ಅಪ್ಪನಂತೆ ಮಗ, ದ್ರಾವಿಡ್ ಪುತ್ರ ಸಮಿತ್ ಸೂಪರ್ ಬ್ಯಾಟಿಂಗ್

Posted By:

ಬೆಂಗಳೂರು, ನವೆಂಬರ್ 30: ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಅವರು ಕೂಡಾ ಕ್ರಿಕೆಟ್ ಅಂಗಳದಲ್ಲಿ ಹೆಸರು ಮಾಡುತ್ತಿದ್ದಾರೆ. ಆದರೆ, ಅಪ್ಪನಿಗಿಂತ ಹೆಚ್ಚು ವೇಗವಾಗಿ ರನ್ ಗಳಿಸುತ್ತಿದ್ದು, ಎಬಿಡಿ ವಿಲಿಯರ್ಸ್ ಮಾದರಿ ಆಡುವುದು ನನಗಿಷ್ಟ ಎಂದು ಸಮಿತ್ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಮಗ ಸಮಿತ್ ಸಕತ್ ಬ್ಯಾಟಿಂಗ್

ಬೆಂಗಳೂರಿನ ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಸ್ಕೂಲ್ ಹಾಗೂ ಬೆಂಗಳೂರು ಯುನೈಟೆಡ್ ಕ್ಲಬ್ ಪರ ಆಡುವ ಸಮಿತ್ ಅವರು ಅಂಡರ್‌ 12 ಟೂರ್ನಮೆಂಟ್ ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ.ಫ್ರಾಂಕ್‌ ಅಂಟೋನಿ ಶಾಲೆಯ ವಿರುದ್ಧ ನಡೆದ ಪಂದ್ಯದಲ್ಲಿ 12 ಬೌಂಡರಿಗಳಿದ್ದ ಆಕರ್ಷಕ 123ರನ್ ಚೆಚ್ಚಿದ್ದರು.

Rahul Dravid’s Son Samit Shines

ಸಮಿತ್ ಶತಕ ಹಾಗೂ ನಾಲ್ಕನೆ ವಿಕೆಟ್ ಗೆ ಪ್ರತ್ಯುಷ್ ಜತೆ ಸಾಧಿಸಿದ 213 ರನ್ ಜೊತೆಯಾಟದ ನೆರವಿನಿಂದ ಮಲ್ಯ ಅದಿತಿ ಶಾಲೆ ಬೃಹತ್ ಗೆಲುವು ಸಾಧಿಸಿತು. ಲಯೋಲಾ ಶಾಲಾ ಮೈದಾನದಲ್ಲಿ ನಡೆದ ಪಂದ್ಯ ಇದಾಗಿದೆ.

ಈ ಹಿಂದೆ ಅಂಡರ್ 14 ಕ್ಲಬ್ ಕ್ರಿಕೆಟ್ ಟೂರ್ನಮೆಂಟ್ ನಲ್ಲೂ ಬೆಂಗಳೂರು ಯುನೈಟೆಡ್ ಕ್ಲಬ್ ಪರ ಆಡಿ ಶತಕ ಗಳಿಸಿದ್ದರು. 2015ರಲ್ಲಿ 10 ವರ್ಷ ವಯಸ್ಸಿನಲ್ಲಿ ಅಂಡರ್ 12 ಟೂರ್ನಮೆಂಟ್ ನಲ್ಲಿ 3 ಅರ್ಧಶತಕ ಸಿಡಿಸಿದ್ದರು.

ಒಂದೆಡೆ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಅವರು ವೇಗದ ಬೌಲರ್ ಆಗಿ ಮಿಂಚುತ್ತಿದ್ದರೆ, ಇನ್ನೊಂದೆಡೆ ದ್ರಾವಿಡ್ ಅವರ ಪುತ್ರ ಸಮಿತ್ ಅವರು ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

Story first published: Thursday, November 30, 2017, 13:20 [IST]
Other articles published on Nov 30, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