ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೊಂದು ಕೊರೊನಾ ವೈರಸ್ ಪರೀಕ್ಷೆಯಲ್ಲೂ ಇಂಗ್ಲೆಂಡ್ ಮತ್ತು ಪಾಕ್ ಕ್ರಿಕೆಟಿಗರು ಪಾಸ್

Pakistan And England Cricketers Pass Latest Virus Tests

ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಮತ್ತೊಂದು ಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡ ಕಳೆದ ಭಾನುವಾರ (ಜೂನ್ 28) ಇಂಗ್ಲೆಂಡ್‌ಗೆ ಬಂದಿಳಿದಿತ್ತು. 20 ಆಟಗಾರರು ಮತ್ತು 11 ಸಿಬ್ಬಂದಿಗಳ ಕೊರೊನಾ ವೈರಸ್ ಪರೀಕ್ಷೆಯನ್ನು ಬಳಿಕ ನಡೆಸಲಾಗಿದ್ದು ಎಲ್ಲರ ವರದಿಯೂ ನೆಗೆಟಿವ್ ಬಂದಿದೆ.

ಈ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಾಹಿತಿಯನ್ನು ನೀಡಿದೆ. ಇದರ ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧವಾಗುತ್ತಿರುವ ಇಂಗ್ಲೆಂಡ್ ಆಟಗಾರರ ಮೂರನೇ ಸುತ್ತಿನ ಕೊರೊನಾ ವೈರಸ್ ಪರೀಕ್ಷೆ ನಡೆಸಿದ್ದು ಎಲ್ಲಾ ಆಟಗಾರರ ವರದಿ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದೆ.

ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದ್ದು ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್ ಸ್ಥಗಿತವಾದ ಬಳಿಕ ಆರಂಭವಾಗುತ್ತಿರುವ ಮೊದಲ ಸರಣಿ ಇದಾಗಿದೆ. ಮುಂದಿನವಾರ ಸೌಥಾಂಪ್ಟನ್‌ನಲ್ಲಿ ಈ ಸರಣಿ ಆರಂಭವಾಗಲಿದ್ದು ಪ್ರೇಕ್ಷಕರಿಲ್ಲದೆ, ಜೀವ ಸಂರಕ್ಷಕ ವಾತಾವರಣದಲ್ಲಿ ಸರಣಿ ಆಯೋಜನೆಗೆ ಸಿದ್ಧತೆಗಳು ನಡೆದಿದೆ.

ಮತ್ತೊಂದೆಡೆ ಪಾಕಿಸ್ತಾನ ಕ್ರಿಕೆಟ್ ತಂಡ ಆಗಸ್ಟ್‌ನಲ್ಲಿ ನಡೆಯಲಿರುವ ಸರಣಿಗಾಗಿ ಇಂಗ್ಲೆಂಡ್‌ಗೆ ಬಂದಿಳಿದಿದೆ. ಪಾಕಿಸ್ತಾನದ ಆಟಗಾರರು ಮೊದಲಿಗೆ ಹದಿನಾಲ್ಕು ದಿನಗಳ ಕಡ್ಡಾಯ ಕ್ವಾರಂಟೈನ್‌ ಪೂರೈಸಲಿದ್ದಾರೆ. ಈ ಸಂದರ್ಭದಲ್ಲಿ ಅಭ್ಯಾಸಕ್ಕೆ ಅವಕಾಶವನ್ನು ನೀಡಲಾಗಿದೆ.

ರೋಹಿತ್ ಶರ್ಮಾ ಬಗ್ಗೆ ಬಹುದೊಡ್ಡ ನಿರೀಕ್ಷೆ ವ್ಯಕ್ತಪಡಿಸಿದ ಕ್ರಿಸ್ ಶ್ರೀಕಾಂತ್ರೋಹಿತ್ ಶರ್ಮಾ ಬಗ್ಗೆ ಬಹುದೊಡ್ಡ ನಿರೀಕ್ಷೆ ವ್ಯಕ್ತಪಡಿಸಿದ ಕ್ರಿಸ್ ಶ್ರೀಕಾಂತ್

ಇನ್ನು ಪಾಕಿಸ್ತಾನದಲ್ಲಿ ಆಟಗಾರರಿಗೆ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಮೊದಲಿಗೆ ಪಾಸಿಟಿವ್ ವರದಿ ಬಂದಿದ್ದ 10 ಆಟಗಾರರ ಪೈಕಿ 6 ಆಟಗಾರರ ಎರಡನೇ ವರದಿಯಲ್ಲಿ ನೆಗೆಟಿವ್ ಬಂದಿದೆ. ಆ ಆಟಗಾರರಿಗೆ ಇಂಗ್ಲೆಂಡ್‌ಗೆ ಪ್ರಯಾಣಿಸಲು ಪಿಸಿಬಿ ಗ್ರೀನ್ ಸಿಗ್ನಲ್ ನೀಡಿದೆ. ಇನ್ನೊಂದು ಬಾರಿ ಪರಿಕ್ಷೆ ನಡೆಸಿದ ಬಳಿಕ ಈ ಆಟಗಾರರು ಇಂಗ್ಲೆಂಡ್‌ನಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ.

Story first published: Wednesday, July 1, 2020, 10:14 [IST]
Other articles published on Jul 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X