ಭಾರತ-ಪಾಕಿಸ್ತಾನದ ಈ ಇಬ್ಬರು ಆಟಗಾರರ ಮುಖಾಮುಖಿಗೆ ಕಾತರಿಸುತ್ತಿದ್ದೇನೆ: ಸಲ್ಮಾನ್ ಬಟ್

ಮುಂದಿನ ಎರಡು ತಿಂಗಳು ಟಿ20 ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಹಬ್ಬದ ವಾತಾವರಣ. ಐಪಿಎಲ್ ಹಾಗೂ ಟಿ20 ವಿಶ್ವಕಪ್ ಪಂದ್ಯಗಳು ಸಾಲುಸಾಲಾಗಿ ಕ್ರಿಕೆಟ್ ಪ್ರೇಮಿಗಳನ್ನು ಹುಚ್ಚೆಬ್ಬಿಸಲಿದೆ. ಅದರಲ್ಲೂ ಈ ಬಾರಿಯ ಟಿ20 ವಿಶ್ವಕಪ್ ಸುಮಾರು ಐದು ವರ್ಷಗಳ ನಂತರ ನಡೆಯುತ್ತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಯಾವೆಲ್ಲಾ ಆಟಗಾರರು ಯಾವ ರೀತಿಯ ಪ್ರದರ್ಶನ ನೀಡಬಹುದು? ಯಾವ ತಂಡದ ಪ್ರದರ್ಶನ ಹೇಗಿರಬಹುದು ಎಂಬ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಕುತೂಹಲ ಹಾಕಿ ಲೆಕ್ಕಾಚಾರಗಳನ್ನು ಮಾಡುತ್ತಿರುತ್ತಾರೆ.

ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟ್ ಲೋಕದ ಪ್ರಸಕ್ತ ವಿಚಾರಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿಕ್ರಿಯಿಸುತ್ತಿರುವ ಸಲ್ಮಾನ್ ಬಟ್ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಕುತೂಹಲ ಮೂಡಿಸಿರುವ ಇಬ್ಬರು ಆಟಗಾರರ ಮುಖಾಮುಖಿಯ ಬಗ್ಗೆ ಉತ್ಸುಕತೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಆಟಗಾರರ ಮುಖಾಮುಖಿಯಾಗುತ್ತಿರುವುದನ್ನು ನೊಡಲು ಕಾತುರನಾಗಿರುವುದಾಗಿ ಹೇಳಿದ್ದಾರೆ ಸಲ್ಮಾನ್ ಬಟ್.

ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್ಹಳೆ ಯುಜಿ ವಾಪಸ್ಸಾಗ್ತಾರೆ: ಉತ್ತಮ ಪ್ರದರ್ಶನದ ಭರವಸೆಯಿತ್ತ ಚಾಹಲ್

ಭಾರತ ಹಾಗೂ ಪಾಕಿಸ್ತಾನ ತಂಡದ ಈ ಆಟಗಾರರ ಮುಖಾಮುಖಿ: ಸಲ್ಮಾನ್ ಬಟ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುವುದನ್ನು ನೋಡಲು ಕಾಯುತ್ತಿರುವುದು ಭಾರತ ಹಾಗೂ ಪಾಕಿಸ್ತಾನದ ಇಬ್ಬರು ಶ್ರೇಷ್ಠ ಆಟಗಾರರನ್ನು. ಟೀಮ್ ಇಂಡಿಯಾದ ವೇಗದ ಬೌಲರ್ ಆಗಿ ಅದ್ಭುತ ಪ್ರದರ್ಶನ ನೀಡುತ್ತಾ ಮಿಂಚುತ್ತಿರುವ ಜಸ್ಪ್ರೀತ್ ಬೂಮ್ರಾ ಹಾಗೂ ಪಾಕಿಸ್ತಾಮ ತಂಡದ ನಾಯಕ ಬಾಬರ್ ಅಜಂ ನಡುವಿನ ಕದನವನ್ನು ನೀಡಲು ಎದುರಿ ನೋಡುತ್ತಿದ್ದೇನೆ ಎಂದಿದ್ದಾರೆ ಸಲ್ಮಾನ್ ಬಟ್. ಇನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದರೆ ಈ ಎದುರಾಳಿಗಳ ಮುಖಾಮುಖಿಯನ್ನು ಆರಂಭದಲ್ಲಿಯೇ ನೀಡಬಹುದು ಎಂದು ಕೂಡ ಸಲ್ಮಾನ್ ಬಟ್ ವಿವರಿಸಿದ್ದಾರೆ.

ಇಬ್ಬರೂ ವಿಶ್ವದರ್ಜೆಯ ಆಟಗಾರರು: "ಇದು ಅತ್ಯಂತ ಕಠಿಣವಾದ ಮುಖಾಮುಖಿಯಾಗಿರಲಿದೆ. ಬ್ಯಾಟ್ಸ್‌ಮನ್ ಹಾಗೂ ಬೌಲರ್ ಇಬ್ಬರು ಕೂಡ ವಿಶ್ವದರ್ಜೆಯ ಆಟಗಾರರು. ಇಬ್ಬರು ಕೂಡ ಅನುಭವಿಗಳಾಗಿದ್ದಾರೆ. ಬೂಮ್ರಾ ಬಾಬರ್‌ಗಿಂತ ಸ್ವಲ್ಪ ಹೆಚ್ಚಿನ ಅನುಭವ ಹೊಂದಿದ್ದಾರೆ. ಬಾಬರ್ ಕೂಡ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಆತ ಈಗ ತಂಡದ ನಾಯಕನೂ ಹೌದು. ಹೀಗಾಗಿ ಆತ ಇತರ ಆಟಗಾರರಿಗೆ ದಾರಿಯನ್ನು ಸುಗಮಗೊಳಿಸಬೇಕಿದೆ" ಎಂದಿದ್ದಾರೆ ಸಲ್ಮಾನ್ ಬಟ್.

ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!ಆರ್‌ಸಿಬಿ ಸೇರಿ ಐಪಿಎಲ್ ತಂಡಗಳಿಗೆ ಪ್ರಮುಖ 5 ಸಲಹೆಗಳಿತ್ತ ಆಕಾಶ್ ಚೋಪ್ರಾ!

ಪಾಕಿಸ್ತಾನ ವಿರುದ್ಧ ಭಾರತ ಸೋತಿಲ್ಲ: ಇನ್ನು ಟಿ20 ವಿಶ್ವಕಪ್ ಅಥವಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈವರೆಗೆ ಸೋಲು ಕಂಡೇ ಇಲ್ಲ. ಹಾಗಿದ್ದರು ಕೂಡ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಸಲ್ಮಾನ್ ಬಟ್ ವ್ಯಕ್ತಪಡಿಸಿದ್ದಾರೆ. "ಪಾಕಿಸ್ತಾನದ ವೇಗದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಲೇಬೇಕಿದೆ. ನಾವು ವೇಗದ ಬೌಲಿಂಗ್ ವಿಭಾಗದ ಮೇಲೆ ಹೆಚ್ಚು ಅವಲಂಬಿತವಾಗಿದ್ದೇವೆ. ಶಾಹಿನ್ ಅಫ್ರಿದಿ, ಹಸನ್ ಅಲಿ ಅಬರಂತಾ ಆಟಗಾರರಿದ್ದು ಮೊಹಮ್ಮದ್ ವಾಸಿಮ್ ಕೂಡ ಕಣಕ್ಕಿಳಿಯಬಹುದು. ಹೀಗಾಗಿ ವೇಗಿಗಳು ಉತ್ತಮ ಪ್ರದರ್ಶನ ನೀಡಿದರೆ ಪಾಕಿಸ್ತಾನದ ತಂಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಆದರೆ ಪಾಕಿಸ್ತಾನ ತಂಡದ ವೇಗಿಗಳಿಂದ ಉತ್ತಮ ಪ್ರದರ್ಶನ ಬಾರದಿದ್ದಲ್ಲಿ ತಂಡಕ್ಕೆ ಗೆಲುವು ತುಂಬಾ ಕಠಿಣವಾಗಿರಲಿದೆ. ಹೀಗಾಗಿ ಅವರು ಈ ಸವಾಲನ್ನು ದಿಡ್ಡವಾಗಿ ಎದುರಿಸಲು ಮುಂದೆ ಬಂದು ನಿಲ್ಲಬೇಕಾಗಿದೆ" ಎಂದು ಸಲ್ಮಾನ್ ಬಟ್ ಪಾಕಿಸ್ತಾನ ತಂಡದ ವೇಗದ ಬೌಲಿಂಗ್ ವಿಭಾಗದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್: ಟೂರ್ನಿಗೂ ಮುನ್ನ 10 ಸಿಕ್ಸರ್, ಭರ್ಜರಿ ಶತಕ ಚಚ್ಚಿದ ಎಬಿಡಿ, ಪಂದ್ಯದ ಹೈಲೈಟ್ಸ್ ಇಲ್ಲಿದೆಐಪಿಎಲ್: ಟೂರ್ನಿಗೂ ಮುನ್ನ 10 ಸಿಕ್ಸರ್, ಭರ್ಜರಿ ಶತಕ ಚಚ್ಚಿದ ಎಬಿಡಿ, ಪಂದ್ಯದ ಹೈಲೈಟ್ಸ್ ಇಲ್ಲಿದೆ

ಗೇಲ್ ಸ್ಪೋಟಕ ಹೊಡೆತ ತಾಳಲಾರದೆ ಬ್ಯಾಟ್ ಎರಡು ತುಂಡಾದ ವಿಡಿಯೋ ವೈರಲ್ | Oneindia Kannada

ಭಾರತ ಹಾಗೂ ಪಾಕಿಸ್ತಾನ ತಮಡಗಳು ಈ ಭಾರಿಯ ವಿಶ್ವಕಪ್‌ನಲ್ಲಿ ಅಕ್ಟೋಬರ್ 24ರಂದು ಮುಖಾಮುಖಿಯಾಗಲಿದೆ. ಎರಡು ತಂಡಗಳು ಕೂಡ ಸೂಪರ್ 12 ಹಂತದಲ್ಲಿ ಒಂದೇ ಗುಂಪಿನಲ್ಲಿದ್ದು ತಮ್ಮ ಮೊದಲ ಪಂದ್ಯದಲ್ಲಿಯೇ ಎದುರುಬದುರಾಗಲಿದೆ. ಹೀಗಾಗಿ ಈ ಕದನ ಸಾಕಷ್ಟು ಕುತೂಹಲ ಮೂಡಿಸಿದೆ. ಕಳೆದ ಏಕದದಿನ ವಿಶ್ವಕಪ್‌ನ ಲೀಗ್ ಹಂತದಲಲ್ಇ ಮುಖಾಮುಖಿಯಾದ ಬಳಿಕ ಇದೇ ಮೊದಲ ಬಾರಿಗೆ ಈ ಎರಡು ತಮಡಗಳು ಮತ್ತೊಮ್ಮೆ ಕಣಕ್ಕಿಳಿಯುತ್ತಿದೆ. ಹೀಗಾಗಿ ಈ ಪಂದ್ಯದ ಮೇಲೆ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, September 16, 2021, 15:48 [IST]
Other articles published on Sep 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X