ಆರ್‌ಸಿಬಿ 'ಎ' vs ಆರ್‌ಸಿಬಿ 'ಬಿ' ಸೂಪರ್ ಓವರ್ ಪಂದ್ಯ: ವೈರಲ್ ವಿಡಿಯೋ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ಎಲ್ಲಾ ಎಂಟು ತಂಡಗಳು ಸಿದ್ಧವಾಗಿದೆ. ಸೆಪ್ಟೆಂಬರ್‌ 19ರಿಂದ ಐಪಿಎಲ್ 2021ರ ದ್ವಿತೀಯ ಹಂತದ ಪಂದ್ಯಗಳು ಶುರುವಾಗಲಿವೆ. ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಕೂಡ ದ್ವಿತೀಯ ಹಂತಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ಸೆಪ್ಟೆಂಬರ್‌ 20ರಂದು ಆರ್‌ಸಿಬಿಗೆ ಮೊದಲನೇ ಪಂದ್ಯ ನಡೆಯಲಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ 2 ಅಭ್ಯಾಸ ಪಂದ್ಯ: ದೊಡ್ಡ ತಂಡಗಳಿಂದ ಸವಾಲು!ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ 2 ಅಭ್ಯಾಸ ಪಂದ್ಯ: ದೊಡ್ಡ ತಂಡಗಳಿಂದ ಸವಾಲು!

ಐಪಿಎಲ್ ಆರಂಭಕ್ಕೆ ಮುನ್ನಾದಿನ ಅಂದರೆ ಸೆಪ್ಟೆಂಬರ್‌ 18ರಂದು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಓವರ್ ಪಂದ್ಯ ಆಡಿದೆ. ಅಂದರೆ ಸೂಪರ್ ಓವರ್‌ ನಡೆಯುವಾಗಿನ ಝಲಕ್ ಅನ್ನು ಅಭ್ಯಾಸದ ಮೂಲಕ ಆರ್‌ಸಿಬಿ ನೀಡಿದೆ. ಈ ಸೂಪರ್ ಓವರ್ ಪಂದ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆರ್‌ಸಿಬಿ 'ಎ' vs ಆರ್‌ಸಿಬಿ 'ಬಿ' ಮಧ್ಯೆ ಸೂಪರ್ ಓವರ್ ಪಂದ್ಯ

ಆರ್‌ಸಿಬಿ 'ಎ' vs ಆರ್‌ಸಿಬಿ 'ಬಿ' ಮಧ್ಯೆ ಸೂಪರ್ ಓವರ್ ಪಂದ್ಯ

ಆರ್‌ಸಿಬಿ 'ಎ' ಮತ್ತು ಆರ್‌ಸಿಬಿ 'ಬಿ' ಮಧ್ಯೆ ಸೆಪ್ಟೆಂಬರ್‌ 18ರ ಶನಿವಾರ ಸೂಪರ್ ಓವರ್‌ ಪಂದ್ಯ ನಡೆದಿದೆ. ಶಹಬಾಝ್ ಅಹ್ಮದ್ ಆರ್‌ಸಿಬಿ 'ಎ' ತಂಡದ ನಾಯಕತ್ವ ವಹಿಸಿಕೊಂಡಿದ್ದರೆ, ಆಕಾಶ್ ದೀಪ್ ಆರ್‌ಸಿಬಿ 'ಬಿ' ತಂಡದ ನಾಯಕತ್ವ ವಹಿಸಿಕೊಂಡಿದ್ದರು. ತಂಡದ ಎಂದಿನ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರಮುಖ ಬ್ಯಾಟ್ಸ್‌ಮನ್‌, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಈ ಸೂಪರ್ ಓವರ್ ಅಭ್ಯಾಸ ಪಂದ್ಯದಲ್ಲಿ ಆಡಿರಲಿಲ್ಲ. ಯಾಕೆ ಆಡಿಲ್ಲ ಅನ್ನೋದಕ್ಕೆ ಸ್ಪಷ್ಟ ಕಾರಣ ಲಭಿಸಿಲ್ಲ. ಆದರೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್ ಮ್ಯಾಕ್ಸ್‌ವೆಲ್ ಆಡಿದ್ದು ಕಾಣಿಸಿತ್ತು. ಇನ್ನು ಶ್ರೀಲಂಕಾದ ಹೊಸ ಸೇರ್ಪಡೆಗಳಾದ ವನಿಂದು ಹಸರಂಗ ಮತ್ತು ದುಶ್ಮಂತ ಚಮೀರ ಕೂಡ ಅಭ್ಯಾಸ ಪಂದ್ಯದಲ್ಲಿ ಕಾಣ ಸಿಕ್ಕಿಲ್ಲ. ಬಹುಶಃ ಇಬ್ಬರೂ ಕ್ವಾರಂಟೈನ್‌ನಲ್ಲಿ ಇರಬಹುದು ಎನ್ನಲಾಗಿದೆ.

