ಆಸ್ಟ್ರೇಲಿಯಾ ವಿರುದ್ಧ ಮೊದಲ 3 ಪಂದ್ಯಗಳಿಗೆ ಶಿಖರ್ ಧವನ್ ಅಲಭ್ಯ

Posted By:

ನವದೆಹಲಿ, ಸೆಪ್ಟೆಂಬರ್ 15 : ಇದೇ ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ 3 ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್ ಮನ್‌ ಶಿಖರ್ ಧವನ್ ಆಡುತ್ತಿಲ್ಲವೆಂದು ಬಿಸಿಸಿಐ ಹೇಳಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ಏಕದಿನ ಹಾಗೂ ಟಿ20 ಸರಣಿ ವೇಳಾಪಟ್ಟಿ

ಶಿಖರ್ ಧವನ್ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ಆರೈಕೆಗಾಗಿ ಮೂರು ಪಂದ್ಯಗಳಿಂದ ಹೊರಗುಳಿಯಲು ಅನುಮತಿ ನೀಡಬೇಕೆಂದು ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಬಿಸಿಸಿಐ ಸಮ್ಮತಿಸಿದ್ದು, ಧವನ್ ಬದಲಿಗೆ ಬೇರೆ ಆಟಗಾರನನ್ನು ಆಯ್ಕೆ ಮಾಡಿಲ್ಲವೆಂದು ಬಿಸಿಸಿಐ ತಿಳಿಸಿದೆ.

Shikhar Dhawan released for first three ODIs against Australia

ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಧವನ್ ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ಏಕದಿನ ಸರಣಿಯಲ್ಲಿ ಅಂತಿಮ ಏಕದಿನ ಪಂದ್ಯ ಹಾಗೂ ಏಕೈಕ ಟಿ- 20 ಪಂದ್ಯದಲ್ಲಿ ಆಡದೆ ಭಾರತಕ್ಕೆ ವಾಪಸಾಗಿದ್ದರು.

ಆಸ್ಟ್ರೇಲಿಯಾ ವಿರುದ್ಧದ 3 ಏಕದಿನ ಪಂದ್ಯಗಳಿಗೆ ಭಾರತ ತಂಡ ಪ್ರಕಟ

ಸೆ.17 (ಭಾನುವಾರ) ಭಾರತ- ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ

ಭಾರತ ತಂಡ: ವಿರಾಟ್‌ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಕೆ.ಎಲ್‌. ರಾಹುಲ್‌, ಮನೀಷ್ ಪಾಂಡೆ, ಎಂ.ಎಸ್‌. ದೋನಿ, ರಹಾನೆ, ಕೇದಾರ್‌ ಜಾದವ್, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಜಾಹಲ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್‌, ಉಮೇಶ್‌ ಯಾದವ್‌, ಮೊಹಮ್ಮದ್ ಶಮಿ

Story first published: Friday, September 15, 2017, 13:46 [IST]
Other articles published on Sep 15, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