಯೇ ತಂಡದ ಖಾತೆಗೆ ಲಭಿಸಿತು. ರೋಹಿತ್, 8 ಬೌಂಡರಿ, 7 ಸಿಕ್ಸರ್ ಸೇರಿ ಅಜೇಯ 111 ರನ್ ಗಳಿಸಿದರೆ, ರಾಹುಲ್ 2 ಬೌಂಡರಿ, 1 ಸಿಕ್ಸ್‌ನೊಂದಿಗೆ 26 ರನ್ ಕೊಡುಗೆ ನೀಡಿದರು.

ಹಿಟ್ ಮ್ಯಾನ್ ರೋಹಿತ್ ಬಳಗ ನೀಡಿದ್ದ 196 ರನ್ ಗುರಿ ತಲುಪಲು ವಿಂಡೀಸ್ ಗೆ ಅಂಥ ಬ್ಯಾಟಿಂಗ್ ಬೆಂಬಲ ದೊರೆಯಲಿಲ್ಲ. ಇತ್ತ ಭಾರತದ ಬೌಲರ್ ಗಳು ಕೂಡ ಮಾರಕ ದಾಳಿ ನಡೆಸಿದರು. ಹೀಗಾಗಿ ವೆಸ್ಟ್ ಇಂಡೀಸ್ 20 ಓವರ್‌ಗೆ 9 ವಿಕೆಟ್ ಕಳೆದು 124 ರನ್ ಪೇರಿಸುವ ಮೂಲಕ ಸರಣಿ ಸೋಲೊಪ್ಪಿಕೊಂಡಿತು. ಮೂರು ಪಂದ್ಯಗಳ ಈ ಸರಣಿಯಲ್ಲಿ ಇನ್ನೊಂದು ಪಂದ್ಯ ಔಪಚಾರಿಕವಾಗಿದೆ.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ಲೋಕೇಶ್ ರಾಹುಲ್, ರಿಶಬ್ ಪಂತ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ (ವಿಕೆ), ಕ್ರುಣಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಜಾಸ್‌ಪ್ರೀತ್ ಬೂಮ್ರಾ, ಕೆ ಖಲೀಲ್ ಅಹ್ಮದ್.

ವಿಂಡೀಸ್ ತಂಡ: ಶೈ ಹೋಪ್, ದನೇಶ್ ರಾಮ್ಡಿನ್ (W), ಶಿಮ್ರೋನ್ ಹೆಟ್ಮರ್, ಕೀರನ್ ಪೊಲಾರ್ಡ್, ಡ್ಯಾರೆನ್ ಬ್ರಾವೋ, ನಿಕೋಲಸ್ ಪೂರ್ನ್, ಕಾರ್ಲೋಸ್ ಬ್ರಾಥ್ವೈಟ್ (ಸಿ), ಫ್ಯಾಬಿಯನ್ ಅಲೆನ್, ಕೀಮೊ ಪಾಲ್, ಖೇರಿ ಪಿಯರೆ, ಒಶೇನ್ ಥಾಮಸ್.

Story first published: Tuesday, November 6, 2018, 22:36 [IST]
Other articles published on Nov 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X