ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ 'ಎ' ತಂಡದ ವಿರುದ್ಧ ಆಡಲಿದ್ದಾರೆ ಅತಿರಥ ಮಹಾರಥರು!

Key players of england to play against India A

ವೊರ್ಸೆಸ್ಟರ್, ಜುಲೈ 8: ಭಾರತ 'ಎ' ತಂಡದ ವಿರುದ್ಧ ನಡೆಯಲಿರುವ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಲಯನ್ಸ್ ತಂಡದಲ್ಲಿ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರು ಆಡಲಿದ್ದಾರೆ.

ಭಾರತದ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ತಯಾರಿ ನಡೆಸಲು ಉದ್ದೇಶಿಸಿರುವ ಇಂಗ್ಲೆಂಡ್, ಲಯನ್ಸ್ ತಂಡದಲ್ಲಿ ಆಡುವ ಮೂಲಕ ಭಾರತದ ಸ್ಪಿನ್ನರ್‌ಗಳನ್ನು ಎದುರಿಸುವ ಅಭ್ಯಾಸಕ್ಕೆ ಅಣಿಯಾಗಲಿದ್ದಾರೆ.

 ಟಿ20 ಕ್ರಿಕೆಟ್‌ಗಾಗಿಯೇ ಬರಲಿದೆ ವಿಶಿಷ್ಟ ಕೂಕಬುರ್ರಾ ಚೆಂಡು ಟಿ20 ಕ್ರಿಕೆಟ್‌ಗಾಗಿಯೇ ಬರಲಿದೆ ವಿಶಿಷ್ಟ ಕೂಕಬುರ್ರಾ ಚೆಂಡು

ಜುಲೈ 16ರಿಂದ ಆರಂಭವಾಗಲಿರುವ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಪ್ರಮುಖ ಆಟಗಾರರಾದ ಅಲೆಸ್ಟರ್ ಕುಕ್, ಡೇವಿಡ್ ಮಲನ್, ಕ್ರಿಸ್ ವೋಕ್ಸ್, ಸ್ಯಾಮ್ ಕುರ್ರನ್, ಡಾಮ್ ಬೆಸ್ ಮತ್ತು ಜಾಕ್ ಲೀಚ್ ಆಡಲಿದ್ದಾರೆ.

ಭಾರತದ ವಿರುದ್ಧದ ಕ್ರಿಕೆಟ್ ಟೆಸ್ಟ್ ಸರಣಿಯು ಆಗಸ್ಟ್ 1 ರಿಂದ ಆರಂಭವಾಗಲಿದೆ.

ಪಂದ್ಯ ನೀರಸ ಡ್ರಾನಲ್ಲಿ ಅಂತ್ಯ:
ಬೆಕನ್‌ಹ್ಯಾಮ್‌ನಲ್ಲಿ ನಡೆದ ಭಾರತ ಎ ಮತ್ತು ವೆಸ್ಟ್ ಇಂಡೀಸ್ ಎ ತಂಡಗಳ ನಡುವಣ ಅನಧಿಕೃತ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ.

ಸತತವಾಗಿ ವಿಕೆಟ್ ಕಳೆದುಕೊಂಡು ಸೋಲುವ ಹಂತಕ್ಕೆ ತಲುಪಿದ್ದ ವೆಸ್ಟ್ ಇಂಡೀಸ್‌ ಕೊನೆಯ ಹಂತದಲ್ಲಿ ಮರು ಹೋರಾಟ ನಡೆಸಿ ಡ್ರಾ ಮಾಡಿಕೊಳ್ಳುವ ಮೂಲಕ ಪಂದ್ಯವನ್ನು ಉಳಿಸಿಕೊಂಡಿತು.

ಮೂರನೇ ದಿನದ ಕೊನೆಯಲ್ಲಿ 4 ವಿಕೆಟ್ ಕಳೆದುಕೊಂಡು 536 ರನ್ ಗಳಿಸಿದ್ದ ಭಾರತ, 6 ವಿಕೆಟ್‌ ನಷ್ಟಕ್ಕೆ 609 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ವಿಡಿಯೋ: ಧೋನಿ- ಕುಲದೀಪ್ ಕೇಕ್ ಮುಖಕ್ಕೆ ಮೆತ್ತುವ ಆಟವಿಡಿಯೋ: ಧೋನಿ- ಕುಲದೀಪ್ ಕೇಕ್ ಮುಖಕ್ಕೆ ಮೆತ್ತುವ ಆಟ

ಹಿಂದಿನ ದಿನ 77 ರನ್‌ ಗಳಿಸಿದ್ದ ಕರುಣ್ ನಾಯರ್, 93 ರನ್‌ ಗಳಿಸಿ ಔಟಾದರು. ಕೊನೆಯಲ್ಲಿ ಶ್ರೀಕರ್ ಭರತ್ ಬಿರುಸಿನ 33 ರನ್ ಗಳಿಸಿದರು.

360 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್, ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದರತ್ತ ಗಮನ ಹರಿಸಿತು. ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಜಾನ್ ಕ್ಯಾಂಪ್‌ಬೆಲ್, ಜೆರ್ಮೈನ್ ಬ್ಲಾಕ್‌ವುಡ್ ನೆರವಾದರು.

ಬಳಿಕ ಸುನಿಲ್ ಆಂಬ್ರಿಸ್ ಹಾಗೂ ರಹ್ಕೀಮ್ ಕಾರ್ನ್‌ವಾಲ್ ಭಾರತದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಆದರೆ, ವೆಸ್ಟ್ ಇಂಡೀಸ್ ತಂಡದ ಪಾಲಿಗೆ ಹೀರೋ ಆದವರು ರೇಮನ್ ರೀಫರ್.

74 ಎಸೆತಗಳನ್ನು ತಾಳ್ಮೆಯಿಂದ ಎದುರಿಸಿದ ರೀಫರ್ ಗಳಿಸಿದ್ದು 11 ರನ್ ಮಾತ್ರ. ಇನ್ನಿಂಗ್ಸ್ ಕೊನೆವರೆಗೂ ವಿಕೆಟ್ ಒಪ್ಪಿಸದೆ ಅವರು ಭಾರತ ಬೌಲರ್‌ಗಳನ್ನು ಗೋಳುಹೊಯ್ದುಕೊಂಡರು.

ನಾಯಕ ಕರುಣ್ ನಾಯರ್ ಪದೇ ಪದೇ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿದರೂ ಪ್ರಯೋಜನವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್
ಭಾರತ: 133 ಮತ್ತು 609/6 ಡಿಕ್ಲೇರ್. ಕರುಣ್ ನಾಯರ್ 93, ಶ್ರೀಕರ್ ಭರತ್ 33. ಶೆಮನ್ ಲೆವಿಸ್ 130/4, ಡೆವೊನ್ ಥಾಮಸ್ 60/1

ವೆಸ್ಟ್ ಇಂಡೀಸ್: 383 ಮತ್ತು 245/7 (76) ಜಾನ್ ಕ್ಯಾಂಪ್‌ಬೆಲ್ 44, ಜರ್ಮೈನ್ ಬ್ಲಾಕ್‌ವುಡ್ 61, ರಹ್ಕೀಮ್ ಕಾರ್ನ್‌ವಾಲ್ 40. ನವದೀಪ್ ಸೈನಿ 42/1, ಜಯಂತ್ ಯಾದವ್ 73/2. ಫಲಿತಾಶ: ಪಂದ್ಯ ಡ್ರಾ.

Story first published: Sunday, July 8, 2018, 15:47 [IST]
Other articles published on Jul 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X