ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೂತನ ಫ್ರಾಂಚೈಸಿಗಳಾದ ಲಕ್ನೋ, ಅಹ್ಮದಾಬಾದ್ ನಾಯಕರು ಇವರೇ; ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ

IPL 2022: Hardik Pandya likely to lead Ahmadabad team says Report

ಈ ವರ್ಷ ನಡೆಯಲಿರುವ ಹದಿನೈದನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ. ಹೌದು, ಈ ಬಾರಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿಗಾಗಿ 10 ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು 2 ನೂತನ ಫ್ರಾಂಚೈಸಿಗಳು ಸೇರ್ಪಡೆಗೊಳ್ಳುತ್ತಿವೆ.

ಕಳೆದ ವರ್ಷ ನಡೆದ ನೂತನ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆಯಲ್ಲಿ ಲಕ್ನೋ ಮತ್ತು ಅಹಮದಾಬಾದ್ ನಗರಗಳು ನೂತನ ಫ್ರಾಂಚೈಸಿಗಳಾಗಿ ಹೊರಹೊಮ್ಮಿದವು. ಹೀಗೆ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳು ಘೋಷಣೆಯಾದ ನಂತರ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಕೂಡ ನಡೆಯಿತು. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ತಮಗೆ ಬೇಕಾದ ಗರಿಷ್ಠ 4 ಆಟಗಾರರನ್ನು ನಿಯಮಾನುಸಾರವಾಗಿ ಉಳಿಸಿಕೊಂಡು ಉಳಿದ ಆಟಗಾರರನ್ನು ಮೆಗಾ ಹರಾಜಿಗೆ ಕೈಬಿಡಬೇಕಾಗಿತ್ತು.

ಭಾರತ vs ದ. ಆಫ್ರಿಕಾ: ಮೂರನೇ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಶುಭ ಸುದ್ದಿ!ಭಾರತ vs ದ. ಆಫ್ರಿಕಾ: ಮೂರನೇ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಶುಭ ಸುದ್ದಿ!

ಹೀಗೆ ಅಸ್ತಿತ್ವದಲ್ಲಿರುವ ಎಲ್ಲಾ ತಂಡಗಳ ರಿಟೆನ್ಷನ್ ಪ್ರಕ್ರಿಯೆ ಮುಗಿದ ನಂತರ ವಿವಿಧ ತಂಡಗಳ ಹಲವಾರು ಪ್ರಮುಖ ಕ್ರಿಕೆಟಿಗರೇ ರಿಟೇನ್ ಆಗದೇ ಹೊರಬಿದ್ದರು. ಅದರಲ್ಲಿಯೂ ಪ್ರಮುಖವಾಗಿ ನಾಯಕತ್ವವನ್ನು ನಿರ್ವಹಿಸಬಲ್ಲ ಅರ್ಹತೆ ಹಾಗೂ ಸಾಮರ್ಥ್ಯಗಳಿರುವ ಬಲಿಷ್ಠ ಆಟಗಾರರು ರಿಟೈನ್ ಆಗದೇ ಇದ್ದದ್ದು ಅಚ್ಚರಿಗೆ ಕಾರಣವಾಯಿತು. ಕೆಲ ಆಟಗಾರರು ರಿಟೈನ್ ಆಗುವುದರಲ್ಲಿ ಆಸಕ್ತಿ ತೋರಿಸದೇ ಹಿಂದೆ ಸರಿದರೆ, ಮತ್ತೊಂದಷ್ಟು ಆಟಗಾರರನ್ನು ಫ್ರಾಂಚೈಸಿಗಳೇ ಕೈಬಿಟ್ಟವು. ಹೀಗೆ ರಿಟೈನ್ ಆಗದೇ ಹೊರಬಿದ್ದಿರುವ ನಾಯಕತ್ವ ನಿಭಾಯಿಸುವಂತಹ ಸಾಮರ್ಥ್ಯವಿರುವ ಆಟಗಾರರ ಮೇಲೆ ಇದೀಗ ನೂತನ ಫ್ರಾಂಚೈಸಿಗಳ ಕಣ್ಣು ಬಿದ್ದಿದ್ದು ತಮ್ಮ ತಂಡಗಳಿಗೆ ಸೆಳೆದುಕೊಳ್ಳುವ ಯತ್ನದಲ್ಲಿವೆ. ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳಿಗೆ ಮೆಗಾ ಹರಾಜು ಹೊರತುಪಡಿಸಿ ಹೊರಗಿನಿಂದಲೂ ಕೂಡ 3 ಆಟಗಾರರನ್ನು ಖರೀದಿಸಬಹುದಾದ ಆಯ್ಕೆಯಿದೆ. ಹೀಗಾಗಿ ನೂತನ ಫ್ರಾಂಚೈಸಿಗಳು ಬಲಿಷ್ಠ ಆಟಗಾರರನ್ನು ಈ ಮೂಲಕ ಖರೀದಿಸುವ ಸಾಧ್ಯತೆಗಳು ಹೆಚ್ಚಿವೆ.

