ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!

IPL 2021: Mumbai Indians to face Chennai Super Kings on September 19

ನವದೆಹಲಿ: ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಏಪ್ರಿಲ್ 9ರಂದು ಚೆನ್ನೈನಲ್ಲಿ ಆರಂಭಗೊಂಡಿತ್ತು. ಆದರೆ ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚತೊಡಗಿದ್ದರಿಂದ ಜನಪ್ರಿಯ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಈಗ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಐಪಿಎಲ್ ಇನ್ನುಳಿದ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಭಾರತ vs ಪಾಕ್ ಟಿ20 ವಿಶ್ವಕಪ್‌ ಮುಖಾಮುಖಿಯ ಬಗ್ಗೆ ಗಂಭೀರ ಹೇಳಿಕೆ ನೀಡಿದ ಶೋಯೆಬ್ ಅಖ್ತರ್!ಭಾರತ vs ಪಾಕ್ ಟಿ20 ವಿಶ್ವಕಪ್‌ ಮುಖಾಮುಖಿಯ ಬಗ್ಗೆ ಗಂಭೀರ ಹೇಳಿಕೆ ನೀಡಿದ ಶೋಯೆಬ್ ಅಖ್ತರ್!

ಭಾರತದಲ್ಲಿ ನಡೆದಿದ್ದ ಮೊದಲ ಹಂತದ ಐಪಿಎಲ್‌ನಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು ಉಳಿದ 31 ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನಲ್ಲಿ ನಡೆಯಲಿವೆ. ಜುಲೈ 25ರ ಭಾನುವಾರ ಬಿಸಿಸಿಐ ಐಪಿಎಲ್ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ (ಸಂಪೂರ್ಣ ವೇಳಾಪಟ್ಟಿ ಕೆಳಗಿದೆ ನೋಡಿ).

ಐಪಿಎಲ್ ಯಾವಾಗ ಆರಂಭ?

ಐಪಿಎಲ್ ಯಾವಾಗ ಆರಂಭ?

ದ್ವಿತೀಯ ಹಂತದ ಐಪಿಎಲ್ ಪಂದ್ಯಗಳು ಯುಎಇಯಲ್ಲಿ ಸೆಪ್ಟೆಂಬರ್‌ 19ರಿಂದ ಆರಂಭಗೊಳ್ಳಲಿವೆ. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ.

ಡಬಲ್ ಹೆಡರ್ ಪಂದ್ಯಗಳೆಷ್ಟು?

ಡಬಲ್ ಹೆಡರ್ ಪಂದ್ಯಗಳೆಷ್ಟು?

ಐಪಿಎಲ್ ದ್ವಿತೀಯ ಹಂತದ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಮೊದಲ ಡಬಲ್ ಹೆಡ್ಡರ್ ಪಂದ್ಯ ಸೆಪ್ಟೆಂಬರ್‌ 25ರಂದು ನಡೆಯಲಿದೆ. ಕಳೆದ ಸೀಸನ್‌ನಂತೆ ಡಬಲ್ ಹೆಡ್ಡರ್ ವೇಳೆ ಮೊದಲ ಪಂದ್ಯ ಭಾರತೀಯ ಕಾಲಮಾನ 3:30 PMಕ್ಕೆ (14:00 ಯುಎಇ ಸಮಯ) ನಡೆದರೆ, ಎರಡನೇ ಪಂದ್ಯ 7:30 PMಗೆ (18:00) ಶುರುವಾಗಲಿದೆ.

ಡೆಲ್ಲಿಗೆ 3 ಮಧ್ಯಾಹ್ನದ ಪಂದ್ಯ

ಡೆಲ್ಲಿಗೆ 3 ಮಧ್ಯಾಹ್ನದ ಪಂದ್ಯ

ಡಬಲ್ ಹೆಡ್ಡರ್ ವೇಳೆ ಎಲ್ಲಾ ತಂಡಗಳಿಗೂ ಕನಿಷ್ಠ ಒಂದು ಪಂದ್ಯ ಮಧ್ಯಾಹ್ನ ಸಿಗಲಿದೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 3 ಮಧ್ಯಾಹ್ನದ ಪಂದ್ಯಗಳನ್ನಾಡಿದರೆ, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್‌ ಎರಡೆರಡು ಮಧ್ಯಾಹ್ನದ ಪಂದ್ಯಗಳನ್ನಾಡಲಿವೆ.

ಸಿಎಸ್‌ಕೆ-ಎಂಐ ಮುಖಾಮುಖಿ

ಸಿಎಸ್‌ಕೆ-ಎಂಐ ಮುಖಾಮುಖಿ

ಐಪಿಎಲ್ ದ್ವಿತೀಯ ಹಂತದಲ್ಲಿ ಮೊದಲ ಪಂದ್ಯವಾಗಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ಮುಖಾಮುಖಿಯಾಗಲಿವೆ. ಈವರೆಗೆ ಆಡಿರುವ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು 8 ಪಂದ್ಯಗಳನ್ನಾಡಿವೆ. ಉಳಿದ ಎಲ್ಲಾ ತಂಡಗಳೂ ತಲಾ 7 ಪಂದ್ಯಗಳನ್ನಾಡಿವೆ. ಸದ್ಯದ ಪಾಯಿಂಟ್ಸ್ ಟೇಬಲ್‌ನಲ್ಲಿ ಡೆಲ್ಲಿ ತಂಡ ಮೊದಲ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನಂತರದ ಸ್ಥಾನಗಳಲ್ಲಿವೆ.

Surya Kumar Yadav ಅವರ ಈ ನಡೆ Dravidಗೆ ಬೇಸರ ತರಿಸಿದೆ | Oneindia Kannada
IPL 2021: Mumbai Indians to face Chennai Super Kings on September 19

Story first published: Monday, July 26, 2021, 10:20 [IST]
Other articles published on Jul 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X