ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮ ಬೌಲರ್‌ಗಳು ಇಂಗ್ಲೆಂಡ್‌ನಲ್ಲಿ ಪರದಾಡಲಿದ್ದಾರೆ ಎಂದ ಪಾಕ್ ವೇಗಿ

Junaid Khan Reckons Pakistan’s Inexperienced Bowlers Will Struggle In England

ಎಂಜಲು ಬಳಕೆಯನ್ನು ಕ್ರಿಕೆಟ್‌ನಲ್ಲಿ ನಿಷೇಧಿಸಿರುವುದು ಪಾಕಿಸ್ತಾನ ವೇಗಿಗಳಿಗೆ ಹಿನ್ನೆಡೆಯಾಗಲಿದೆ ಎಂದು ಸ್ವತಃ ಪಾಕಿಸ್ತಾನ ಕ್ರಿಕೆಟ್‌ನ ವೇಗದ ಬೌಲರ್ ಜುನೇದ್ ಖಾನ್ ಹೇಳಿದ್ದಾರೆ. ಎಂಜಲು ಬಳಕೆ ಮಾಡದೇ ಹೋದರೆ ಪಾಕ್‌ ವೇಗಿಗಳು ಇಂಗ್ಲೆಂಡ್‌ ಪಿಚ್‌ಗಳಲ್ಲಿ ಪರದಾಟ ನಡೆಸುವುದು ನಿಶ್ಚಿತ ಎಂದು ಅವಕಾಶ ವಂಚಿತ ಎಡಗೈ ವೇಗಿ ಜುನೇದ್‌ ಖಾನ್‌ ಅಭಿಪ್ರಾಯ ಪಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಿರುವ ಆಟಗಾರರ ತಂಡದಲ್ಲಿ ಜುನೇದ್ ಖಾನ್‌ ಅವಕಾಶ ವಂಚಿತರಾಗಿದ್ದಾರೆ. ಇಂಗ್ಲೆಂಡ್‌ ಪ್ರವಾಸ ಸಲುವಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರಕಟಿಸಿದ್ದ 29 ಆಟಗಾರರ ಪಟ್ಟಿಯಲ್ಲಿ 29 ವರ್ಷದ ವೇಗದ ಬೌಲರ್‌ ಜುನೇದ್‌ಗೆ ಸ್ಥಾನ ಲಭ್ಯವಾಗಿರಲಿಲ್ಲ.

ದೀರ್ಘ ಸಮಯದ ಬಳಿಕ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ರಾಜೀನಾಮೆ ಸ್ವೀಕೃತದೀರ್ಘ ಸಮಯದ ಬಳಿಕ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ರಾಜೀನಾಮೆ ಸ್ವೀಕೃತ

ಚೆಂಡಿಗೆ ಉಗುಳು ಹಚ್ಚುವುದು ನಿಷೇಧವಾಗಿರುವ ಕಾರಣ ಎರಡೂ ತಂಡಗಳು ರಿವರ್ಸ್‌ ಸ್ವಿಂಗ್‌ ತರುವಲ್ಲಿ ವಿಫಲವಾಗಲಿವೆ. ಆದರೆ, ಇಲ್ಲಿ ಪರದಾಟವು ನಮ್ಮ ಬೌಲರ್‌ಗಳಿಗೆ ಹೆಚ್ಚಿರುತ್ತದೆ. ಏಕೆಂದರೆ ಇಂಗ್ಲೆಂಡ್‌ ಬೌಲರ್‌ಗಳು ಸ್ವಿಂಗ್‌ ಬೌಲಿಂಗ್‌ ಅನ್ನು ಹೆಚ್ಚು ನೆಚ್ಚಿಕೊಂಡಿಲ್ಲ ಎಂದು ಜುನೇದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೇಮ್ಸ್‌ ಆಂಡರ್ಸನ್‌ ಹೊಸ ಚೆಂಡಿನಲ್ಲಿ ಅದ್ಭುತವಾಗಿ ಎಸೆಯುತ್ತಾರೆ. ಆದರೆ ಅವರ ರಿವರ್ಸ್‌ ಸ್ವಿಂಗ್‌ ಅಷ್ಟೇನು ಪರಿಣಾಮಕಾರಿಯಲ್ಲ. ಅದೇ ರೀತಿ ಸ್ಟುವರ್ಟ್‌ ಬ್ರಾಡ್ ಮತ್ತು ಜೋಫ್ರ ಆರ್ಚರ್‌ ಅವರ ರಿವರ್ಸ್‌ ಸ್ವಿಂಗ್‌ ಕೂಡ ಅಷ್ಟು ಹೇಳಿಕೊಳ್ಳುವಂತಿಲ್ಲ," ಎಂದು ಸ್ಥಳೀಯ ವೆಬ್‌ಸೈಟ್‌ ಒಂದಕ್ಕೆ ಜುನೇದ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ

ಪಾಕಿಸ್ತಾನ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದು, ಆಗಸ್ಟ್‌ನಲ್ಲಿ ತಲಾ ಮೂರು ಪಂದ್ಯಗಳ ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ ಸರಣಿಗಳನ್ನು ಆಡಲಿದೆ. ಈ ಸಲುವಾಗಿ ಈಗಾಗಲೇ ಮ್ಯಾಂಚೆಸ್ಟರ್‌ನಲ್ಲಿ ಬೀಡುಬಿಟ್ಟಿರುವ ಪಾಕ್‌ ಪಡೆ 14 ದಿನಗಳ ಕ್ವಾರಂಟೈನ್‌ ಬಳಿಕ ಕಠಿಣ ಅಭ್ಯಾಸದಲ್ಲಿ ತೊಡಗಲಿದೆ.

ಜೂನ್ 2021ಕ್ಕೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಮುಂದೂಡಿಕೆಜೂನ್ 2021ಕ್ಕೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಮುಂದೂಡಿಕೆ

ಕೊರೊನಾ ವೈರಸ್‌ ಕಾರಣ ಕ್ರಿಕೆಟ್‌ನಲ್ಲಿ ಈಗ ಹಲವು ನಿಯಮಗಳನ್ನು ತರಲಾಗಿದೆ. ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಆಟಗಾರು ಚೆಂಡಿಗೆ ಹೊಳಪು ತರಲು ಯಾವುದೇ ಕಾರಣಕ್ಕೂ ಉಗುಳನ್ನು ಬಳಸಬಾರದು ಎಂದು ನಿಷೇಧ ಹೇರಲಾಗಿದೆ.

Story first published: Friday, July 10, 2020, 9:29 [IST]
Other articles published on Jul 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X