ವಿಸಾ ರದ್ದು ವಿವಾದ: ಕಾನೂನು ಹೋರಾಟದಲ್ಲಿ ಗೆದ್ದ ಜೊಕೊವಿಕ್; ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ಅವಕಾಶವಿಸಾ ರದ್ದು ವಿವಾದ: ಕಾನೂನು ಹೋರಾಟದಲ್ಲಿ ಗೆದ್ದ ಜೊಕೊವಿಕ್; ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ಅವಕಾಶ

ಹೀಗೆ ಲಕ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳು ಯಾವ ಆಟಗಾರರನ್ನು ತಮ್ಮ ತಂಡಗಳಿಗೆ ಕರೆತರಲಿವೆ ಮತ್ತು ಯಾರಿಗೆ ನಾಯಕ ಸ್ಥಾನವನ್ನು ನೀಡಲಿವೆ ಎಂಬ ಕುತೂಹಲ ಹೆಚ್ಚಾಗಿತ್ತು. ಈ ಕುತೂಹಲಕ್ಕೆ ಇದೀಗ ವರದಿಯೊಂದು ಉತ್ತರವನ್ನು ನೀಡಿದ್ದು ಈ ಕೆಳಕಂಡಂತೆ ಮಾಹಿತಿಗಳನ್ನು ನೀಡಿದೆ.

ಲಕ್ನೋಗೆ ರಾಹುಲ್ ನಾಯಕ, ಅಹ್ಮದಾಬಾದ್ ತಂಡಕ್ಕೆ ಯಾರು?

ಲಕ್ನೋಗೆ ರಾಹುಲ್ ನಾಯಕ, ಅಹ್ಮದಾಬಾದ್ ತಂಡಕ್ಕೆ ಯಾರು?

ಈ ಹಿಂದೆ ಹೊರಬಿದ್ದಿದ್ದ ವರದಿಯೊಂದು ನೂತನ ಫ್ರಾಂಚೈಸಿ ಲಕ್ನೋಗೆ ಕೆಎಲ್ ರಾಹುಲ್ ನಾಯಕನಾಗಲಿದ್ದಾರೆ ಎಂಬುದನ್ನು ಬಿಚ್ಚಿಟ್ಟಿತ್ತು. ಅದೇ ರೀತಿ ಇದೀಗ ಮತ್ತೊಂದು ವರದಿ ಹೊರಬಿದ್ದಿದ್ದು ಅಹ್ಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕನಾಗಲಿದ್ದಾರೆ ಎನ್ನಲಾಗುತ್ತಿದೆ. ಹೌದು, ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳದೇ ಕೈಬಿಟ್ಟ ಆಟಗಾರ ಹಾರ್ದಿಕ್ ಪಾಂಡ್ಯನನ್ನು ಅಹ್ಮದಾಬಾದ್ ಫ್ರಾಂಚೈಸಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ನಾಯಕನ ಸ್ಥಾನವನ್ನು ನೀಡುವುದು ಬಹುತೇಕ ಖಚಿತವಾಗಿದೆ.

ಶ್ರೇಯಸ್ ಅಯ್ಯರ್ ಕೂಡ ನಾಯಕನ ರೇಸ್‌ನಲ್ಲಿ, ತಂಡಕ್ಕೆ ರಶೀದ್ ಖಾನ್ ಕೂಡ ಸೇರ್ಪಡೆ

ಶ್ರೇಯಸ್ ಅಯ್ಯರ್ ಕೂಡ ನಾಯಕನ ರೇಸ್‌ನಲ್ಲಿ, ತಂಡಕ್ಕೆ ರಶೀದ್ ಖಾನ್ ಕೂಡ ಸೇರ್ಪಡೆ

ಇನ್ನು ಅಹ್ಮದಾಬಾದ್ ಫ್ರಾಂಚೈಸಿಗೆ ಶ್ರೇಯಸ್ ಅಯ್ಯರ್ ನಾಯಕನಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಆದರೆ ಇದೀಗ ಬಂದಿರುವ ವರದಿಯ ಪ್ರಕಾರ ಶ್ರೇಯಸ್ ಅಯ್ಯರ್ ಬದಲು ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಳ್ಳಲಿರುವುದು ಖಚಿತವಾಗಿದ್ದು, ತಂಡಕ್ಕೆ ರಶೀದ್ ಖಾನ್ ಕೂಡ ಸೇರ್ಪಡೆಗೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ.

ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ

ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ

ಇನ್ನು ರಶೀದ್ ಖಾನ್ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯಿಂದ ರಿಟೈನ್ ಆಗದೇ ಹೊರಬಿದ್ದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಹಾಗೂ ಯುಜ್ವೇಂದ್ರ ಚಹಲ್ ಇಲ್ಲದೇ ಇರುವ ಕಾರಣ ರಶೀದ್ ಖಾನ್ ಉತ್ತಮ ಆಯ್ಕೆ ಎಂದು ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಆದರೆ ಇದೀಗ ರಶೀದ್ ಖಾನ್ ಅವರನ್ನು ಅಹ್ಮದಾಬಾದ್ ಫ್ರಾಂಚೈಸಿ ಖರೀದಿಸಿದೆ ಎಂದು ವರದಿಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಲ್ಲಿ ನಿರಾಸೆಯನ್ನು ಮೂಡಿಸಿದೆ.

Story first published: Tuesday, January 11, 2022, 9:40 [IST]
Other articles published on Jan 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X