ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್: ರಾಹುಲ್, ಧವನ್ ಶ್ರೇಯಾಂಕದಲ್ಲಿ ಏರಿಕೆ

ಐಸಿಸಿ ಟೆಸ್ಟ್ ಬ್ಯಾಟ್ಸ್ ಮನ್ ಗಳ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ಕೆ.ಎಲ್. ರಾಹುಲ್. ಸೋಮವಾರ ಬಿಡುಗಡೆ ಹೊಂದಿರುವ ಹೊಸ ಪಟ್ಟಿಯಲ್ಲಿ 2 ಸ್ಥಾನಗಳ ಏರಿಕೆ. ಆರಂಭಿಕ ಆಟಗಾರ ಶಿಖರ್ ಧವನ್ 10 ಸ್ಥಾನಗಳ ಏರಿಕೆ, 28 ಸ್ಥಾನಕ್ಕೆ ಬಡ್ತಿ.

ದುಬೈ, ಆಗಸ್ಟ್ 15: ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ, ಕರ್ನಾಟಕದ ಕೆ.ಎಲ್. ರಾಹುಲ್ ಹಾಗೂ ಶಿಖರ್ ಧವನ್, ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್ ಮನ್ ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ತಮ್ಮ ವೃತ್ತಿಜೀವನದ ಶ್ರೇಷ್ಠ ಮಟ್ಟದ ಶ್ರೇಯಾಂಕ ಗಳಿಸಿದ್ದಾರೆ.

ಸೋಮವಾರ ಅಂತ್ಯಗೊಂಡಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದ ಶಿಖರ್ ಧವನ್ ಅವರು ಈ ಸಾಧನೆಯಿಂದಾಗಿ, ಹೊಸ ಶ್ರೇಯಾಂಕ ಪಟ್ಟಿಯ 10 ಸ್ಥಾನಗಳ ಏರಿಕೆ ಕಂಡಿದ್ದು, ಇದೀಗ 28ನೇ ಸ್ಥಾನಕ್ಕೇರಿದ್ದಾರೆ. ಇದು, ಧವನ್ ಅವರು ಈವರೆಗಿನ ವೃತ್ತಿಜೀವನದಲ್ಲಿ ಕಂಡ ಉತ್ತಮ ಸಾಧನೆಯಾಗಿದೆ.

ಶ್ರೀಲಂಕಾದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜ ಹಾರಿಸಿದ ಟೀಂ ಇಂಡಿಯಾಶ್ರೀಲಂಕಾದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜ ಹಾರಿಸಿದ ಟೀಂ ಇಂಡಿಯಾ

KL Rahul, Dhawan reaches career-best in ICC rankings

ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಧವನ್ ಉತ್ತಮ ಪ್ರದರ್ಶನ ತೋರಿ, ಸರಣಿಯಲ್ಲಿ ಒಟ್ಟಾರೆ 358 ರನ್ ಪೇರಿಸಿದ್ದರಲ್ಲದೆ, ಸರಣಿ ಶ್ರೇಷ್ಠ ಗೌರವವನ್ನೂ ಪಡೆದಿದ್ದರು.

ಇನ್ನು, ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 85 ರನ್ ಹಾಗೂ ಶಿಖರ್ ಧವನ್ ಜತೆಗೂಡಿ ಮೊದಲ ವಿಕೆಟ್ ಗೆ 188 ರನ್ ಕಲೆ ಹಾಕಿದ್ದ ರಾಹುಲ್, ಹೊಸ ಪಟ್ಟಿಯಲ್ಲಿ ಎರಡು ಸ್ಥಾನಗಳ ಏರಿಕೆ ಕಂಡು, 9ನೇ ಸ್ಥಾನ ಗಳಿಸಿದ್ದಾರೆ.

85 ವರ್ಷಗಳ ನಂತರ ವಿದೇಶದಲ್ಲಿ ಭಾರತಕ್ಕೆ ಸಂಪೂರ್ಣ ಸರಣಿ ಜಯ85 ವರ್ಷಗಳ ನಂತರ ವಿದೇಶದಲ್ಲಿ ಭಾರತಕ್ಕೆ ಸಂಪೂರ್ಣ ಸರಣಿ ಜಯ

ಇದು ಅವರ ವೃತ್ತಿಜೀವನದ ಅತಿ ಉನ್ನತ ಶ್ರೇಯಾಂಕ. ಆದರೆ, ಕಳೆದ ತಿಂಗಳೂ ಅವರು ಒಮ್ಮೆ 9ನೇ ಸ್ಥಾನಕ್ಕೆ ಏರಿದ್ದರು. ಈಗ 2ನೇ ಬಾರಿಗೆ ಆ ಸ್ಥಾನ ತಲುಪಿದ್ದಾರೆ. ಆದರೆ, ಅವರು ಗಳಿಸಿರುವ 761 ರೇಟಿಂಗ್ ಅಂಕಗಳು ಅವರು ಈವರೆಗಿನ ಶ್ರೇಷ್ಠ ಸಾಧನೆಯಾಗಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X