ಸೂಪರ್ ಓವರ್‌ ಪಂದ್ಯದ ಚಿತ್ರಣ, ಸ್ಕೋರ್‌ ಮಾಹಿತಿ

ಆರ್‌ಸಿಬಿ ಫ್ರಾಂಚೈಸಿ ಪ್ಲೇಬೋಲ್ಡ್ ಹೆಸರಿನಲ್ಲಿ ಐಪಿಎಲ್‌ ಬಗೆಗಿನ ಅಪ್‌ಡೇಟ್ಸ್‌ ನೀಡುತ್ತಿರುತ್ತದೆ. ಸೆಪ್ಟೆಂಬರ್‌ 19ರಂದು ಟ್ವಿಟರ್‌ನಲ್ಲಿ ವಿಡಿಯೋ ಹಾಕಿಕೊಂಡಿರುವ ಆರ್‌ಸಿಬಿ, ಆ ವಿಡಿಯೋದಲ್ಲಿ ಸೂಪರ್ ಓವರ್‌ ಪಂದ್ಯದ ಚಿತ್ರಣ ನೀಡಿದೆ. ವಿಡಿಯೋದ ಆರಂಭದಲ್ಲಿ ಬ್ಯಾಟಿಂಗ್‌ ಕೋಚ್ ಸಂಜಯ್ ಬಂಗಾರ್, ಸೂಪರ್ ಓವರ್‌ ಪಂದ್ಯಗಳು ಹೇಗಿರುತ್ತವೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಖ್ಯ ಕೋಚ್ ಮೈಕ್ ಹೆಸನ್ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ತಂಡವನ್ನು ಆರಿಸಿದ್ದಾರೆ. ಶಹಬಾಝ್ ಅಹ್ಮದ್ (ಬ್ಯಾಟ್ಸ್‌ಮನ್) ಅವರ ಆರ್‌ಸಿಬಿ 'ಎ' ಮತ್ತು ಆಕಾಶ್ ದೀಪ್ (ಬೌಲರ್) ಅವರ ಆರ್‌ಸಿಬಿ 'ಬಿ' ಮಧ್ಯೆ ಸೂಪರ್ ಓವರ್‌ ನಡೆಯಿತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 'ಎ' ತಂಡ, ಗ್ಲೆನ್ ಮ್ಯಾಕ್ಸ್‌ವೆಲ್ 2, ಶಹಬಾಝ್ ಅಹ್ಮದ್ 5, ಕೋನ ಶ್ರೀಕರ್ ಭರತ್ 3 ರನ್‌ನೊಂದಿಗೆ 6 ಎಸೆತಗಳಲ್ಲಿ 1 ವಿಕೆಟ್ ಕಳೆದು 12 ರನ್ ಕಲೆ ಹಾಕಿತ್ತು. ಇದರಲ್ಲಿ 1 ವೈಡ್, 1 ನೋ ಬಾಲ್ ಸೇರಿತ್ತು. ಆರ್‌ಸಿಬಿ 'ಎ' ನೀಡಿದ್ದ 13 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ 'ಎ', ರಜತ್ ಪಾಟಿದಾರ್ 1, ಸಚಿನ್ ಬೇಬಿ 10 ರನ್‌ನೊಂದಿಗೆ 6 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿತು. ಇದರಲ್ಲಿ 1 ವೈಡ್ ಕೂಡ ಸೇರಿತ್ತು. ಅಲ್ಲಿಗೆ ಪಂದ್ಯ 12 ರನ್‌ನಿಂದ ಟೈ ಎನಿಸಿತು.

ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿದೆ ಆರ್‌ಸಿಬಿ

ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿದೆ ಆರ್‌ಸಿಬಿ

ಐಪಿಎಲ್ 2021ರ ಸೀಸನ್‌ನಲ್ಲಿ ಆರಂಭಿಕ ಹಂತದಲ್ಲೂ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿತ್ತು. ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಇವೆ. ದ್ವಿತೀಯ ಹಂತದಲ್ಲಿ ಶ್ರೀಲಂಕಾ ಆಲ್ ರೌಂಡರ್ ವನಿಂದು ಹಸರಂಗ ಮತ್ತು ಬೌಲರ್ ದುಶ್ಮಂತ ಚಮೀರ ಆರ್‌ಸಿಬಿ ಸೇರಿಕೊಂಡಿರುವುದರಿಂದ ಆರ್‌ಸಿಬಿ ಪ್ರದರ್ಶನದ ಬಗ್ಗೆ ಇನ್ನೂ ನಿರೀಕ್ಷೆ ಹೆಚ್ಚಾಗಿದೆ. ಒಂದು ಬಾರಿಯೂ ಟ್ರೋಫಿ ಗೆಲ್ಲದ ತಂಡಗಳಾದ ಡೆಲ್ಲಿ, ಪಂಜಾಬ್ ಕಿಂಗ್ಸ್ ಜೊತೆಯಲ್ಲಿರುವ ಆರ್‌ಸಿಬಿ ಈ ಬಾರಿ ಟ್ರೋಫಿ ಗೆಲ್ಲಲು ಒಳ್ಳೆಯ ಅವಕಾಶವಿದೆ. ಸೆಪ್ಟೆಂಬರ್‌ 20ರಂದು ಆರ್‌ಸಿಬಿ ದ್ವಿತೀಯ ಹಂತದ ಮೊದಲ ಪಂದ್ಯವಾಗಿ ಆರ್‌ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ. ಈ ಪಂದ್ಯ ಅಬುಧಾಬಿಯಲ್ಲಿ ನಡೆಯಲಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Sunday, September 19, 2021, 13:47 [IST]
Other articles published on Sep 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X